ಶತಕ ಬಾರಿಸಿದರೆ ಐಷಾರಾಮಿ ಅಪಾರ್ಟ್ಮೆಂಟ್ ಗಿಫ್ಟ್!
ಬೆಂಗಳೂರು, ಡಿಸೆಂಬರ್ 15 : ಶಾರ್ಜಾದಲ್ಲಿ ಟಿ-10 ಕ್ರಿಕೆಟ್ ಲೀಗ್ ಗೆ ಭರ್ಜರಿಯಾಗಿ ಚಾಲನೆ ಸಿಕ್ಕಿದೆ. 10 ಓವರ್ ಗಳ ಹೊಸ ಬಗೆ ಆಟ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.
ಟಿ-10 ಪಂದ್ಯದಲ್ಲೇನಾದ್ರೂ ಶತಕ ಬಾರಿಸಿದ್ರೆ, ಬಂಪರ್ ಉಡುಗೊರೆ ಕೂಡ ಸಿಗಲಿದೆ. ಸೆಂಚುರಿ ಸರದಾರರಿಗೆ ದುಬೈನಲ್ಲಿ 88 ಲಕ್ಷ ಬೆಲೆಬಾಳುವ ಅಪಾರ್ಟ್ಮೆಂಟ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ಮರಾಠಾ ಅರೇಬಿಯನ್ಸ್ ತಂಡದ ಮಾಲೀಕರಾಗಿರೋ ಅಲಿ ತಂಬಿ ಈ ಆಫರ್ ನೀಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಹಾಗೂ ಕಮ್ರಾನ್ ಅಕ್ಮಲ್ ಅವರಂತಹ ಆಟಗಾರರಿಗೆ ಕಷ್ಟವೇನಲ್ಲ ಅಂತಾನೂ ಹೇಳಿದ್ದಾರೆ. ಅಕ್ಮಲ್ 70 ಬಾಲ್ ಗಳಲ್ಲಿ 150 ರನ್ ಸಿಡಿಸಿದ್ದಾರೆ. ಹಾಗಾಗಿ 40 ಬಾಲ್ ಗಳಲ್ಲಿ ಶತಕ ಬಾರಿಸಿದ್ರೆ ಅಚ್ಚರಿಯೇನಲ್ಲ ಎಂದಿದ್ದಾರೆ.
ಯಾರೆಲ್ಲ ಆಡುತ್ತಿದ್ದಾರೆ: ಟಿ10 ಆಡಲು ಮುಂದಾದ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ, ಮೊಹಮದ್ ಆಮಿರ್, ಅಲೆಕ್ಸ್ ಹೇಲ್ಸ್, ಕಿರಾನ್ ಪೊಲ್ಲಾರ್ಡ್, ಡೇವಿಡ್ ಮಿಲ್ಲರ್, ಡರೇನ್ ಸಾಮಿ ಟೂರ್ನಿಯಲ್ಲಿ ಆಡಲಿರುವ ಇತರ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು.
ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್-ಕೇರಳ ಕಿಂಗ್ಸ್ ಮುಖಾಮುಖಿಯಾಗಿದ್ದು, ಕಿಂಗ್ಸ್ ಗೆಲುವು ಸಾಧಿಸಿದೆ. ದಿನದ 2ನೇ ಪಂದ್ಯದಲ್ಲಿ ಮರಾಠ ಅರೇಬಿಯನ್ಸ್-ಪಾಕ್ತೂನ್ಸ್ ಸೆಣಸಿದ್ದವು. ಪಾಕ್ತೂನ್ಸ್ ಪರ ಅಫ್ರಿದಿ ಹ್ಯಾಟ್ರಿಕ್ ಗಳಿಸಿದರೆ, ಸೆಹ್ವಾಗ್ ಅವರ ಮರಾಠ ತಂಡ 25 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು.
ವಿಶ್ವದಾಖಲೆಯ 228 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡ ಹೆಗ್ಗಳಿಕೆಯ ಶಾರ್ಜಾ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಡಿ. 17ರಂದು ಫೈನಲ್ ಪಂದ್ಯ ನಡೆಯಲಿದೆ.
ಆರು ತಂಡಗಳು: ಭಾರತ ಉಪಖಂಡದ ಒಟ್ಟು 6 ಫ್ರಾಂಚೈಸಿಗಳು ಕಣದಲ್ಲಿವೆ. ಅವುಗಳೆಂದರೆ ಮರಾಠ ಅರೇಬಿಯನ್ಸ್, ಕೇರಳ ಕಿಂಗ್ಸ್ (ಭಾರತ), ಪಾಕ್ತೂನ್ಸ್, ಪಂಜಾಬಿ ಲೆಜೆಂಡ್ಸ್ (ಪಾಕಿಸ್ತಾನ), ಕೊಲಂಬೊ ಲಯನ್ಸ್ (ಶ್ರೀಲಂಕಾ), ಬೆಂಗಾಲ್ ಟೈಗರ್ಸ್ (ಬಾಂಗ್ಲಾದೇಶ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications