For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಸ್ಟಾರ್ ಆಟಗಾರನಿಗೆ ಸದ್ಯಕ್ಕೆ ಟೆಸ್ಟ್ ತಂಡದಲ್ಲಿ ಅವಕಾಶವಿಲ್ಲ :ಆಕಾಶ್ ಚೊಪ್ರಾ

He May Not Get A Chance To Play Tests In Near Future’: Aakash Chopra

ಟೀಮ್ ಇಂಡಿಯಾದಲ್ಲಿ ಈಗ ಸಾಕಷ್ಟು ಯುವ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದೊಂದು ಕ್ರಮಾಂಕಕ್ಕೂ ಸಾಕಷ್ಟು ಜಿದ್ದಾಜಿದ್ದಿ ಏರ್ಪಟ್ಟಿರುವುದು ಭಾರತೀಯ ಕ್ರಿಕೆಟ್‌ಗೆ ಆಶಾದಾಯಕ ಬೆಳವಣಿಗೆ. ಈ ಜಿದ್ದಾಜದ್ದಿನ ಕಾದಾಟದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರನೋರ್ವ ಸದ್ಯದ ಪರಿಸ್ಥಿತಿಯಲ್ಲಿ ಟೆಸ್ಟ್ ತಂಡಕ್ಕೆ ವಾಪಾಸ್ ಬರುವುದು ಅಸಾಧ್ಯ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಸೀಮಿತ ಓವರ್‌ಗಳಲ್ಲಿ ಕಳೆದ ಕೆಲ ವರ್ಷಗಳಿಂದ ಆರಂಭಿಕನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ. ಏಕದಿನ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಟೆಸ್ಟ್ ತಂಡದಲ್ಲಿ ಮತ್ತೆ ಸದ್ಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯವೆಂದು ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಕೊನೆಯ ಟೆಸ್ಟ್

2018ರಲ್ಲಿ ಕೊನೆಯ ಟೆಸ್ಟ್

ಶಿಖರ್ ಧವನ್ ಟೀಮ್ ಇಂಡಿಯಾ ಪರವಾಗಿ 34 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಶತಕಗಳಿಸಿದ್ದಾರೆ. 40.61ರ ಸರಾಸರಿಯಲ್ಲಿ 2315 ರನ್‌ಗಳನ್ನು ಸುಧೀರ್ಘ ಮಾದರಿಯಲ್ಲಿ ಧವನ್ ಗಳಿಸಿದ್ದಾರೆ. ಆದರೆ ಟೆಸ್ಟ್ ಮಾದರಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ 2018ರಲ್ಲಿ ತಂಡದಿಂದ ಹೊರಬಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರು.

ಆರಂಭಿಕ ಸ್ಥಾನಕ್ಕೆ ಭಾರೀ ಸ್ಪರ್ಧೆ

ಆರಂಭಿಕ ಸ್ಥಾನಕ್ಕೆ ಭಾರೀ ಸ್ಪರ್ಧೆ

34 ವರ್ಷದ ಶಿಖರ್ ಧವನ್ ಟೆಸ್ಟ್‌ನಲ್ಲಿ ಮತ್ತೆ ಸ್ಥಾನವನ್ನು ಗಳಿಸುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಆಕಾಶ್ ಚೋಪ್ರಾ ಉತ್ತರಿಸುತ್ತಾ, ಸಾಧ್ಯವೇ ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಶೀಘ್ರವಾಗಿ ಇದು ಆಗಲಿದೆ ಎಂದು ನನಗೆ ಅನಿಸುತ್ತಿಲ್ಲ. ಯಾಕೆಂದರೆ ಆರಂಭಿಕ ಸ್ಥಾನಕ್ಕೆ ಸಾಕಷ್ಟು ಅವಕಾಶಗಳು ಈಗಾಗಲೇ ಟೀಮ್ ಇಂಡಿಯಾದಲ್ಲಿ ಇದೆ ಎಂದು ಚೋಪ್ರಾ ಉತ್ತರಿಸಿದ್ದಾರೆ.

ಶಿಖರ್‌ಗಿಂತ ಮುಂದಿದ್ದಾರೆ ನಾಲ್ವರು ಆಟಗಾರರು

ಶಿಖರ್‌ಗಿಂತ ಮುಂದಿದ್ದಾರೆ ನಾಲ್ವರು ಆಟಗಾರರು

ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಮತ್ತು ಕೆಎಲ್ ರಾಹುಲ್ ಧವನ್‌ಗಿಂತ ಆರಂಭಿಕ ಸ್ಥಾನದ ರೇಸ್‌ನಲ್ಲಿ ಮುಂದಿದ್ದಾರೆ. ಭವಿಷ್ಯದಲ್ಲಿ ಶಿಖರ್ ಧವನ್ ಇದನ್ನು ಸಾಧಿಸಬಹುದು, ಆದರೆ ಶೀಘ್ರದಲ್ಲಿ ಇದು ಸಾಧ್ಯವಿಲ್ಲ. ಯಾಕೆಂದರೆ ತಂಡ ಇದಕ್ಕಿಂತ ಮುಂದೆ ಹೋಗುತ್ತಿದ ಎಂದು ಹೇಳಿದ್ದಾರೆ.

ಸೀಮಿತ ಓವರ್‌ಗಳತ್ತ ಗಮನ ನೀಡಲು ಸಲಹೆ

ಸೀಮಿತ ಓವರ್‌ಗಳತ್ತ ಗಮನ ನೀಡಲು ಸಲಹೆ

ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಶಿಖರ್ ಧವನ್‌ಗೆ ಸಲಹೆಯೊಂದನ್ನು ನೀಡಿದ್ದಾರೆ. ಶಿಖರ್ ಓರ್ವ ಅದ್ಭುತ ವೈಟ್‌ಬಾಲ್ ಆಟಗಾರ. ಹಾಗಾಗಿ ಸೀಮಿತ ಓವರ್‌ಗಳಾದ ಏಕದಿನ ಹಾಗೂ ಟಿ20 ಮಾದರಿಯತ್ತ ಹೆಚ್ಚಿನ ಗಮನ ನಿಡುವುದು ಉತ್ತಮ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

Story first published: Wednesday, July 29, 2020, 9:44 [IST]
Other articles published on Jul 29, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+