For Quick Alerts
ALLOW NOTIFICATIONS  
For Daily Alerts
 

'ಅಗತ್ಯಬಿದ್ದರೆ ನಾನು, ಕೊಹ್ಲಿ ಬೌಲಿಂಗ್ ಮಾಡುತ್ತೇವೆ'; ರೋಹಿತ್ ಶರ್ಮಾ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಪತ್ರಿಕಾಗೋಷ್ಠಿ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ತೀಕ್ಷ್ಣ ಮತ್ತು ಹಾಸ್ಯಭರಿತ ಉತ್ತರಗಳಿಗೆ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ ಸೋಮವಾರ, ಆಗಸ್ಟ್ 21ರಂದು ನವದೆಹಲಿಯಲ್ಲಿ ನಡೆದ 2023ರ ಏಷ್ಯಾ ಕಪ್‌ಗೆ ಭಾರತ ತಂಡದ ಆಯ್ಕೆ ಸಭೆಯಲ್ಲಿ ಅಂತಹದ್ದೇ ಒಂದು ಹಾಸ್ಯದ ಉತ್ತರ ನೀಡಿದರು.

ಬಿಸಿಸಿಐ 2023ರ ಏಷ್ಯಾ ಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದ ನಂತರ, 2023ರ ವಿಶ್ವಕಪ್ ತಂಡವು 2011ರ ತಂಡಕ್ಕಿಂತ ಉತ್ತಮ ಆಲ್‌ರೌಂಡರ್‌ಗಳನ್ನು ಹೊಂದಿರಲಿದೆಯೇ ಎಂದು ನೀವು ಭಾವಿಸುತ್ತೀರಾ ಎಂದು ರೋಹಿತ್ ಶರ್ಮಾಗೆ ಪ್ರಶ್ನಿಸಲಾಯಿತು. ಆಗ ಭಾರತೀಯ ನಾಯಕ ನೀಡಿದ ಉತ್ತರವು ಇಡೀ ಪತ್ರಿಕಾಗೋಷ್ಠಿಯನ್ನು ನಗೆಗಡಲಲ್ಲಿ ತೇಲಿಸಿತು.

Hopefully Me And Virat Kohli Can Bowl If Needed; Rohit Sharma Replies To Journalists

"ನಾನು ಮತ್ತು ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಕೆಲವು ಓವರ್‌ಗಳನ್ನು ಬೌಲ್ ಮಾಡಬಹುದೆಂದು ಆಶಿಸುತ್ತೇವೆ," ಎಂದು ರೋಹಿತ್ ಶರ್ಮಾ ನಗುತ್ತಾ ಉತ್ತರಿಸಿದರು.

ಇನ್ನು ಏಷ್ಯಾ ಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಿದ ನಂತರ, ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ X (ಟ್ವಿಟ್ಟರ್) ಖಾತೆಯಲ್ಲಿ ಸನ್‌ರೈಸ್ ಎಮೋಜಿಯಯನ್ನು ಹಂಚಿಕೊಂಡರು.

Hopefully Me And Virat Kohli Can Bowl If Needed; Rohit Sharma Replies To Journalists

ಈ ವರ್ಷ ಯುಜ್ವೇಂದ್ರ ಚಹಾಲ್ ಅವರು ಆಡಿದ ಒಂಬತ್ತು ಟಿ20 ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಏಷ್ಯಾ ಕಪ್‌ಗೆ ಆಯ್ಕೆಯಾದ ಕುಲದೀಪ್ ಯಾದವ್ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ.

ಕುಲದೀಪ್ ಯಾದವ್ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 6 ರನ್‌ಗೆ 4 ವಿಕೆಟ್‌ಗಳ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಏಳು ಟಿ20 ಪಂದ್ಯಗಳಲ್ಲಿ 28 ರನ್‌ಗೆ 3 ವಿಕೆಟ್‌ಗಳ ಅತ್ಯುತ್ತಮ ಅಂಕಿಗಳೊಂದಿಗೆ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಏಷ್ಯಾ ಕಪ್ 2023 ಕ್ಕೆ 17 ಸದಸ್ಯರ ತಂಡವನ್ನು ಪ್ರಕಟಿಸಿದೆ, ಇದು

ಆಗಸ್ಟ್ 30ರಂದು ಪ್ರಾರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಪ್ರಕಟಿಸಿದ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮರಳಿದ್ದಾರೆ ಮತ್ತು ಯುವ ಬ್ಯಾಟರ್ ತಿಲಕ್ ವರ್ಮಾ ಚೊಚ್ಚಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಈ ವೇಳೆ ಮಾತನಾಡಿದ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, "ಅಕ್ಷರ್ ಪಟೇಲ್ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆತ ಬ್ಯಾಟಿಂಗ್ ಕೂಡ ಮಾಡಬಲ್ಲರು. ಕುಲದೀಪ್ ಯಾದವ್ ಈ ಹಂತಕ್ಕೆ ಸದ್ಯ ಅದ್ಭುತ ಪ್ರದರ್ಶನ ನೀಡಿದ್ದಾರೆ," ಎಂದರು.

ಇನ್ನು ನಾಯಕ ರೋಹಿತ್ ಶರ್ಮಾ ಪ್ರತಕ್ರಿಯಿಸಿ, "ತಂಡವು ಆಫ್ ಅಥವಾ ಲೆಗ್ ಸ್ಪಿನ್ನರ್ ಬಗ್ಗೆ ಚರ್ಚೆ ನಡೆಸಿದೆ. ಆದರೆ 8 ಮತ್ತು 9ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುವವರು ನಮಗೆ ಬೇಕು," ಎಂದು ತಿಳಿಸಿದರು.

"ಅಕ್ಷರ್ ಪಟೇಲ್ ಎಲ್ಲಾ ಸ್ವರೂಪಗಳು ಮತ್ತು ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲೂ ಕೆಲವು ಅವಕಾಶಗಳು ಸಿಕ್ಕವು. ಅವನು ತಂಡದಲ್ಲಿರುವ ನಮಗೆ ಬ್ಯಾಟಿಂಗ್ ಡೆಪ್ತ್, ಎಡಗೈ ಆಯ್ಕೆಯನ್ನು ನೀಡುತ್ತದೆ," ಎಂದು ರೋಹಿತ್ ಶರ್ಮಾ ಹೇಳಿದರು.

"ನಾವು ರವಿಚಂದ್ರನ್ ಅಶ್ವಿನ್ ವಾಷಿಂಗ್ಟನ್ ಸುಂದರ್ ಬಗ್ಗೆಯೂ ಯೋಚಿಸಿದ್ದೇವೆ. ನಾವು ಅವರನ್ನು ಸೇರಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ವೇಗಿಯನ್ನು ಹೊರಗಿಡುವುದರ ಮೂಲಕ. ನಾವು ಇದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ, ಮುಂದಿನ ಎರಡು ತಿಂಗಳಲ್ಲಿ ವೇಗಿಗಳು ಬೃಹತ್ ಪಾತ್ರವನ್ನು ವಹಿಸಲಿದ್ದಾರೆ," ಎಂದರು.

"ಆದರೆ ಎಲ್ಲರಿಗೂ ಬಾಗಿಲು ತೆರೆದಿದೆ. ನಮಗೆ ವಿಶ್ವಕಪ್‌ನಲ್ಲಿ ಯುಜ್ವೇಂದ್ರ ಚಹಾಲ್ ಅಗತ್ಯವಿದ್ದರೆ, ನಾವು ಅವನನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತೇವೆ. ಅದೇ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್‌ ಸುಂದರ್‌ಗೆ ಅನ್ವಯಿಸುತ್ತದೆ," ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.

Story first published: Monday, August 21, 2023, 21:01 [IST]
Other articles published on Aug 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+