'ಪಾಕಿಸ್ತಾನ ಜಿಂದಭಾಗ್': ಬಿರಿಯಾನಿ ತಿಂದು, ಸುರಕ್ಷಿತವಾಗಿ ತವರಿಗೆ ಮರಳಿ; ಪಾಕ್ ತಂಡವನ್ನು ಟ್ರೋಲ್ ಮಾಡಿದ ಸೆಹ್ವಾಗ್!
ಗುರುವಾರ, ನವೆಂಬರ್ 9ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡ ಐದು ವಿಕೆಟ್‌ಗಳ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನ ತಂಡದ ಸೆಮಿಫೈನಲ್ ಕನಸು ನುಚ್ಚುನೂರಾಗಿದೆ.
ಶ್ರೀಲಂಕಾ ತಂಡದ ವಿರುದ್ಧದ ಗೆಲುವು ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ರನ್ ರೇಟ್ ತಂದುಕೊಟ್ಟಿತು. ಅಂದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಲೀಗ್ ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಪಂದ್ಯಾವಳಿಯಿಂದ ವಾಸ್ತವಿಕವಾಗಿ ಹೊರಬಿದ್ದಿದ್ದಾರೆ.

ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದ್ದರೆ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಲಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಅಭಿಯಾನ ಅಂತ್ಯವಾಗುತ್ತಿದ್ದಂತೆ, ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ಸಾಂಪ್ರದಾಯಿಕ ಎದುರಾಳಿಗಳನ್ನು ಕ್ರೂರವಾಗಿ ಟ್ರೋಲ್ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನವು ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಆಶಿಸಿದರು.

"ಪಾಕಿಸ್ತಾನ್ ಜಿಂದಭಾಗ್! ಬಸ್ ಯಾಹಿಂ ತಕ್ ಥಾ ಜೋ ಥಾ. ನೀವು ಬಿರಿಯಾನಿ ಮತ್ತು ಆತಿಥ್ಯವನ್ನು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ. ಸುರಕ್ಷಿತವಾಗಿ ಮನೆಗೆ ಹಿಂತಿರುಗಿ. ಬೈ ಬೈ ಪಾಕಿಸ್ತಾನ!" ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಶ್ವಕಪ್ 2023ರ ಅಭಿಯಾನದಲ್ಲಿ ಪಾಕಿಸ್ತಾನ ತಂಡದ ಕಥೆ-ವ್ಯಥೆ
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ವಿದಾಯ ಹೇಳುವ ಮೊದಲು, ಪಾಕಿಸ್ತಾನ ತಂಡವು ತನ್ನ ಅಭಿಯಾನದ ಉದ್ದಕ್ಕೂ ಸಾಧಾರಣ ಪ್ರವಾಸವನ್ನು ಹೊಂದಿತ್ತು.
ಭಾರತದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಗೆ ಪಾಕಿಸ್ತಾನ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಬಂದಿತ್ತು. ಆರಂಭದಲ್ಲಿ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಕ್ಲಿನಿಕಲ್ ಗೆಲುವುಗಳೊಂದಿಗೆ ಮೊದಲ ಎರಡು ಪಂದ್ಯಗಳಲ್ಲಿ ಭರವಸೆಯನ್ನು ತೋರಿಸಿತ್ತು. ಮಾಜಿ ಕ್ರಿಕೆಟಿಗರು ಮತ್ತು ಅವರ ಅಭಿಮಾನಿಗಳು ಇದು ಪಾಕಿಸ್ತಾನದ ವಿಶ್ವಕಪ್ ಆಗಿರಬಹುದು ಎಂಬ ಭರವಸೆ ಹೊಂದಿದ್ದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ (345/4) ದಾಖಲೆಯ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ನಂತರ, ಅವರು ಮೊದಲ ಎರಡು ಪಂದ್ಯಗಳನ್ನು ಗೆದ್ದರು ಮಾತ್ರವಲ್ಲದೆ ಇತಿಹಾಸ ಬರೆದರು.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಭಾರತ ತಂಡವನ್ನು ಎದುರಿಸುವವರೆಗೂ ಎಲ್ಲವೂ ಸರಿಯಾಗಿತ್ತು. ಯಾವಾಗ ರೋಹಿತ್ ಶರ್ಮಾ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸಮಗ್ರವಾಗಿ ಏಳು ವಿಕೆಟ್‌ಗಳಿಂದ ಸೋಲಿಸಿ ಗೆಲುವು ದಾಖಲಿಸಿತೋ, ಅಲ್ಲಿಂದ ಪಾಕಿಸ್ತಾನ ಪಂದ್ಯಾವಳಿಯಲ್ಲಿ ತಮ್ಮ ಅವನತಿ ಕಂಡುಕೊಂಡರು.
ಬಳಿಕ ಆಸ್ಟ್ರೇಲಿಯಾ ವಿರುದ್ಧ 62 ರನ್‌ಗಳಿಂದ, ಅಫ್ಘಾನಿಸ್ತಾನ ವಿರುದ್ಧ ಎಂಟು ವಿಕೆಟ್‌ಗಳಿಂದ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ವಿಕೆಟ್‌ನಿಂದ ಸತತ ಮೂರು ಸೋಲುಗಳನ್ನು ಅನುಭವಿಸಿತು. ಇದು ಅವರ ಸೆಮಿಫೈನಲ್ ಸ್ಥಾನದ ನಿರೀಕ್ಷೆಯನ್ನು ದೂರವಾಗಿಸಿತು.
ಆ ಬಳಿಕ ಪಾಕಿಸ್ತಾನ ತಂಡವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಅಮೋಘ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್‌ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಪಾಕಿಸ್ತಾನ ಸ್ಥಾನವು ಇತರ ಪಂದ್ಯದ ಫಲಿತಾಂಶಗಳ ಮೇಲೆ ಅವಲಂಬಿತವಾಯಿತು.
ಶನಿವಾರ, ನವೆಂಬರ್ 11ರಂದು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಎದುರಿಸುವಾಗ ಬಾಬರ್ ಅಜಂ ಪಡೆ ತಮ್ಮ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಆಶಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications