Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ: ಮುಂಬೈ ಮಣಿಸಿದ ಕರ್ನಾಟಕ ಫೈನಲ್ ಗೆ

ಬೆಂಗಳೂರು, ಫೆ.28: ಪ್ರಸಕ್ತ ರಣಜಿ ಋತುವಿನಲ್ಲಿ ಅಜೇಯವಾಗಿ ಉಳಿದುಕೊಂಡು ಸೆಮಿಫೈನಲ್ ಹಂತ ತಲುಪಿದ್ದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಫೈನಲ್ ತಲುಪಿದೆ.

ಬಲಿಷ್ಠ ಮುಂಬೈ ತಂಡದ ವಿರುದ್ಧ ಸೆಮಿ ಫೈನಲ್ ನಲ್ಲಿ 112 ರನ್ ಗಳ ಜಯ ಸಾಧಿಸಿ ವಿನಯ್ ಪಡೆ ಸತತ ಎರಡನೇ ಬಾರಿಗೆ ಅಂತಿಮ ಹಣಾಹಣಿಗೆ ಅರ್ಹತೆ ಪಡೆದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಸೆಮೀಸ್ ಪಂದ್ಯದ ಮೊದಲ ದಿನ 21 ವಿಕೆಟ್ ಗಳು ಉದುರಿತ್ತು.

ಉಪಾಂತ್ಯದಲ್ಲಿ ಬಲಿಷ್ಠ ಮುಂಬೈ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿತ್ತು. ಅದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಮುಂಬೈ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕರ್ನಾಟಕಕ್ಕೆ ಗೆಲುವು ತಡವಾಗಿ ದಕ್ಕುವಂತೆ ಮಾಡಿತು.

Holders Karnataka beat Mumbai to enter Ranji Trophy final

ಗೆಲ್ಲಲು ಬೇಕಿದ್ದ 445ರನ್ ಚೇಸ್ ಮಾಡಿದ ಮುಂಬೈ ತಂಡ ನಾಲ್ಕನೇ ದಿನದ ಮೊದಲ ಸೆಷನ್ಸ್ ನಲ್ಲೇ 332ರನ್ನಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ. ಅಭಿಶೇಕ್ ನಾಯರ್ ಗಾಯಗೊಂಡಿದ್ದರಿಂದ ಇಂದು ಬ್ಯಾಟಿಂಗೆ ಗೆ ಇಳಿಯಲಿಲ್ಲ. ಮೂರನೇ ದಿನದ ಅಂತ್ಯಕ್ಕೆ ಮುಂಬೈ 277/6, 107ಓವರ್ಸ್ ಗಳಿಸಿ ಪಂದ್ಯವನ್ನು ಕುತೂಹಲದ ಘಟ್ಟಕ್ಕೆ ಕೊಂಡೊಯ್ದಿತ್ತು.

ಕರ್ನಾಟಕದ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಅಭಿಮನ್ಯು ಮಿಥುನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿ ತಂಡದ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದರು. 2ನೇ ಇನ್ನಿಂಗ್ಸ್ ನಲ್ಲಿ 4/69 ಪಡೆದರು.

ಎಸ್ ಅರವಿಂದ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ವಿನಯ್ ಕುಮಾರ್ ಅವರು 6/20 ಕಬಳಿಸಿ ಮುಂಬೈ 44ಕ್ಕೆ ಆಲೌಟ್ ಆಗಿತ್ತು.ಕರ್ನಾಟಕಕ್ಕೆ ತಮಿಳುನಾಡು ಅಥವಾ ಮಹಾರಾಷ್ಟ್ರ ಎದುರಾಳಿಯಾಗಲಿದ್ದು, ಮುಂಬೈನಲ್ಲಿ ಮಾರ್ಚ್ 8 ರಿಂದ ಫೈನಲ್ ಹಣಾಹಣಿ ನಡೆಯಲಿದೆ.

ಕರ್ನಾಟಕ : ಮೊದಲ ಇನ್ನಿಂಗ್ಸ್ 202 ಆಲೌಟ್ 60.2 ಓವರ್ಸ್
(ರಾಬಿನ್ ಉತ್ತಪ್ಪ 60, ಮನೀಷ್ ಪಾಂಡೆ 34, ಕರುಣ್ ನಾಯರ್ 49 ಅಜೇಯ, ಶಾರ್ದೂಲ್ 61ಕ್ಕೆ 4, ವಿಲ್ಕಿನ್ ಮೋಟಾ 18ಕ್ಕೆ 2)
ಎರಡನೇ ಇನ್ನಿಂಗ್ಸ್: 286. 77.5 ಓವರ್ಸ್
(ಅಭಿಮನ್ಯು ಮಿಥುನ್ 89, ಸಮರ್ಥ್ ಆರ್ 58, ಮನೀಶ್ ಪಾಂಡೆ 42, ಶಾರ್ದೂಲ್ 69ಕ್ಕೆ 4, ಬಿಎಸ್ ಸಂಧು 45ಕ್ಕೆ 3)

ಮುಂಬೈ ಮೊದಲ ಇನ್ನಿಂಗ್ಸ್

(ಶ್ರೇಯಸ್ ಐಯರ್ 15. ಸೂರ್ಯ ಕುಮಾರ್ ಯಾದವ್ 12, ವಿನಯ್ ಕುಮಾರ್ 20ಕ್ಕೆ6, ಎ ಶ್ರೀನಾಥ್ 1ಕ್ಕೆ 2, ಮಿಥುನ್ ಎ 23ಕ್ಕೆ 1)
ಎರಡನೇ ಇನ್ನಿಂಗ್ಸ್ : 332 ಆಲೌಟ್ 121.1 ಓವರ್ಸ್
(ಆದಿತ್ಯ ತಾರೆ 98, ಶ್ರೇಯಸ್ ಐಯರ್ 50, ಎಸ್ ಲಾಡ್ 74, ಎ ಮಿಥುನ್ 69ಕ್ಕೆ 4, ಎ ಅರವಿಂದ್ 64ಕ್ಕೆ 2, ಶ್ರೇಯಸ್ ಗೋಪಾಲ್ 68ಕ್ಕೆ 2)

ಫಲಿತಾಂಶ:
ಕರ್ನಾಟಕಕ್ಕೆ 112 ರನ್ ಗಳ ಜಯ

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+