Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಕಾಟ್ಲೆಂಡ್ ವಿರುದ್ಧ ಅಫ್ಘನ್ನರಿಗೆ ಥ್ರಿಲ್ಲಿಂಗ್ ವಿಜಯ

ಡುನೇಡಿನ್, ಫೆ.26: ಕ್ರಿಕೆಟ್ ಲೋಕದ ಶಿಶುಗಳಾದ ಅಫ್ಘಾನಿಸ್ತಾನ ವಿಶ್ವಕಪ್ 2015 ಟೂರ್ನಿಯಲ್ಲಿ ಗುರುವಾರ ಹೊಸ ಇತಿಹಾಸ ನಿರ್ಮಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ. 210 ರನ್ ಚೇಸ್ ಮಾಡಿದ ಅಫ್ಘನ್ನರು ಇನ್ನೂ 3 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿ ವಿಜಯೋತ್ಸವ ಆಚರಿಸಿದರು.

210 ರನ್ ಗುರಿ ಬೆನ್ನು ಹತ್ತಿದ ಅಫ್ಘನ್ನರಿಗೆ ಜಾವೇದ್ ಅಹ್ಮದಿ 51 ಎಸೆತಗಳಲ್ಲಿ 51 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಮಂಗಲ್, ಅಸ್ಘರ್ ಇಬ್ಬರು ಕಳಪೆ ಮೊತ್ತಕ್ಕೆ ಬಲಿಯಾದರು. ನಂತರ ಸಮಿಯುಲ್ಲಾ ಶೆನ್ವಾಲ್ ನಿಧಾನಗತಿಯಲ್ಲಿ ಸಮಯೋಜಿತ ಆಟ ಪ್ರದರ್ಶಿಸಿ 147 ಎಸೆತಗಳಲ್ಲಿ 97ರನ್ ಗಳಿಸಿದ್ದು ಅಫ್ಘನ್ನರಿಗೆ ಗೆಲುವಿನ ಆಸೆ ಹುಟ್ಟಿಸಿತು.

Historic World Cup win for Afghanistan in a last-over thriller

ಕೊನೆ ವಿಕೆಟ್ ಗೆ ಹಮೀದ್ ಹಸನ್ 15 ಹಾಗೂ ವೇಗಿ ಶಾಪೂರ್ ಜದ್ರಾನ್ 12 ಅಜೇಯ ಜೊತೆಯಾಟ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನಕ್ಕೆ ಮೊದಲ ಜಯ ತಂದುಕೊಟ್ಟಿತು. ಸ್ಕಾಟ್ಲೆಂಡ್ ಪರ ಬ್ಯಾರಿಂಗ್ಟನ್ 40ಕ್ಕೆ 4 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಶಾಪೂರ್ ಜದ್ರಾನ್ ದಾಳಿಗೆ ಸಿಲುಕಿ ರನ್ ಗತಿ ಹೆಚ್ಚಿಸಲು ಸಾಧ್ಯವಾಗದೆ ತತ್ತರಿಸಿತು. ಶಾಪೂರ್ 38ಕ್ಕೆ 4, ದಾವ್ಲಾತ್ ಜದ್ರಾನ್ 29ಕ್ಕೆ 3 ವಿಕೆಟ್ ಕಿತ್ತು ಸ್ಕಾಟ್ಲೆಂಡ್ ತಂಡವನ್ನು 210ರನ್ನಿಗೆ ನಿಯಂತ್ರಿಸಿದರು.

ಸ್ಕಾಟ್ಲೆಂಡ್ ಪರ ಕೊನೆ ಹಂತದಲ್ಲಿ ಹಕ್ 31, ಇವಾನ್ಸ್ 28 ರನ್ ಮಧ್ಯಮ ಕ್ರಮಾಂಕದಲ್ಲಿ ಮಕಾನ್ 31, ಮೊಮ್ಮೆಸನ್ 23, ಬ್ಯಾರಿಂಗ್ಟನ್ 25 ಹಾಗೂ ಆರಂಭಿಕ ಬ್ಯಾಟ್ಸ್ ಮನ್ 25 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಅದರೆ, ಉತ್ತಮ ಜೊತೆಯಾಟ ಕಾಣಲು ಸಾಧ್ಯವಾಗದೆ ಅಲ್ಪಮೊತ್ತಕ್ಕೆ ಸ್ಕಾಟ್ಲೆಂಡ್ ಕುಸಿಯಿತು. ಈ ಮೂಲಕ ಅಫ್ಘನ್ನರಿಗೆ ಗೆಲುವಿನ ಆಸೆ ಚಿಗುರಿಸಿತು.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+