Kieran Pollard: 'ಸರಿಯಾಗಿ ತಿನ್ನಲು ಊಟವಿಲ್ಲ, ಸುತ್ತಲೂ ರೌಡಿಗಳು'; ಪೊಲಾರ್ಡ್ ಕೆರಿಬಿಯನ್ ದಿಗ್ಗಜ ಕ್ರಿಕೆಟಿಗನಾದದ್ದು ಹೇಗೆ
ಜೂನ್ 15 ಶನಿವಾರ, ವೆಸ್ಟ್ ಇಂಡೀಸ್‌ನ ಅಪಾಯಕಾರಿ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಟಿ20 ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಪೊಲಾರ್ಡ್ ಹಲವು ದಾಖಲೆಗಳನ್ನು ತಮ್ಮ ಹೆಸರನಲ್ಲಿ ಹೊಂದಿದ್ದಾರೆ.
ವೆಸ್ಟ್ ಇಂಡೀಸ್ ಪರ 101 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಪೊಲಾರ್ಡ್, 83 ಇನ್ನಿಂಗ್ಸ್‌ಗಳಿಂದ ಒಟ್ಟು 1569 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಬೌಲಿಂಗ್‌ನಲ್ಲಿಯೂ 43 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಪೊಲಾರ್ಡ್ 2012ರ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಈ ಬಾರಿ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಸಲಹೆಗಾರನಾಗಿ ವಿಂಡೀಸ್ ದಿಗ್ಗಜ ಕ್ರಿಕೆಟಿಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಇತ್ತ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಆದರೆ ವಿಶ್ವ ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ ಬಗ್ಗೆ ಎಲ್ಲೆಡೆ ಚರ್ಚಿಸಲಾಗುತ್ತಿದೆ. ಕೀರನ್ ಪೊಲಾರ್ಡ್ ಶ್ರೇಷ್ಠ ಕ್ರಿಕೆಟಿಗನಾದದ್ದು ಹೇಗೆ? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಒಬ್ಬ ಆಟಗಾರ ಶ್ರೇಷ್ಠ ಕ್ರಿಕೆಟಿಗನಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮದೊಂದಿಗೆ ತಾಳ್ಮೆ ಅದೃಷ್ಟವೂ ಬೇಕು. ಸ್ವತಃ ಪೊಲಾರ್ಡ್ ತಮ್ಮ ಸಂದರ್ಶನವೊಂದರಲ್ಲಿ ತಾವು ಕ್ರಿಕೆಟಿಗನಾದ ಬಗ್ಗೆ ಬಹಿರಂಗಪಡಿಸಿದ್ದರು.
ನನ್ನ ಸುತ್ತಲೂ ಅಪರಾಧಗಳನ್ನು ಕಂಡರೂ ನನ್ನ ಗಮನವು ವಿಚಲಿತವಾಗಿಸಲು ಬಿಡಲಿಲ್ಲ. ನಾನು 15ನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಶ್ರಮಿಸಲು ಪ್ರಾರಂಭಿಸಿದೆ ಎಂದು ಪೊಲಾರ್ಡ್ ಹೇಳಿದ್ದಾರೆ.
ಕೀರಾನ್ ಪೊಲಾರ್ಡ್ ತಮ್ಮ ಬಾಲ್ಯದಲ್ಲಿ ಸಾಕಷ್ಟು ನೋವು-ದುಖಃಗಳನ್ನು ನೋಡಿದ್ದಾರೆ. ಜೊತೆಗೆ ಪೊಲಾರ್ಡ್ ಸುತ್ತಲಿನ ಪ್ರಪಂಚವು ಅವರು ಕ್ರಿಕೆಟಿಗನಾಗಲು ಅನುಕೂಲಕರವಾಗಿಲ್ಲದಿದ್ದರೂ, ಇದನ್ನೆಲ್ಲವನ್ನು ಮೆಟ್ಟಿ ನಿಂತಿದ್ದಾರೆ.
ಪೊಲಾರ್ಡ್ ಹುಟ್ಟಿದ ಬಳಿಕ ಅವರ ತಂದೆ ಮತ್ತು ತಾಯಿ ಇಬ್ಬರು ಬೇರ್ಪಟ್ಟಿದ್ದರು. ಹೀಗಾಗಿ ಮಗುವಾಗಿದ್ದ ಪೊಲಾರ್ಡ್ ತಾಯಿಯ ಅಕ್ಕರೆ ಪ್ರೀತಿಯಲ್ಲಿ ಒಬ್ಬಂಟಿಯಾಗಿ ಬೆಳೆದರು.
ಈ ನಡುವೆ ಪೊಲಾರ್ಡ್ ಅವರ ಮನೆಯಲ್ಲಿ ಪರಿಸ್ಥಿತಿಯು ಎಷ್ಟು ಕೆಟ್ಟದಾಗಿತು ಎಂದರೆ ದಿನಕ್ಕೆ ಒಂದು ಹೊತ್ತು ತಿನ್ನಲು ಊಟವಿಲ್ಲದೆ ಬದುಕಬೇಕಾಯಿತು. ಪೊಲಾರ್ಡ್ ತನ್ನ ಬಾಲ್ಯದಲ್ಲಿ ಪೋರ್ಟ್ ಆಫ್ ಸ್ಪೇನ್‌ನ ಟಕರಿಗುವಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಗೂಂಡಾಗಳು ಮತ್ತು ಅಪರಾಧಿಗಳು ಯಾವಾಗಲೂ ಇರುತ್ತಿದ್ದರು.
ಈ ಪ್ರದೇಶದಲ್ಲಿ, ಕೊಲೆ, ದರೋಡೆ, ಡ್ರಗ್ಸ್ ಮತ್ತು ಗಾಂಜಾ ಇತ್ಯಾದಿಗಳಿಗೆ ಸಂಬಂಧಿಸಿದ ಅಪರಾಧ ಕೃತ್ಯಗಳು ನಡೆಯುತ್ತಿದ್ದವು. ಆದರೆ ಪೊಲಾರ್ಡ್ ಇಂತಹ ಪರಿಸ್ಥಿತಿಯಲ್ಲೂ ತಮ್ಮ ಮನಸ್ಸನ್ನು ಜಾಗೃತವಾಗಿರಿಸಿಕೊಂಡಿದ್ದರು. ತಮ್ಮ ಮನೆಯ ಪರಿಸ್ಥಿತಿ ಅರಿತಿದ್ದ ಪೊಲಾರ್ಡ್ ಕೆಟ್ಟ ವಾತಾವರಣದಲ್ಲಿ ತಮ್ಮ ಇಷ್ಟದಂತೆ ಶ್ರಮಪಟ್ಟು ಬದುಕುವ ಮೂಲಕ ಯಶಸ್ವಿ ಕ್ರಿಕೆಟಿಗರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications