ಆಟಗಾರನ ನಡೆಗೆ ಮೈದಾನದಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು: ವಿಡಿಯೋ

ಅಬುಧಾಬಿ: ಕ್ರಿಕೆಟ್ ಮೈದಾನದಲ್ಲಿ ಅನೇಕ ಅಚ್ಚರಿಯ, ಅಪರೂಪದ ಸಂಗತಿಗಳು ನಡೆದಿದ್ದಿದೆ. ತಮಾಷೆಯ ಸಂಗತಿಗಳೂ ಕ್ರಿಕೆಟ್ ಪಂದ್ಯಗಳ ವೇಳೆ ನಡೆಯುತ್ತಿರುತ್ತವೆ. ಸದ್ಯ ನಡೆಯುತ್ತಿರುವ ಟಿ10 ಲೀಗ್‌ನಲ್ಲೂ ಇಂಥದ್ದೇ ಒಂದು ತೀರಾ ಅಪರೂಪದ, ತಮಾಷೆಯ ಸಂಗತಿಯೊಂದು ಕಾಣಸಿಕ್ಕಿದೆ.
ಈ ತಮಾಷೆಯ ಸಂಗತಿ ನಡೆದಿದ್ದ ಟಿ10 ಲೀಗ್ 14 ಪಂದ್ಯದಲ್ಲಿ ಟೀಮ್ ಅಬುಧಾಬಿ ಮತ್ತು ನಾದರ್ನ್ ವಾರಿಯರ್ಸ್ ಮುಖಾಮುಖಿಯ ವೇಳೆ. ನಾದರ್ನ್ ವಾರಿಯರ್ಸ್‌ನ ರೋಹನ್ ಮುಸ್ತಫಾ ಆಟದ ಮಧ್ಯೆಯೇ ಬಟ್ಟೆ ಬಿಚ್ಚಿ ತಮಾಷೆಗೀಡಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾದರ್ನ್ ವಾರಿಯರ್ಸ್ ಬ್ಯಾಟಿಂಗ್ ಮಾಡುತ್ತಿತ್ತು. 3ನೇ ಓವರ್‌ನಲ್ಲಿ ಜೇಮೀ ಓವರ್ಟನ್ ಮೊದಲ ಎಸೆತಕ್ಕಾಗಿ ಬಂದಿದ್ದರು. ವಾಸಿಮ್ ಮೊಹಮ್ಮದ್ ಆಗ ಸ್ಟ್ರೈಕ್‌ನಲ್ಲಿದ್ದರು. ಓವರ್ಟನ್ ಎಸೆತಕ್ಕೆ ವಾಸಿಮ್ ಬ್ಯಾಟ್ ಬೀಸಿದಾಗ ಚೆಂಡು ಬೌಂಡರಿ ಲೈನ್‌ನಲ್ಲಿದ್ದ ರೋಹನ್ ಮುಸ್ತಫಾ ಅವರಿದ್ದಲ್ಲಿಗೆ ಉರುಳುತ್ತಾ ಬಂತು.
ರೋಹನ್ ಮುಸ್ತಾಫಾ ಅವರು ಆ ವೇಳೆ ತನ್ನ ಟಿ ಶರ್ಟ್ ಬದಲಾಯಿಸುತ್ತಿದ್ದರು. ಚೆಂಡು ತನ್ನತ್ತ ಬಂದಿದ್ದು ನೋಡಿದ ಮುಸ್ತಫಾ ಅರ್ಧ ಶರ್ಟ್ ಹಾಕಿ ಹಾಗೆಯೇ ಚೆಂಡು ತಡೆಯಲು ಯತ್ನಿಸಿದರು. ಮುಸ್ತಫಾ ಅವರ ಈ ಪರದಾಟ ನೋಡಿ ಮೈದಾನದಲ್ಲಿದ್ದವರೆಲ್ಲ ಗೊಳ್ಳನೆ ನಕ್ಕಿದ್ದರು. ಪಂದ್ಯದಲ್ಲಿ ನಾದರ್ನ್ ವಾರಿಯರ್ಸ್ 8 ವಿಕೆಟ್ ಜಯ ಗಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications