ರಸೆಲ್‌ಗೆ ಚಳ್ಳೆಹಣ್ಣು ತಿನ್ನಿಸಿದ ಮಿಚೆಲ್ ಸ್ಟಾರ್ಕ್: ವೈರಲ್ ವಿಡಿಯೋ

ಸೇಂಟ್ ಲೂಸಿಯಾ: ಬುಧವಾರ (ಜುಲೈ 14) ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ20ಐ ಪಂದ್ಯದಲ್ಲಿ ಅಸ್ಟ್ರೇಲಿಯಾ ತಂಡ ರೋಚಕ 4 ರನ್‌ಗಳ ಜಯ ದಾಖಲಿಸಿದೆ. ಅದೂ ಕೂಡ ಆ್ಯಂಡ್ರೆ ರಸೆಲ್‌ನಂಥ ಸ್ಫೋಟಕ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿದ್ದೂ ವಿಂಡೀಸ್ ತಂಡ ಪಂದ್ಯ ಸೋತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 189 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 185 ರನ್ ಬಾರಿಸಿ ಶರಣಾಯಿತು. ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಅಜೇಯ 24 (12 ಎಸೆತ) ರನ್ ಬಾರಿಸಿದ್ದರು (ವಿಡಿಯೋ ಕೆಳಗಿದೆ ನೋಡಿ).

ಯಾರ್ಕರ್‌ಗಳ ಎಸೆದ ಸ್ಟಾರ್ಕ್
ಕೊನೇ ಓವರ್ ವೆಸ್ಟ್ ಇಂಡೀಸ್ ಗೆಲ್ಲು 11 ರನ್ ಬೇಕಿತ್ತು. ಆ ವೇಳೆ ಬಿರುಗೈ ದಾಂಡಿಗ ರಸೆಲ್ ಸ್ಟ್ರೈಕ್‌ನಲ್ಲಿ ಇದ್ದರಾದರೂ ಅವರಿಗೆ ಹೆಚ್ಚಿಗೆ 5 ರನ್ ಹೊಡೆಯೋಕ್ಕಾಗಲಿಲ್ಲ. ಕಾರಣ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್. ಕೊನೇ ಓವರ್‌ನಲ್ಲಿ ಸ್ಟಾರ್ಕ್ ಅವರು ವಿವಿಧ ರೀತಿಯ ಯಾರ್ಕರ್‌ಗಳನ್ನೇ ಹಾಕಿದ್ದರಿಂದ ರಸೆಲ್‌ಗೆ ಕೊನೇ ಓವರ್‌ನಲ್ಲಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲೇಯಿಲ್ಲ.

ಕೊನೇ ಓವರ್‌ನಲ್ಲಿ ರನ್
ಅಂತಿಮ ಓವರ್‌ನಲ್ಲಿ ರಸೆಲ್‌ಗೆ ಸ್ಟಾರ್ಕ್ ನೀಡಿದ ರನ್ ನೋಡಿದರೆ ಕ್ರಮವಾಗಿ 0, 0, 0, 0, 2, 4 ರನ್ ಅಷ್ಟೇ. ಸ್ಟಾರ್ಕ್ ಓವರ್‌ನಲ್ಲಿ ರಸೆಲ್ ಕೊನೇ ಎರಡು ಎಸೆತಗಳಿಗೆ ರಸೆಲ್ 2, 4 ರನ್ ಹೊಡೆದಿದ್ದು ಬಿಟ್ಟರೆ ಆ ಓವರ್‌ನಲ್ಲಿ ಬೇರೆ ರನ್ ಬಂದಿರಲೇಯಿಲ್ಲ. ಪಂದ್ಯದ ಸೋಲಿಗೆ ಇದೂ ಒಂದು ನೆಪವಾಯ್ತು.
ರಸೆಲ್‌ಗೆ ಒಳ್ಳೆ ಚಳ್ಳೆಹಣ್ಣು
ಅಂತೂ ಬಿರುಸಿನ ಬ್ಯಾಟಿಂಗ್ ಮೂಲಕ ಪಂದ್ಯ ಗೆಲ್ಲಿಸುತ್ತೇನೆ ಅಂದುಕೊಂಡಿದ್ದ ರಸೆಲ್‌ಗೆ ಸ್ಟಾರ್ಕ್ ಚೆನ್ನಾಗಿಯೇ ಚಳ್ಳೆಹಣ್ಣು ತಿನ್ನಿಸಿದ್ದರು. ಅಂತಿಮ ಓವರ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಂಡೀಸ್ ಪಂದ್ಯ ಸೋಲಲು ಮತ್ತೊಂದು ಕಾರಣವೆಂದರೆ ಆಸೀಸ್ ಆಲ್ ರೌಂಡರ್ ಮಿಚೆಲ್ ಮಾರ್ಷ್. ಮಾರ್ಷ್ ತಂಡದ ಪರ 3 ವಿಕೆಟ್ ಪಡೆದರಲ್ಲದೆ 44 ಎಸೆತಗಳಲ್ಲಿ 75 ರನ್ ಕೊಡುಗೆಯೂ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications