ಏಷ್ಯಾ ಕಪ್ ಆರಂಭವಾಗಿದೆ, ಎಲ್ಲರ ಚಿತ್ತ ನೆಟ್ಟಿರುವ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಶನಿವಾರ ಅಖಾಡಕ್ಕೆ ಇಳಿಯಲಿವೆ. ಈ ಮೂಲಕ ವಿಶ್ವ ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ನೋಡಲು ಸಿದ್ಧವಾಗಿದೆ. ಹಾಗಿದ್ದರೆ ಈ ಪಂದ್ಯದಲ್ಲಿ ಇರುವ ವಿಶೇಷತೆ ಏನು?
ಭಾರತ-ಪಾಕ್ ಪಂದ್ಯ ಅಂದರೆ ಅದರ ಗತ್ತೇ ಬೇರೆ.. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಅಭಿಮಾನಿಗಳನ್ನು ಖುಷಿ ಪಡಿಸಲು ಎರಡೂ ತಂಡಗಳ ಆಟಗಾರರು ಕಸರತ್ತು ನಡೆಸಲಿದ್ದಾರೆ. ಆದರೆ ಈ ಎರಡೂ ತಂಡಗಳು ಕಾದಾಟ ಅಂದರೆ ನೆನಪಾಗುವುದು ಬ್ಯಾಟಿಂಗ್ ವರ್ಸಸ್ ಬೌಲಿಂಗ್.. ಎಸ್.. ಅಕ್ಷರಶಃ ನಿಜ..

ಟೀಮ್ ಇಂಡಿಯಾಗೆ ಬ್ಯಾಟಿಂಗ್ ಬಲವನ್ನು ತುಂಬಿದರೆ, ಪಾಕ್ ತಂಡಕ್ಕೆ ಬೌಲಿಂಗ್ ತೊಳ್ಬಲವನ್ನು ಹೆಚ್ಚಿಸಿದೆ. ಇದು ಈಗಿನ ಪಂದ್ಯದ ಮಾತು ಅಲ್ಲವೇ ಅಲ್ಲ. ದಶಕಗಳ ಕಾಲ ನಡೆದು ಬಂದಿರುವ ಪರಂಪರೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟಿಂಗ್ ಲೈನ್ ಅಪ್ ಇದ್ದರೆ, ಪಾಕ್ ನಲ್ಲಿ ಎದುರಾಳಿ ಬ್ಯಾಟರ್ ಗಳನ್ನು ಕಾಡುವ ಬೌಲಿಂಗ್ ಲೈನ್ ಅಪ್.
ಒಬ್ಬ ಬೌಲರ್ ವೇಗದಿಂದ ಕಾಟ ನೀಡಿದರೆ, ಇನ್ನೊಬ್ಬ ಬೌಲರ್ ಸ್ವಿಂಗ್ ಅಸ್ತ್ರದ ಮೂಲಕ ಎದುರಾಳಿಗಳನ್ನು ಕಾಡಬಲ್ಲ. ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಸಹ ಹೀಗೆಯೇ. ಒಬ್ಬ ನೆಲಕ್ಕೂರಿ ರನ್ ಕಲೆ ಹಾಕಿದರೆ, ಇನ್ನೊಬ್ಬ ಬ್ಯಾಟರ್ ರನ್ ರೇಟ್ ಹಿಗ್ಗಿಸುತ್ತಲೇ ಸಾಗುತ್ತಾನೆ. ಬ್ಯಾಟಿಂಗ್ ವರ್ಸಸ್ ಬೌಲಿಂಗ್ ಎಂಬ ಮಾತು ಇವಾಗಿನಿಂದ ಬಂದಿಲ್ಲ.
ಇದಕ್ಕೆ ತಲೆ ಹಲವು ವರ್ಷಗಳ ಇತಿಹಾಸ ಇದೆ. ಟೀಮ್ ಇಂಡಿಯಾದ ಬತ್ತಳಿಕೆಯಲ್ಲಿ ವಿಶ್ವದ ಅಗ್ರಮಾನ್ಯ ಬ್ಯಾಟರ್ ಗಳ ದಂಡು ಇದ್ದರೆ, ಪಾಕ್ ತಂಡದಲ್ಲಿ ವಿಶ್ವವನ್ನೇ ಬೆರಗುಗಣ್ಣಿನಿಂದ ನೋಡುವಂತಹ ಬೌಲರ್ ಗಳಿದ್ದಾರೆ. ಟೀಮ್ ಇಂಡಿಯಾದಲ್ಲಿ ಆಗ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತಹ ಬ್ಯಾಟಿಂಗ್ ಲೈನ್ ಅಪ್ ಇರುತ್ತಿತ್ತು.
ಪಾಕ್ ಬಳಿ ರಾವಲ್ಪಿಂಡ್ ವೇಗಿ ಶೋಯಿಬ್ ಅಕ್ತರ್, ವಸೀಮ್ ಅಕ್ರಮ್, ವಕಾರ್ ಯೂನಿಸ್, ಇಮ್ರಾನ್ ಖಾನ್ ರಂತಹ ವೇಗಿಗಳು ಇದ್ದರು. ಇದೇ ಒಂದು ಪರಂಪರೇ ಈಗಲೂ ಮುಂದುವರಿದಿದೆ. ಟೀಮ್ ಇಂಡಿಯಾದ ಡಗೌಟ್ ಒಮ್ಮೆ ನೋಡಿದರೆ ಸಾಕು, ಸಾಲು ಸಾಲು ಸ್ಟಾರ್ ಬ್ಯಾಟರ್ ಗಳು ಕಣ್ಣು ಮುಂದೆ ಬರುತ್ತಾರೆ. ಭಾರತ ತಂಡದಲ್ಲಿ ಈಗ ಬ್ಯಾಟಿಂಗ್ ಲೈನ್ ಅಪ್ ತುಂಬ ಚೆನ್ನಾಗಿದೆ.
ಟಾಪ್ ಆರ್ಡರ್ ನಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಮಿಡ್ಲ್ ಆರ್ಡರ್ನಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಇದ್ದಾರೆ. ಈ ಬ್ಯಾಟರ್ ಗಳು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಇನ್ನು ಪಾಕ್ ತೆಕ್ಕೆಯಲ್ಲಿ ಸ್ಟಾರ್ ವೇಗದ ಬೌಲರ್ ಗಳಿದ್ದಾರೆ.
ಗಂಟೆಗೆ ಸುಲಭವಾಗಿ 150 ಕಿಲೋ ಮೀಟರ್ ನಂತೆ ಚೆಂಡನ್ನು ಎಸೆಯುವಲ್ಲಿ ಇವರು ನಿಪುಣರು. ವಿಶ್ವದಲ್ಲೇ ತನ್ನ ಮಾರಕ ದಾಳಿಯಿಂದ ಹೆಸರುವಾಸಿಯಾಗಿರುವ ಬೌಲರ್ ಶಾಹಿನ್ ಶಾ ಅಫ್ರಿದಿ ಪವರ್ ಪ್ಲೇ ಹಾಗೂ ಡೆತ್ ಓವರ್ ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಇವರಿಗಿದೆ. ಇನ್ನು ನಾಸೀಮ್ ಶಾ, ಹಾರೀಸ್ ರೌಫ್, ಮೊಹಮ್ಮದ್ ನವಾಜ್ ಸಹ ತಂಡಕ್ಕೆ ನೆರವಾಗಬಲ್ಲ ಬೌಲರ್ ಗಳು.
ಬ್ಯಾಟಿಂಗ್ ಹಾಗೂ ಬೌಲಿಂಗ್ ವಾರ್ ನಲ್ಲಿ ಯಾರ ಕೈ ಮೇಲಾಗಿದೆ ಕಾದು ನೋಡಬೇಕಿದೆ.