For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ ಟಿ20ಯಲ್ಲಿ ದಾಖಲಾದ ಟಾಪ್‌ 5 ಗರಿಷ್ಠ, ಕನಿಷ್ಠ ಮೊತ್ತ

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಯನ್ನು ಭಾರತ ಆಯೋಜಿಸಲಿದ್ದು, ಟಿ20 ಫಾರ್ಮೆಟ್‌ನಲ್ಲಿ ನಡೆಸಲಾಗುತ್ತಿದೆ. ಸೆ.9 ರಿಂದ ಯುಎಇನಲ್ಲಿ ಈ ಟೂರ್ನಿ ಆರಂಭವಾಗಿದೆ. ಭಾರತ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಸೆ.10 ರಂದು ಆರಂಭಿಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್‌ ಸೆ.14 ರಂದು ನಡೆಯಲಿದೆ. ಮೂರನೇ ಬಾರಿಗೆ ಟಿ20 ಫಾರ್ಮೆಟ್‌ನಲ್ಲಿ ಈ ಟೂರ್ನಿಯನ್ನು ಆಡಿಸಲಾಗುತ್ತಿದೆ. ಈ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಹಾಗೂ ಕನಿಷ್ಠ ಮೊತ್ತದ ಬಗ್ಗೆ ಮಾಹಿತಿ ಇಲ್ಲಿದೆ.

ಏಷ್ಯಾ ಕಪ್‌ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು ದಾಖಲಿಸಿದ ಕಿರ್ತಿ ಭಾರತ ತಂಡಕ್ಕೆ ಸಲ್ಲುತ್ತದೆ. ಕಳೆದ ಬಾರಿಯ ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಈ ಅಮೋಘ ಸಾಧನೆ ಮಾಡಿತ್ತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 122 ರನ್‌ ಕಲೆ ಹಾಕಿತ್ತು. ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ 62 ಹಾಗೂ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅಜೇಯ 122 ರನ್‌ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಇನ್ನು ಏಷ್ಯಾ ಕಪ್‌ ಟಿ20 ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 200 ಪ್ಲಸ್‌ ರನ್‌ ದಾಖಲಾಗಿತ್ತು. ಈ ಬಾರಿ ಯಾವ ತಂಡ ಈ ಸಾಧನೆ ಮಾಡುತ್ತದೆ ಕಾದು ನೋಡಬೇಕಿದೆ.

High-flying Asia Cup T20 starts in UAE India Pakistan set for epic clash

ಏಷ್ಯಾ ಕಪ್‌ ಟಿ20ಯಲ್ಲಿ ದಾಖಲಾದ ಗರಿಷ್ಠ ಮೊತ್ತ

ಭಾರತ, 212/2, ಅಫ್ಘಾನಿಸ್ತಾನ ವಿರುದ್ಧ
ಪಾಕಿಸ್ತಾನ, 193/2, ಹಾಂಗ್‌ಕಾಂಗ್ ವಿರುದ್ಧ
ಭಾರತ, 192/2, ಹಾಂಗ್‌ಕಾಂಗ್ ವಿರುದ್ಧ
ಶ್ರೀಲಂಕಾ, 184/8, ಬಾಂಗ್ಲಾದೇಶ ವಿರುದ್ಧ
ಬಾಂಗ್ಲಾದೇಶ, 183/7, ಶ್ರೀಲಂಕಾ ವಿರುದ್ಧ

High-flying Asia Cup T20 starts in UAE India Pakistan set for epic clash

ಏಷ್ಯಾ ಕಪ್‌ ಟಿ20 ಇತಿಹಾಸದಲ್ಲಿ ಅತಿ ಕನಿಷ್ಠ ಮೊತ್ತವನ್ನೂ ಕಳೆದ ಬಾರಿ ದಾಖಲಾಗಿದೆ. 2022ರಲ್ಲಿ ನಡೆದ ಆರನೇ ಪಂದ್ಯದಲ್ಲಿ ಪಾಕ್‌ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 193 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹಾಂಗ್‌ಕಾಂಗ್‌ 10.4 ಓವರ್‌ಗಳಲ್ಲಿ 38 ರನ್‌ಗಳಿಗೆ ಸರ್ವಪತನ ಹೊಂದಿತು. ಈ ಪಂದ್ಯದಲ್ಲಿ ಪಾಕ್‌ ಪರ ಶದಾದ್ ಖಾನ್‌ 4, ಮೊಹಮ್ಮದ್ ನವಾಜ್‌ 3 ವಿಕೆಟ್‌ ಕಬಳಿಸಿದ್ದರು. ಟಿ20 ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ 166 ರನ್‌ಗಳನ್ನು ದಾಖಲಿಸಿದ್ದೇ ಕನಿಷ್ಠ ಸ್ಕೋರ್ ಆಗಿದೆ.

ಏಷ್ಯಾ ಕಪ್‌ ಟಿ20ಯಲ್ಲಿ ದಾಖಲಾದ ಕನಿಷ್ಠ ಮೊತ್ತ

ಹಾಂಗ್‌ಕಾಂಗ್‌, 38, ಪಾಕಿಸ್ತಾನ ವಿರುದ್ಧ
ಯುಎಇ, 81/9, ಭಾರತ ವಿರುದ್ಧ
ಯುಎಇ, 82, ಬಾಂಗ್ಲಾದೇಶ ವಿರುದ್ಧ
ಪಾಕಿಸ್ತಾನ, 83, ಭಾರತದ ವಿರುದ್ಧ
ಒಮನ್, 101/8, ಯುಎಇ ವಿರುದ್ಧ

ಈ ಬಾರಿ ಯಾವೆಲ್ಲಾ ದಾಖಲೆಗಳು ನಿರ್ಮಾಣವಾಗುತ್ತವೆ ಎಂಬುದು ಕುತೂಹಲ ಹೆಚ್ಚಿಸಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್‌ ತಂಡಗಳು ಕಾದಾಟ ನಡೆಸಲಿವೆ.

Story first published: Monday, September 8, 2025, 8:19 [IST]
Other articles published on Sep 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+