ಪಾಕ್ ವಿರುದ್ಧ ರೋಹಿತ್, ರಹಾನೆ ಕೈಗೆ 'ಚಿಪ್ ಬ್ಯಾಟ್', ಏನಿದರ ವಿಶೇಷ?
ಲಂಡನ್, ಜೂನ್ 01 : ಕ್ರಿಕೆಟ್ ರಂಗದಲ್ಲಿ ತಂತ್ರಜ್ಞಾನ ಸಾಕಷ್ಟು ಮಟ್ಟಿಗೆ ಬೆಳೆದಿದ್ದು, ಇದರ ಮುಂದುವರಿದ ಭಾಗ ಎಂಬಂತೆ ಈವರೆಗೂ ಬೌಲಿಂಗ್ ಎಸೆತದ ವೇಗ ಎಷ್ಟಿದೆ ಎಂಬುದನ್ನು ತಿಳಿಯಬಹುದಿತ್ತು.
ಇದೀಗ ಬ್ಯಾಟ್ಸ್ ಮನ್ ಗಳು ಬ್ಯಾಟ್ ಬೀಸಿದ ವೇಗ, ಬ್ಯಾಟ್ ತಿರುಗಿಸಿದ ಕೋನದ ಮಾಹಿತಿ ಇದೀಗ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ. ಹೌದು. ಹಲವು ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯೆ ಕ್ರೀಡೆಯಾಗಿದ್ದು, ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಒಂದು ತಂಡದ ಮೂವರು ಆಟಗಾರರಿಗೆ 'ಚಿಪ್ ಬ್ಯಾಟ್' ಬಳಸಲು ಅನುಮತಿ ನೀಡಿದೆ.

ಗುರುವಾರದಿಂದ ಆರಂಭವಾಗಿರುವ ಚಾಂಪಿಯನ್ಸ್ ಟ್ರೋಫಿ 2017ರ ಕ್ರಿಕೆಟ್ ಟೂರ್ನಿಯಲ್ಲಿ 'ಚಿಪ್ ಬ್ಯಾಟ್ ಗಳನ್ನು ಬಳಸಲು ಅವಕಾಶ ನೀಡಿದೆ.
ಇದರಿಂದ ಬೌಲರ್ ಎಸೆತ ಎದುರಿಸುವಲ್ಲಿ ಎಡವಿದ್ದು ಹೇಗೆ, ಬ್ಯಾಟ್ ನ ಆಂಗಲ್ ಯಾವ ರೀತಿ ಇದ್ದರೆ ಬೌಲ್ಡ್ ಆಗುವುದನ್ನು ತಪ್ಪಿಸಬಹುದಿತ್ತು ಎನ್ನುವುದನ್ನು ಇನ್ನು ಮುಂದೆ ಬ್ಯಾಟ್ಸ್ ಮನ್ ಗಳು ಸುಲಭವಾಗಿ ತಿಳಿಯಬಹುದಾಗಿದೆ.
ಇಂಟೆಲ್ ಸಿದ್ಧಪಡಿಸಿರುವ ಈ ಚಿಪ್ ಅನ್ನು ಬ್ಯಾಟ್ ನ ಹ್ಯಾಂಡಲ್ ಬಳಿ ಇರಿಸಲಾಗುವುದು. ಇದರಿಂದ ಬ್ಯಾಟ್ ನ ದಿಕ್ಕುಗಳು ಹಾಗೂ ಬ್ಯಾಕ್ ಲಿಫ್ಟ್ ಅರಿಯಲು ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿದೆ.
ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ರಹಾನೆ, ಆರ್.ಅಶ್ವಿನ್ ಜೂನ್ 4 ರಿಂದ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಚಿಪ್ ಅಳವಡಿಸಿರುವ ಬ್ಯಾಟ್ ಬಳಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications