ಭಾರತದ ಮುಂದಿನ ಜಹೀರ್ ಖಾನ್ ಈತನೇ ಎಂದ ಬ್ರೆಟ್ ಲೀ

ಟೀಂ ಇಂಡಿಯಾ ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಸಿಕ್ಕಂತಹ ಅವಕಾಶಗಳಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದು, ಭವಿಷ್ಯದ ಸೂಪರ್‌ಸ್ಟಾರ್ ಆಗುವ ಎಲ್ಲಾ ಲಕ್ಷಣ ತೋರಿದ್ದಾರೆ. ಬಂದಂತಹ ಕಡಿಮೆ ಸಮಯದಲ್ಲೇ ಭಾರತ ತಂಡದಲ್ಲಿ ಪ್ರಭಾವಕಾರಿಯಾದ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ.
ಐಪಿಎಲ್ 2022ರ ಆರಂಭಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಆಡುವ ಚೊಚ್ಚಲ ಅವಕಾಶ ಪಡೆದ ಅರ್ಷ್‌ದೀಪ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಇವರ ಪ್ರದರ್ಶನದಿಂದಲೇ 2022 ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆದರು. ಇದಕ್ಕೂ ಮುನ್ನ ಏಷ್ಯಾಕಪ್‌ನಲ್ಲೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ರು. ಪ್ರಸ್ತುತ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬೆಸ್ಟ್ ಬೌಲರ್ ಆಗಿದ್ದಾರೆ.
ಅರ್ಷ್‌ದೀಪ್ ಇದುವರೆಗೆ 21 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಒಡಿಐ ಫಾರ್ಮೆಟ್‌ಗೂ ಕಾಲಿಟ್ಟ ಅರ್ಷ್‌ದೀಪ್ ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆದ್ರೂ ಆಸ್ಟ್ರೇಲಿಯಾದ ಲೆಜೆಂಡರಿ ಪೇಸರ್ ಬ್ರೆಟ್ ಲೀ ಅರ್ಷ್‌ದೀಪ್ ಕುರಿತಾಗಿ ಹೊಗಳಿಕೆಯ ಮಾತನಾಡಿದ್ದು, ಭಾರತ ತಂಡದಲ್ಲಿ ಆತನ ಫೇವರಿಟ್ ಬೌಲರ್ ಎಂದು ಹೆಸರಿಸಿದ್ದಾರೆ. ಭಾರತ ಹೆಚ್ಚು ಕ್ವಾಲಿಟಿ ಎಡಗೈ ಬೌಲರ್‌ಗಳನ್ನ ಪರಿಚಯಿಸುವಲ್ಲಿ ಎಡವಿದೆ. ಆದ್ರೆ ಅರ್ಷ್‌ದೀಪ್ ಮುಂದಿನ ಜಹೀರ್ ಖಾನ್ ಆಗಬಹುದು ಎಂದು ಹೇಳಿದ್ದಾರೆ.
ಬ್ರೆಟ್ ಲೀ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅರ್ಷ್‌ದೀಪ್ ಕುರಿತಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications