Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul Century: ಪಾಕ್ ವಿರುದ್ಧ ಕೆಎಲ್ ರಾಹುಲ್ ಅಮೋಘ ಶತಕ; ಅಥಿಯಾ, ಸುನೀಲ್ ಶೆಟ್ಟಿ ಪ್ರತಿಕ್ರಿಯೆ ಏನು?

ಸೋಮವಾರ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅದ್ಭುತವಾಗಿ ಪುನರಾಗಮನ ಮಾಡಿದರು.

ಕೆಎಲ್ ರಾಹುಲ್ ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಮತ್ತು 12 ಬೌಂಡರಿಗಳ ಸಮೇತ 106 ಎಸೆತಗಳಲ್ಲಿ 111 ರನ್ ಗಳಿಸಿ ಅಜೇಯರಾಗುಳಿದರು. ಕೆಎಲ್ ರಾಹುಲ್ ಜೊತೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 94 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಅಜೇಯ 122 ರನ್ ಬಾರಿಸಿದರು.

athiya-and-her-father-suniel-shetty

ದೀರ್ಘಕಾಲದ ಗಾಯದ ವಿಶ್ರಾಂತಿಯ ನಂತರ ಕೆಎಲ್ ರಾಹುಲ್ ಭಾರತದ ತಂಡದ ಆಡುವ 11ರ ಬಳಗಕ್ಕೆ ಮರಳಿದರು. ಈ ಹಿಂದೆ 2023ರ ಐಪಿಎಲ್ ವೇಳೆ ತೊಡೆಗೆ ಗಾಯ ಮಾಡಿಕೊಂಡಿದ್ದರು. ನಂತರ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ಮತ್ತು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾದರು.

ಆಡುವ ಅನುಮಾನದಲ್ಲೇ ಕೆಎಲ್ ರಾಹುಲ್ ಅವರನ್ನು 2023ರ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಗುಂಪು ಹಂತದ ಪಂದ್ಯಗಳನ್ನು ತಪ್ಪಿಸಿಕೊಂಡರು. ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅವರ ಅದ್ಭುತ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಿತು.

ಇದೇ ವೇಳೆ ಕೆಎಲ್ ರಾಹುಲ್ ಅವರ ಪತ್ನಿ ಹಾಗೂ ನಟಿ ಅಥಿಯಾ ಶೆಟ್ಟಿ ಅವರು ತಮ್ಮ ಬಾಳ ಸಂಗಾತಿಯನ್ನು ಹುರಿದುಂಬಿಸಿದ್ದಾರೆ.

ಅಥಿಯಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ಕತ್ತಲೆ ರಾತ್ರಿಯೂ ಕೊನೆಗೊಳ್ಳುತ್ತದೆ ಮತ್ತು ಸೂರ್ಯ ಉದಯಿಸುತ್ತಾನೆ. ನೀವು ಎಲ್ಲವೂ ಅಗಿರುವೆ, ಐ ಲವ್ ಯೂ," ಎಂದು ಬರೆದುಕೊಂಡಿದ್ದಾರೆ.

ಇನ್ನು ಅಥಿಯಾ ಶೆಟ್ಟಿ ತಂದೆ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ತಮ್ಮ ಅಳಿಯನ ಬ್ಯಾಟಿಂಗ್ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ. "ಉತ್ಕೃಷ್ಟ ಪ್ರದರ್ಶನ, ವಿಜಯೋತ್ಸವದ ಮರಳುವಿಕೆ. ಸಂತೋಷ ಉಕ್ಕಿ ಹರಿಯುತ್ತದೆ. ಎಲ್ಲಾ ಪ್ರಯತ್ನಗಳನ್ನು ಸಶಕ್ತಗೊಳಿಸಿದ ಸರ್ವಶಕ್ತನಿಗೆ ಕೃತಜ್ಞತೆಗಳು," ಎಂದು ಕೆಎಲ್ ರಾಹುಲ್ ಬಗ್ಗೆ ಹೇಳಿದ್ದಾರೆ.

athiya-and-her-father-suniel-shetty

ಕೆಎಲ್ ರಾಹುಲ್ ಅವರ ಬಾಮೈದ ಹಾಗೂ ನಟ ಅಹಾನ್ ಶೆಟ್ಟಿ ಕೂಡ ಮೆಚ್ಚುಗೆ ಸೂಚಿಸಿದ್ದು, "ಹಿನ್ನಡೆ ನಂತರದ ಪುನರಾಗಮನವು ಯಾವಾಗಲೂ ಬಲವಾಗಿರುತ್ತದೆ. ಲವ್ ಯು ಬ್ರದರ್ ಕೆಎಲ್ ರಾಹುಲ್," ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಗಮನಾರ್ಹವಾಗಿ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಏಷ್ಯಾ ಕಪ್ ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ನಿರ್ಮಿಸಿದರು. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 233 ರನ್ ಕಲೆ ಹಾಕಿತು.

Story first published: Tuesday, September 12, 2023, 0:07 [IST]
Other articles published on Sep 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+