Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೇಯಸ್ ಅಯ್ಯರ್‌ಗೆ ದಕ್ಷಿಣ ಆಫ್ರಿಕಾದಲ್ಲಿ ನಿಜವಾದ ಅಗ್ನಿಪರೀಕ್ಷೆ : ಸೌರವ್ ಗಂಗೂಲಿ

Shreyas iyer

ಡಿಸೆಂಬರ್ 26ರಿಂದ ಪ್ರಾರಂಭಗೊಳ್ಳಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಪ್ರದರ್ಶನ ಕುರಿತು ಸಾಕಷ್ಟು ವಿಶ್ವಾಸ ಹೊಂದಿರುವುದಾಗಿ ಸೌರವ್ ಗಂಗೂಲಿ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ದಾಖಲಿಸಿದ ಶ್ರೇಯಸ್ ಅಯ್ಯರ್ ಉತ್ತಮ ಆರಂಭವನ್ನು ಪಡೆದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ದಕ್ಷಿಣ ಆಫ್ರಿಕಾದಲ್ಲಿ ಅಯ್ಯರ್‌ನಲ್ಲಿರುವ ಪ್ರತಿಭೆ ಎಲ್ಲರಿಗೂ ಕಾಣಿಸಲಿದೆ ಎಂದು ಗಂಗೂಲಿ ಭಾವಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ, ಆದರೆ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ಹರಿಣಗಳ ನಾಡು ದೊಡ್ಡ ಪರೀಕ್ಷೆಯಾಗಿದೆ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

"ನನ್ನ ಪ್ರಕಾರ ಅವರು ದೀರ್ಘಕಾಲದವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50ರ ಸರಾಸರಿ ಹೊಂದಿದ್ದಾರೆ. ನಾನು ಅವರ ಪ್ರಥಮ ದರ್ಜೆಯ ಸರಾಸರಿಯನ್ನು ನೋಡಿದೆ, ಅವರು 10 ವರ್ಷಗಳ ಅವಧಿಗೆ 52 ರ ಸರಾಸರಿಯನ್ನು ಹೊಂದಿದ್ದರು ಮತ್ತು ನೀವು ಅದನ್ನು ಮಾಡಲು ಸಾಮಾನ್ಯವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಕೆಲವು ಹಂತದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ನಿಮಗೆ ಅವಕಾಶ ಬೇಕಾಗುತ್ತದೆ''. ಎಂದಿದ್ದಾರೆ

"ಆತ ತನ್ನ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಆದರೆ ಅವರು ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಅವರ ನಿಜವಾದ ಪರೀಕ್ಷೆ ಬರುತ್ತದೆ. ಅವರು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ಗೆ ಹೋದಾಗ, ವೇಗ ಮತ್ತು ಬೌನ್ಸ್‌ನೊಂದಿಗಿನ ಪ್ರದರ್ಶನ ಉತ್ತಮ ಪ್ರದರ್ಶನ ನೀಡಬೇಕಿದೆ'' ಎಂದು ಗಂಗೂಲಿ ಸಂಭಾಷಣೆಯೊಂದರಲ್ಲಿ ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಶತಕವು ಭಾರತವು ಸಂಕಷ್ಟಕ್ಕೆ ಸಿಲುಕಿದ ಕ್ಷಣದಲ್ಲಿ ಬಂದಿತು. ಭಾರತದ ಪರ 303ನೇ ಟೆಸ್ಟ್ ಕ್ರಿಕೆಟರ್ ಆಗಿ ಪದಾರ್ಪಣೆ ಮಾಡಿದ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಮೂರಂಕಿ ದಾಟಿ ಹೆಗ್ಗುರುತು ಮೂಡಿಸಿದ ಕೀರ್ತಿ ಇವರದ್ದಾಗಿದೆ.

157 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಟೀಂ ಇಂಡಿಯಾದ 16 ಬ್ಯಾಟ್ಸ್‌ಮನ್ ಆಗಿದ್ದಾರೆ. ಕಾನ್ಪುರದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದ್ರು. ಈ ಮೊದಲು ಕಾನ್ಪುರ ಪಿಚ್‌ನಲ್ಲಿ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಚೊಚ್ಚಲ ಶತಕ ದಾಖಲಿಸಿದ್ದರು.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭಾರತದಲ್ಲಿ ಶತಕ ದಾಖಲಿಸಿರುವ ಟೀಂ ಇಂಡಿಯಾ ಆಟಗಾರರು

1) ಲಾಲಾ ಅಮರನಾಥ್ ಇಂಗ್ಲೆಂಡ್ ವಿರುದ್ಧ 1933ರಲ್ಲಿ ಮುಂಬೈನಲ್ಲಿ 118 ರನ್ ದಾಖಲೆ
2) ದೀಪಕ್ ಶೊಧನ್ ಪಾಕಿಸ್ತಾನ ವಿರುದ್ಧ 1952ರಲ್ಲಿ ಕೊಲ್ಕತ್ತಾದಲ್ಲಿ 110 ರನ್
3) ಎಜಿ ಕ್ರಿಪಾಲ್ ನ್ಯೂಜಿಲೆಂಡ್ ವಿರುದ್ಧ 1955ರಲ್ಲಿ ಹೈದ್ರಾಬಾದ್‌ನಲ್ಲಿ ಅಜೇಯ 100 ರನ್
4) ಹನುಮಂತ್ ಸಿಂಗ್ ಇಂಗ್ಲೆಂಡ್ ವಿರುದ್ಧ 1964ರಲ್ಲಿ ದೆಹಲಿಯಲ್ಲಿ 105 ರನ್
5) ಗುಂಡಪ್ಪ ವಿಶ್ವನಾಥ್ ಆಸ್ಟ್ರೇಲಿಯಾ ವಿರುದ್ಧ 1969ರಲ್ಲಿ ಕಾನ್ಪುರದಲ್ಲಿ 137 ರನ್
6) ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್ ವಿರುದ್ಧ 1985ರಲ್ಲಿ ಕೊಲ್ಕತ್ತಾದಲ್ಲಿ 110 ರನ್
7) ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ ಮೊಹಾಲಿಯಲ್ಲಿ 187 ರನ್
8) ರೋಹಿತ್ ಶರ್ಮಾ ವೆಸ್ಟ್‌ ಇಂಡೀಸ್ ವಿರುದ್ಧ ಕೊಲ್ಕತ್ತಾದಲ್ಲಿ 177 ರನ್
9) ಪೃಥ್ವಿ ಶಾ ವೆಸ್ಟ್ ಇಂಡೀಸ್ ವಿರುದ್ಧ 2018ರಲ್ಲಿ ಕೊಲ್ಕತ್ತಾದಲ್ಲಿ 134 ರನ್
10) ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧ 2021ರಲ್ಲಿ ಕಾನ್ಪುರದಲ್ಲಿ 105 ರನ್

BCCI ನಿಂದ ನೋಟಿಸ್ ಬರುವ ಸಾಧ್ಯತೆ !| Oneindia Kannada

Story first published: Thursday, December 16, 2021, 22:32 [IST]
Other articles published on Dec 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+