ಐಪಿಎಲ್ ಮುಗಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಸರಣಿಗಳು ಶುರು; ಇಲ್ಲಿದೆ ಜೂನ್ ತಿಂಗಳ ಎಲ್ಲಾ ಪಂದ್ಯಗಳ ಪಟ್ಟಿ

ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡಿತ್ತು. ಇನ್ನು ಈ ಟೂರ್ನಿಯಲ್ಲಿ ವಿಶ್ವದ ಹಲವು ತಂಡಗಳ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕಾರಣ ಈ ಎರಡು ತಿಂಗಳಲ್ಲಿ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್‌ಗಳು ಆಯೋಜನೆಯಾಗಿರಲಿಲ್ಲ ಎಂದೇ ಹೇಳಬಹುದು. ಆದರೆ ಇದೀಗ ಕಳೆದ ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡಿದ್ದು, ಅಂತರರಾಷ್ಟ್ರೀಯ ಸರಣಿಗಳು ಗರಿಗೆದರಿವೆ.
ಜೂನ್ ತಿಂಗಳಿನಲ್ಲಿಯೇ ಹಲವು ಪ್ರಮುಖ ಸರಣಿಗಳು ಆಯೋಜನೆಯಾಗಿದ್ದು, ಸಾಲು ಸಾಲು ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ ಟ್ವೆಂಟಿ ಸರಣಿ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟಿ ಟ್ವೆಂಟಿ ಹಾಗೂ ಏಕದಿನ ಸರಣಿ ಮತ್ತು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಗಳು ನಡೆಯಲಿವೆ. ಈ ಸರಣಿಗಳೂ ಸೇರಿದಂತೆ ಜೂನ್ ತಿಂಗಳಿನಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಪಟ್ಟಿ ಈ ಕೆಳಕಂಡಂತಿದೆ.

ಜೂನ್ ತಿಂಗಳಲ್ಲಿ ಆಯೋಜನೆಯಾಗಿರುವ ಪಂದ್ಯಗಳ ಪಟ್ಟಿ
ಜೂನ್ 2 - ಜೂನ್ 6, 2022 ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್, 1 ನೇ ಟೆಸ್ಟ್
ಜೂನ್ 2, 2022 ನೆದರ್ಲ್ಯಾಂಡ್ಸ್ vs ವೆಸ್ಟ್ ಇಂಡೀಸ್, 2 ನೇ ODI
ಜೂನ್ 3, 2022 ಯುನೈಟೆಡ್ ಅರಬ್ ಎಮಿರೇಟ್ಸ್ vs ಸ್ಕಾಟ್ಲೆಂಡ್, 5 ನೇ ODI
ಜೂನ್ 4, 2022 ನೆದರ್ಲ್ಯಾಂಡ್ಸ್ vs ವೆಸ್ಟ್ ಇಂಡೀಸ್, 3 ನೇ ODI
ಜೂನ್ 4, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 1ನೇ ODI
ಜೂನ್ 6, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 2ನೇ ODI
ಜೂನ್ 7, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 1ನೇ ಟಿ20
ಜೂನ್ 8, 2022 ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ, 2ನೇ ಟಿ20
ಜೂನ್ 8, 2022 ಪಾಕಿಸ್ತಾನ vs ವೆಸ್ಟ್ ಇಂಡೀಸ್, 1ನೇ ODI
ಜೂನ್ 9, 2022 ಭಾರತ vs ದಕ್ಷಿಣ ಆಫ್ರಿಕಾ, 1ನೇ ಟಿ20
ಜೂನ್ 9, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 3ನೇ ODI
ಜೂನ್ 10 - ಜೂನ್ 14, 2022 ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್, 2ನೇ ಟೆಸ್ಟ್
ಜೂನ್ 10, 2022 ಪಾಕಿಸ್ತಾನ vs ವೆಸ್ಟ್ ಇಂಡೀಸ್, 2 ನೇ ODI
ಜೂನ್ 11, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 3ನೇ ಟಿ20
ಜೂನ್ 11, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 1ನೇ ಟಿ20
ಜೂನ್ 12, 2022 ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20
ಜೂನ್ 12, 2022 ಪಾಕಿಸ್ತಾನ vs ವೆಸ್ಟ್ ಇಂಡೀಸ್, 3ನೇ ODI
ಜೂನ್ 12, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 2 ನೇ ಟಿ20
ಜೂನ್ 14, 2022 ಭಾರತ vs ದಕ್ಷಿಣ ಆಫ್ರಿಕಾ, 3ನೇ ಟಿ20
ಜೂನ್ 14, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 1ನೇ ODI
ಜೂನ್ 14, 2022 ಜಿಂಬಾಬ್ವೆ vs ಅಫ್ಘಾನಿಸ್ತಾನ, 3ನೇ ಟಿ20
ಜೂನ್ 15, 2022 ಭಾರತ vs ದಕ್ಷಿಣ ಆಫ್ರಿಕಾ, 4ನೇ ಟಿ20
ಜೂನ್ 16, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 2ನೇ ODI
ಜೂನ್ 16 - ಜೂನ್ 20, 2022 ಬಾಂಗ್ಲಾದೇಶ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್
ಜೂನ್ 17, 2022 ನೆದರ್ಲ್ಯಾಂಡ್ಸ್ vs ಇಂಗ್ಲೆಂಡ್, 1ನೇ ODI
ಜೂನ್ 19, 2022 ನೆದರ್ಲ್ಯಾಂಡ್ಸ್ vs ಇಂಗ್ಲೆಂಡ್, 2ನೇ ODI
ಜೂನ್ 19, 2022 ಭಾರತ vs ದಕ್ಷಿಣ ಆಫ್ರಿಕಾ, 5ನೇ ಟಿ20
ಜೂನ್ 19, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 3ನೇ ODI
ಜೂನ್ 21, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 4ನೇ ODI
ಜೂನ್ 22, 2022 ನೆದರ್ಲ್ಯಾಂಡ್ಸ್ vs ಇಂಗ್ಲೆಂಡ್, 3ನೇ ODI
ಜೂನ್ 23 - ಜೂನ್ 27, 2022 ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್, 3 ನೇ ಟೆಸ್ಟ್
ಜೂನ್ 24, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 5ನೇ ODI
ಜೂನ್ 24 - ಜೂನ್ 28, 2022 ಬಾಂಗ್ಲಾದೇಶ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್
ಜೂನ್ 26, 2022 ಐರ್ಲೆಂಡ್ vs ಭಾರತ, 1ನೇ ಟಿ20
ಜೂನ್ 28, 2022 ಐರ್ಲೆಂಡ್ vs ಭಾರತ, 2ನೇ ಟಿ20
ಜೂನ್ 29 - ಜುಲೈ 3, 2022 ಶ್ರೀಲಂಕಾ vs ಆಸ್ಟ್ರೇಲಿಯಾ, 1 ನೇ ಟೆಸ್ಟ್

ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ವೇಳಾಪಟ್ಟಿ
ಐಪಿಎಲ್ ಮುಗಿದ ನಂತರ ಟೀಮ್ ಇಂಡಿಯಾ ಮೊದಲಿಗೆ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಈ ಸರಣಿಯ ವೇಳಾಪಟ್ಟಿ ಕೆಳಕಂಡಂತಿದೆ..
ಜೂನ್ 9, 2022 ಭಾರತ vs ದಕ್ಷಿಣ ಆಫ್ರಿಕಾ, 1ನೇ ಟಿ20
ಜೂನ್ 12, 2022 ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20
ಜೂನ್ 14, 2022 ಭಾರತ vs ದಕ್ಷಿಣ ಆಫ್ರಿಕಾ, 3ನೇ ಟಿ20
ಜೂನ್ 15, 2022 ಭಾರತ vs ದಕ್ಷಿಣ ಆಫ್ರಿಕಾ, 4ನೇ ಟಿ20
ಜೂನ್ 19, 2022 ಭಾರತ vs ದಕ್ಷಿಣ ಆಫ್ರಿಕಾ, 5ನೇ ಟಿ20

ಭಾರತ vs ಐರ್ಲೆಂಡ್ ನಡುವಿನ ಸರಣಿಯ ವೇಳಾಪಟ್ಟಿ
ಜೂನ್ 26, 2022 ಐರ್ಲೆಂಡ್ vs ಭಾರತ, 1ನೇ ಟಿ20
ಜೂನ್ 28, 2022 ಐರ್ಲೆಂಡ್ vs ಭಾರತ, 2ನೇ ಟಿ20
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications