Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ಪೃಥ್ವಿ ಶಾ ಮಾತು

‘He Is Someone Who Is Always There For Me’: Prithvi Shaw Hails Sachin Tendulkar

ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಜೊತೆಗೆ 2011ರ ವಿಶ್ವಕಪ್ ಫೈನಲ್‌ ಪಂದ್ಯವನ್ನು ನೋಡುತ್ತಿದ್ದ ಫೋಟೋವೊಂದು ವೈರಲ್ ಆಗಿತ್ತು. ಸಚಿನ್ ಕುಟುಂಬದ ಜೊತೆಗೆ ಪೃಥ್ವಿ ಶಾ ನಂಟು ಯಾವಾಗದಿಂದ ಇತ್ತು ಎಂಬುದು ಈ ಫೋಟೋದಿಂದಲೇ ಬಹಿರಂಗವಾಗಿತ್ತು.

ಈಗ ಸಚಿನ್ ತೆಂಡೂಲ್ಕರ್ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬ ವಿಚಾರವನ್ನು ಪೃಥ್ವಿ ಶಾ ಹಂಚಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ಬದುಕಿಗೆ ಸಚಿನ್ ಯಾವ ರೀತಿಯಲ್ಲಿ ಬಲವಾಗಿದ್ದಾರೆ ಎಂಬುದರ ಜೊತೆಗೆ ರಾಹುಲ್ ದ್ರಾವಿಡ್ ಬಗ್ಗೆಯೂ ಶಾ ಮಾತನಾಡಿದ್ದಾರೆ.

ತನ್ನನ್ನು ಉತ್ತಮ ಬ್ಯಾಟ್ಸ್‌ಮನ್ ಆಗಿ ರೂಪಿಸಲು ಸಚಿನ್ ತೆಂಡೂಲ್ಕರ್ ಅವರ ಶ್ರಮ ಸಾಕಷ್ಟಿದೆ, ಪ್ರತಿ ಬಾರಿಯೂ ನಾನು ಸಚಿನ್ ತೆಂಡೂಲ್ಕರ್ ಅವರಿಂದ ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಶಾ ಹೇಳಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಮುಂಬೈನಲ್ಲಿ ಇದ್ದಾಗ ನಾನು ಅವರನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ, ನಾನು ನೆಟ್‌ನಲ್ಲಿ ತರಭೇತಿಯಲ್ಲಿದ್ದಾಗ ಅವರು ಬಿಡುವಿದ್ದಾಗ ಬಂದು ನನಗೆ ಸಲಹೆಗಳನ್ನು ನೀಡುತ್ತಿರುತ್ತಾರೆ, ಯಾವುದೇ ರೀತಿಯ ಸಲಹೆಗೂ ಫೋನ್ ಅಥವಾ ಸಂದೇಶದ ಮೂಲಕ ಸಂಪರ್ಕ ಮಾಡುವಂತೆ ನನಗೆ ಅವಕಾಶವನ್ನು ನೀಡಿದ್ದಾರೆ, ನನ್ನ ವೃತ್ತಿ ಜೀವನದ ಪ್ರಯಾಣದಲ್ಲಿ ಸಾಕಷ್ಟು ನೆರವಾಗಿದ್ದಾರೆ ಎಂದು ಪೃಥ್ವಿ ಶಾ ಸಚಿನ್ ತೆಂಡೂಲ್ಕರ್ ಬಗ್ಗೆ ಹೇಳಿದ್ದಾರೆ

ಇದೇ ಸಂದರ್ಭದಲ್ಲಿ ಅಂಡರ್ 19 ವಿಶ್ವಕಪ್‌ನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬಗ್ಗೆಯೂ ಶಾ ಮಾತನಾಡಿದ್ದು, ಕ್ರಿಕೆಟ್‌ನ ಮಾನಸಿಕ ಅಂಶದ ಬಗ್ಗೆ ದ್ರಾವಿಡ್ ಸಾಕಷ್ಟು ಹೇಳಿಕೊಟ್ಟಿದ್ದಾರೆ. ರಾಹುಲ್ ದ್ರಾವಿಡ್ ನನ್ನ ಕ್ರಿಕೆಟ್ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಶಾ ಖಾಸಗಿ ಸುದ್ದಿಸಂಸ್ಥೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Thursday, April 9, 2020, 19:46 [IST]
Other articles published on Apr 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+