ಜೂನ್ 14 ಶುಕ್ರವಾರ, ಟಿ20 ವಿಶ್ವಕಪ್ 2024ರ ಲೀಗ್ ಹಂತದ 30ನೇ ಪಂದ್ಯ ಇಂದು ಅಂದರೆ ಜೂನ್ 14 ರಂದು (ಶುಕ್ರವಾರ) ಅಮೇರಿಕಾ ಮತ್ತು ಐರ್ಲೆಂಡ್ ನಡುವೆ ಎ ಗುಂಪಿನಿಂದ ನಡೆಯಲಿದೆ.
ಈ ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹವಾಮಾನ ವರದಿಗಳ ಪ್ರಕಾರ ಈ ಪಂದ್ಯಕ್ಕೆ ಮಳೆಯ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ಯುಎಸ್ಎ ಮತ್ತು ಐರ್ಲೆಂಡ್ ನಡುವಿನ ಈ ಪಂದ್ಯವು ಮಳೆಯಿಂದ ರದ್ದಾದರೆ ಪಾಕಿಸ್ತಾನ ಸಂಕಷ್ಟ ಎದುರಾಲಿದೆ. ಹೀಗಾಗಿ ಟೆಕ್ಷನ್‌ನಲ್ಲಿರುವ ಪಾಕಿಸ್ತಾನ ತಂಡ ಸೂಪರ್-8 ಕ್ಕೆ ಅರ್ಹತೆ ಪಡೆಯುವ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಅಮೇರಿಕಾ ಮತ್ತು ಐರ್ಲೆಂಡ್ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯ ವೇಳೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಪಂದ್ಯ ಸ್ಥಳೀಯ (ಯುಎಸ್‌ಎ) ಕಾಲಮಾನದ ಪ್ರಕಾರ ಬೆಳಗ್ಗೆ 10.30ರಿಂದ ನಡೆಯಲಿದೆ.

ಈ ಸಮಯದಲ್ಲಿ ಫ್ಲೋರಿಡಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯದ ವೇಳೆ ಶೇ.75ರಷ್ಟು ಮಳೆಯಾಗುವ ಸಾಧ್ಯತೆಗಳಿದ್ದು, ಇಡೀ ಪಂದ್ಯದ ವೇಳೆ ದಟ್ಟವಾದ ಮೋಡಗಳು ಕೂಡ ಬೀಳುವ ನಿರೀಕ್ಷೆಯಿದೆ. ಇದರೊಂದಿಗೆ ಶೇ.50ರಷ್ಟು ಪ್ರಬಲ ಚಂಡಮಾರುತದ ಸಾಧ್ಯತೆ ಇದೆ.
ಫ್ಲೋರಿಡಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುತ್ತಿದ್ದು, ಈ ಪಂದ್ಯದ ಹೊರತಾಗಿ ಇತರ ಪಂದ್ಯಗಳಿಗೂ ತೊಂದರೆಯಾಗುವ ಭೀತಿ ಎದುರಾಗಿದೆ.
ಯುಎಸ್ಎ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನದ ಕನಸು ಭಗ್ನವಾಗಲಿದೆ. ಪ್ರಸ್ತುತ 'ಎ' ಗುಂಪಿಯನಲ್ಲಿರುವ ಯುಎಸ್‌ಎ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು , 1 ಸೋಲಿನೊಂದಿಗೆ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆದರೆ ಐರ್ಲೆಂಡ್ ತಂಡ 2 ಪಂದ್ಯಗಳಲ್ಲಿ ಖಾತೆ ತೆರೆಯದೆ 2 ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಒಂದು ವೇಳೆ ಯುಎಸ್‌ಎ ಮತ್ತು ಐರ್ಲೆಂಡ್ ನಡೆಯದಿದ್ದರೆ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಯುಎಸ್‌ಎ ತಂಡವು 4 ಪಂದ್ಯಗಳಿಂದ ಒಟ್ಟು 5 ಅಂಕಗಳನ್ನು ಹೊಂದಿರುತ್ತದೆ. ಈ ಐದು ಅಂಕಗಳೊಂದಿಗೆ ಯುಎಸ್‌ಎ 2ನೇ ಸ್ಥಾನದಲ್ಲಿರುತ್ತದೆ.
ಇತ್ತ ಪಾಕಿಸ್ತಾನ ತಂಡ ಇದುವರೆಗೆ 3 ಪಂದ್ಯಗಳನ್ನಾಡಿದ್ದು, 2 ಸೋಲು ಹಾಗು 1ರಲ್ಲಿ ಗೆದ್ದಿದೆ. ಸದ್ಯ ಪಾಕಿಸ್ತಾನ 2 ಅಂಕ ಹೊಂದಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಒಟ್ಟು 4 ಅಂಕಗಳನ್ನು ಗಳಿಸಲಿದೆ.
ಅಮೇರಿಕಾ ತಂಡ 5 ಅಂಕಗಳೊಂದಿಗೆ ಸೂಪರ್-8 ಪ್ರವೇಶಿಸಲಿದ್ದು, ಪಾಕಿಸ್ತಾನ ಲೀಗ್ ಹಂತದಿಂದಲೇ ಹೊರಬೀಳಲಿದೆ. ಪಾಕಿಸ್ತಾನವು ಸೂಪರ್ -8 ತಲುವಬೇಕಾದರೆ ಯುಎಸ್‌ಎ ಮತ್ತು ಐರ್ಲೆಂಡ್ ಪಂದ್ಯ ಮಳೆಯಿಂದಾಗಿ ರದ್ದಾಗಬಾರದು. ಜೊತೆಗೆ ಈ ಪಂದ್ಯದಲ್ಲಿ ಅಮೇರಿಕಾ ತಂಡ ವಿರುದ್ಧ ಐರ್ಲೆಂಡ್ ದೊಡ್ಡ ಅಂತರದಿಂದ ಗೆಲುವು ಸಾಧಿಸಬೇಕು.
ಈ ವೇಳೆ ಯುಎಸ್ಎ 4 ಪಂದ್ಯಗಳ ನಂತರ 4 ಅಂಕಗಳನ್ನು ಹೊಂದಲಿದೆ. ಆಗ ಐರ್ಲೆಂಡ್ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಪಾಕಿಸ್ತಾನ ಕೂಡ 4 ಅಂಕಗಳನ್ನು ಪಡೆಯಲಿದೆ. ಯುಎಸ್‌ಎ ತಂಡಕ್ಕಿಂತ ಪಾಕಿಸ್ತಾನ ಉತ್ತಮ ನೆಟ್ ರನ್ ಹೊಂದಿದ್ದರೆ ಸೂಪರ್-8 ಕ್ಕೆ ಪ್ರವೇಶಿಸುವ ಅವಕಾಶವನ್ನು ಹೊಂದಿರುತ್ತದೆ.
ಆದ್ದರಿಂದ ಈ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನಕ್ಕೆ ಟೂರ್ನಿಯಿಂದ ಹೊರಗುಳಿಯಲಿದೆ. ಒಂದು ವೇಳೆ ಯುಎಸ್‌ಎ ಎದುರು ಐರ್ಲೆಂಡ್ ಗೆದ್ದರೆ ಪಾಕಿಸ್ತಾನದ ಕಸನು ಟೂರ್ನಿಯಲ್ಲಿ ಜೀವಂತವಾಗಿರಲಿದೆ.