For Quick Alerts
ALLOW NOTIFICATIONS  
For Daily Alerts
 

ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಭಾರತೀಯ ಬೌಲರ್ ಪ್ರಸಿದ್ಧನಾಗಿದ್ದ: ಆಶಿಶ್ ನೆಹ್ರಾ

He Was More Popular Than Imran Khan During Pakistan Tour-Ashish Nehra

ಪಾಕಿಸ್ತಾನದ ವಿರುದ್ಧ 2003-04ರಲ್ಲಿ ಭಾರತ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ತೆರಳಿತ್ತು. ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ಪಾಕ್ ನೆಲದಲ್ಲಿ ಸರಣಿಯನ್ನಾಡಲು ಕಾಲಿಟ್ಟಿತ್ತು. ಈ ಸಂದರ್ಭದಲ್ಲಿ ಭಾರತೀಯ ಬೌಲರ್ ಓರ್ವ ಪಾಕಿಸ್ತಾನದಲ್ಲಿ ಅಲ್ಲಿನ ಈಗಿನ ಪ್ರಧಾನಿ ಇಮ್ರಾನ್ ಖಾನ್‌ಗಿಂತಲೂ ಪ್ರಸಿದ್ಧನಾಗಿದ್ದರು ಎಂದು ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.

ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನಾಡಿತ್ತು. ಈ ಎರಡೂ ಸರಣಿಯನ್ನು ಭಾರತ ಭರ್ಜರಿಯಾಗಿ ಗೆದ್ದುಬೀಗಿತ್ತು. ಮಾತ್ರವಲ್ಲ ತವರಿನಲ್ಲೇ ಪಾಕಿಸ್ತಾನಕ್ಕೆ ಮುಖಭಂಗವನ್ನುಂಟು ಮಾಡಿತ್ತು. ಈ ಸರಣಿಯಲ್ಲಿ ಭಾರತದ ಪರವಾಗಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಇರ್ಫಾನ್ ಪಠಾಣ್ ಅದ್ಭುತ ಪ್ರದರ್ಶನವನ್ನು ನೀಡಿದ್ದರು.

ಆದರೆ ಈ ಸರಣಿಯಲ್ಲಿ ಇವರೆಲ್ಲರಿಗಿಂತಲೂ ಹೆಚ್ಚಿನ ಖ್ಯಾತಿಯನ್ನು ಈ ಸರಣಿಯಲ್ಲಿ ಗಳಿಸಿದ ಆಟಗಾರ ಮತ್ತು ಆ ಸರಣಿಯ ಸ್ಮರಣೀಯ ಆಟಗಾರ ಎಂದರೆ ಅದು ಟೀಮ್ ಇಂಡಿಯಾದ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಶಿಶ್ ನೆಹ್ರಾ.

ಈ ಸರಣಿಯಲ್ಲಿ ಬಾಲಾಜಿ ಎಲ್ಲಾ ಮೂರೂ ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅದರಲ್ಲೂ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಸರಣಿಯ ನಿರ್ಣಾಯಕ ಮೂರನೇ ಟೆಸ್ಟ್‌ನಲ್ಲಿ ಬಾಲಾಜಿ ಪಾಕಿಸ್ತಾನದ 7 ವಿಕೆಟ್ ಕಿತ್ತು ಭಾರತ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡರು ಎಂದಿದ್ದಾರೆ ಆಶಿಶ್ ನೆಹ್ರಾ.

ಇಷ್ಟು ಮಾತ್ರವಲ್ಲ ಆ ಸರಣಿಯಲ್ಲಿ ಪಾಕಿಸ್ತಾನದ ಮಾರಕ ವೇಗಿ ಸೋಯೆಬ್ ಅಖ್ತರ್ ಮತ್ತು ಮೊಹಮದ್ ಸಮಿ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್‌ಗಳನ್ನು ಚಚ್ಚಿದ್ದರು, ಪಾಕಿಸ್ತಾನದ ಸರಣಿಯ ಆ ಆರು ವಾರದಲ್ಲಿ ಬಾಲಾಜಿ ಎಡ ಬಲ ಮಧ್ಯ ಎಲ್ಲಾ ಕಡೆಯಿಂದಲೂ ಸಿಕ್ಸರ್ ಬಾರಿಸುತ್ತಿದ್ದರು. ಇದು ಅವರನ್ನು ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ಗಿಂತಲೂ ಹೆಚ್ಚು ಖ್ಯಾತಿ ಪಡೆಯುವಂತೆ ಮಾಡಿತ್ತು ಎಂದು ಆ ಸರಣಿಯ ನೆನಪನ್ನು ಆಶಿಶ್ ನೆಹ್ರಾ ಮೆಲುಕು ಹಾಕಿದ್ದಾರೆ

Story first published: Sunday, April 19, 2020, 16:22 [IST]
Other articles published on Apr 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+