Hockey World Cup 2026: ಆಗಸ್ಟ್ 19 ರಂದು ಭಾರತ, ಪಾಕ್ ಕಾದಾಟ: ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ
ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಜಂಟಿಯಾಗಿ ಆಯೋಜಿಸಿರುವ ಈ ಬಾರಿಯ ಹಾಕಿ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೆಗಾ ಟೂರ್ನಿಯು ಆಗಸ್ಟ್ 15 ರಂದು ಆರಂಭವಾಗಿ, ಆಗಸ್ಟ್ 30 ರಂದು ಮುಕ್ತಾಯವಾಗಲಿದೆ. ಈ ಮೊದಲೇ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಐಎಫ್‌ಎಫ್) ಪೋಲ್‌ಗಳನ್ನು ಘೋಷಿಸಿತ್ತು. ಈಗ ವೇಳಾಪಟ್ಟಿಯನ್ನು ಸಹ ಸಂಸ್ಥೆ ಘೋಷಿಸಿದೆ. ಭಾರತದ ಪುರುಷರ ಹಾಗೂ ಮಹಿಳಾ ತಂಡಗಳು ಈ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯಲಿವೆ.
ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ದೇಶಗಳು ಭಾಗವಹಿಸುತ್ತಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡ ತಲಾ ಮೂರು ಮೂರು ಪಂದ್ಯಗಳನ್ನು ಆಡಲಿದೆ. ಭಾರತ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ವೇಲ್ಸ್ ತಂಡಗಳ ವಿರುದ್ಧ ಭಾರತ ಲೀಗ್‌ನಲ್ಲಿ ಕಾದಾಟವನ್ನು ನಡೆಸಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಆಮ್‌ಸ್ಟೆಲ್‌ವೀನ್ ವಾಗ್ನರ್ ಹಾಕಿ ಕ್ರೀಡಾಂಗಣದಲ್ಲಿ ಆಡಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಗಸ್ಟ್ 19 ರಂದು ಕಾದಾಟ ನಡೆಸಲಿವೆ.

ಭಾರತ ಪುರುಷರ ಹಾಕಿ ತಂಡ ಈ ಟೂರ್ನಿಯಲ್ಲಿ ಆಗಸ್ಟ್ 15 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಹಾಕಿ ವಿಶ್ವಕಪ್ ನಾಲ್ಕು ಗುಂಪುಗಳನ್ನು ಒಳಗೊಂಡಿದೆ. ಗುಂಪುಹಂತದಲ್ಲಿ ಎ ಮತ್ತು ಸಿ ಯಿಂದ ಅಗ್ರ ಎರಡು ತಂಡಗಳು ಪೂಲ್ ಇ ನಲ್ಲಿ ಸ್ಥಾನ ಪಡೆಯುತ್ತವೆ. ಹಾಗೆ ಬಿ ಮತ್ತು ಡಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಎಫ್‌ನಲ್ಲಿ ಸ್ಥಾನ ಪಡೆಯುತ್ತವೆ. ಪುರುಷರ ವಿಭಾಗದ ಎರಡೂ ಸೆಮಿಫೈನಲ್ ಪಂದ್ಯಗಳು ಆಗಸ್ಟ್ 28 ರಂದು ನಡೆಯಲಿವೆ.
2026 ರ ಹಾಕಿ ವಿಶ್ವಕಪ್ ಭಾರತದ (ಪುರುಷರ) ವೇಳಾ ಪಟ್ಟಿ
ಆಗಸ್ಟ್ 15: ಭಾರತ vs ವೇಲ್ಸ್
ಆಗಸ್ಟ್ 17: ಭಾರತ vs ಇಂಗ್ಲೆಂಡ್
ಆಗಸ್ಟ್ 19: ಭಾರತ vs ಪಾಕಿಸ್ತಾನ
ಗುಂಪುಗಳು ಹಾಗೂ ಸ್ಥಾನ ಪಡೆದ ತಂಡಗಳು
ಪೂಲ್ ಎ - ನೆದರ್‌ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್.
ಪೂಲ್ ಬಿ - ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಮಲೇಷ್ಯಾ.
ಪೂಲ್ ಸಿ - ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್, ದಕ್ಷಿಣ ಆಫ್ರಿಕಾ.
ಪೂಲ್ ಡಿ- ಇಂಗ್ಲೆಂಡ್, ಭಾರತ, ಪಾಕಿಸ್ತಾನ, ವೇಲ್ಸ್.
ಭಾರತ ಮಹಿಳಾ ತಂಡ ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಭಾರತ ತಂಡ ಟೂರ್ನಿಯಲ್ಲಿ ಆಗಸ್ಟ್ 16 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಹಿಳಾ ವಿಭಾಗದಲ್ಲೂ 16 ತಂಡಗಳು ಭಾಗವಹಿಸುತ್ತಿದ್ದು, ನಾಲ್ಕು ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮಹಿಳಾ ವಿಭಾಗದ ಎರಡೂ ಸೆಮಿಫೈನಲ್ ಪಂದ್ಯಗಳು ಆಗಸ್ಟ್ 27 ರಂದು ನಡೆಯಲಿದ್ದು, ಅಂತಿಮ ಪಂದ್ಯ ಆಗಸ್ಟ್ 29 ರಂದು ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆಯಲಿದೆ.
2026 ರ ವಿಶ್ವಕಪ್ ಭಾರತೀಯ ಮಹಿಳಾ ತಂಡದ ವೇಳಾಪಟ್ಟಿ
ಆಗಸ್ಟ್ 16: ಚೀನಾ vs ಭಾರತ
ಆಗಸ್ಟ್ 18: ಭಾರತ vs ದಕ್ಷಿಣ ಆಫ್ರಿಕಾ
ಆಗಸ್ಟ್ 20: ಭಾರತ vs ಇಂಗ್ಲೆಂಡ್
ಮಹಿಳಾ ಹಾಕಿ ತಂಡದ ಗುಂಪುಗಳು
ಪೂಲ್ ಎ - ನೆದರ್‌ಲ್ಯಾಂಡ್ಸ್, ಆಸ್ಟ್ರೇಲಿಯಾ, ಚಿಲಿ, ಜಪಾನ್.
ಪೂಲ್ ಬಿ - ಅರ್ಜೆಂಟೀನಾ, ಜರ್ಮನಿ, ಯುಎಸ್ಎ, ಸ್ಕಾಟ್ಲೆಂಡ್.
ಪೂಲ್ ಸಿ - ಬೆಲ್ಜಿಯಂ, ಸ್ಪೇನ್, ನ್ಯೂಜಿಲೆಂಡ್, ಐರ್ಲೆಂಡ್.
ಪೂಲ್ ಡಿ - ಚೀನಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications