ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವದಿಂದ ಚೀನಾ ಮೊಬೈಲ್ ಕಂಪನಿ ವಿವೋ ಹಿಂದೆ ಸರಿದಿದೆ. ಹೀಗಾಗಿ ಈ ಬಾರಿಯ ಐಪಿಎಲ್‌ಗೆ ಪ್ರಾಯೋಜಕತ್ವ ನೀಡಲು ಆಸಕ್ತಿಯಿರುವವರು ಬಿಡ್‌ಗೆ ಆರ್ಜಿ ಸಲ್ಲಿಸಬಹುದು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಆಹ್ವಾನ ನೀಡಿತ್ತು. ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯೂ ಐಪಿಎಲ್ ಪ್ರಾಯೋಜಕತ್ವದ ಬಿಡ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವುದಾಗಿ ಹೇಳಿಕೊಂಡಿತ್ತು.
ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ, ತನ್ನಲ್ಲಿನ ಆಯುರ್ವೇದ ಎಫ್‌ಎಮ್‌ಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಉತ್ಪನ್ನಗಳಿಗೆ ಐಪಿಎಲ್ ಪ್ರಾಯೋಜಕತ್ವದ ಮೂಲಕ ಜಾಗತಿಕ ಮಾರುಕಟ್ಟೆ ಸೃಷ್ಟಿಸಲು ಯೋಚಿಸಿ, ಐಪಿಎಲ್ ಬಿಡ್‌ನಲ್ಲಿ ಭಾಗವಹಿಸುವ ವಿಚಾರವನ್ನು ಪರಿಗಣಿಸಲಿದ್ದೇವೆ ಎಂದಿತ್ತು.
ಹೀಗಂದಿದ್ದೇ ತಂಡ; ಕ್ರಿಕೆಟ್ ಅಭಿಮಾನಿಗಳು 'ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ' ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡು ಬಗೆ ಬಗೆ ತರಲೆ ಮಿಮ್‌ಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.

1. ಪಂದ್ಯಶ್ರೇಷ್ಠಕ್ಕೆ ಹೊಸ ಹೆಸರು
ಐಪಿಎಲ್ ಪ್ರಾಯೋಜಕತ್ವದಕ್ಕೆ ಪತಂಜಲಿ ಬಿಡ್ ಸಂಗತಿಯನ್ನು ತಮಾಷೆಯಾಗಿ ಪರಿಗಣಿಸಿರುವ ಬಿಭು ಅವರು, 'ಧೋನಿಗೆ 'ದಂತಕಾಂತಿ ಪ್ಲೇಯರ್ ಆಫ್ ದ ಮ್ಯಾಚ್ ಅವಾರ್ಡ್' ಸಿಗೋದನ್ನು ನೋಡಲು ನಾನು ಕಾತರನಾಗಿದ್ದೇನೆ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
2. ಚಿಯರ್ ಗರ್ಲ್ಸ್‌ನಲ್ಲಿ ಬದಲಾವಣೆ
ಐಪಿಎಲ್ ಸ್ಪಾನ್ಸರ್‌ಶಿಪ್ ಬಿಡ್ ಏನಾದರೂ ಪತಂಜಲಿ ಗೆದ್ದುಬಿಟ್ಟರೆ ಚಿಯರ್ ಗರ್ಲ್ಸ್ ವೇಷವೇ ಬದಲಾಗಲಿದೆ. ಹೀಗೆ ಕ್ಲಾಸಿಕ್ ಚಿಯರ್ ಗರ್ಲ್ಸ್ ಕಾಣಸಿಗಬಹುದು ಎಂದು ಹರ್ಷ್ ಎಂಬವರು ಸಾಂಪ್ರದಾಯಿಕ ಭರತ ನಾಟ್ಯದ ಫೋಟೋ ಟ್ವೀಟ್ ಮಾಡಿದ್ದಾರೆ.
3. ವಿಭಿನ್ನ ಐಪಿಎಲ್ ಲೋಗೋ
ಪತಂಜಲಿ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವದ ಬಿಡ್ ಗೆದ್ದರೆ ಐಪಿಎಲ್ ಲೋಗೊವೇ ಬದಲಾಗಲಿದೆ. ಐಪಿಎಲ್ ಲೋಗೋ ಜೊತೆ ಯೋಗದ ಭಂಗಿಯೂ ಸೇರ್ಪಡೆಯಾಗಲಿದೆ ಎಂದು ಆಕಾಶ್ ಮಾಡಿರುವ ತಮಾಷೆಯ ಮೀಮ್.
4. ಚಿಯರ್ ಗರ್ಲ್ಸ್‌ಗೆ ಕೊರಿಯೋಗ್ರಫಿ
ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್‌ಗೆ ಪತಂಜಲಿ ಪರಿಗಣಿಸಲ್ಪಟ್ಟರೆ ಚಿಯರ್ ಗರ್ಲ್ಸ್ ಕುಣಿತ ಬದಲಾಗಲಿದೆ. 4 ಹೊಡೆದರೆ ಪ್ರಾಣಾಯಾಮ, 6 ಹೊಡೆದರೆ ಸೂರ್ಯ ನಮಸ್ಕಾರ, ವಿಕೆಟ್ ಸಿಕ್ಕರೆ ಕಪಾಲ್‌ಭರ್ತಿ, ಬಾಲ ಕೃಷ್ಣ ಮೈದಾನದಲ್ಲಿ ಡಿಜೆ ಕುಣಿಯಲಿದ್ದಾರೆ ಎಂದು ಇಲ್ಲೊಂದು ತಮಾಷೆ.
5. ಹೊಸ ಬ್ರ್ಯಾಂಡ್‌ನ ಬಾಲ್-ಬ್ಯಾಟ್
ಕ್ರಿಕೆಟ್ ಲೋಕಕ್ಕೆ ಪತಂಜಲಿ ಬಂದುಬಿಟ್ಟರೆ ಬ್ರ್ಯಾಂಡ್‌ಗಳಲ್ಲಿ ಬದಲಾವಣೆಗಳಾಗಲಿವೆ. ಐಪಿಎಲ್‌ಗೆ ಇಂಥ ಚೆಂಡು, ದಾಂಡು, ವಿಕೆಟ್ ಬರಲಿದೆ ನೋಡಿ ಎಂದು ಇಲ್ಲೊಬ್ಬರು ಫನ್ನೀ ಫೋಟೋ ಟ್ವೀಟ್ ಮಾಡಿದ್ದಾರೆ.
6. ಚಿಯರ್ ಗರ್ಲ್ಸ್ ಕೈಯಲ್ಲಿ ಕ್ಯಾಬೇಜ್
ಒಂದು ವೇಳೆ ಪತಂಜಲಿ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವ ಗೆದ್ದರೆ ಚಿಯರ್ ಗರ್ಲ್ಸ್ ಹೀಗೆ ಹೂ ಕೋಸು ಹಿಡುಕ್ಕೊಂಡು ಕುಣಿಯಲಿದ್ದಾರೆ ಎಂದು ಅಂಕಿತ್ ಎಂಬವರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications