ಪಾಕ್ ಸ್ಪಿನ್ ಬೌಲರ್ ಉಸ್ಮಾನ್ ತಾರೀಕ್ ವಿರುದ್ಧ ಭಾರತದ ಬ್ಯಾಟರ್‌ಗಳು ಹೀಗೆ ಮಾಡಿದರೆ ಬೆಸ್ಟ್
ಭಾರತ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಲೀಗ್ ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ನವದೆಹಲಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ ಯುಎಸ್‌ಎ ತಂಡವನ್ನು 93 ರನ್‌ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದೆ. ಇನ್ನು ಭಾರತದ ದೃಷ್ಟಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲೆ ನೆಟ್ಟಿರಲಿದೆ. ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್ ಕೊಲಂಬೊದಲ್ಲಿ ಭಾನುವಾರ (ಫೆ.15) ನಡೆಯಲಿದೆ. ಈ ಪಂದ್ಯಕ್ಕಾಗಿ ವಿಶ್ವವೇ ಕಾದು ಕುಳಿತಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ "ಎ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಉಭಯ ತಂಡಗಳು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕವನ್ನು ಕಲೆ ಹಾಕಿವೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನವನ್ನು ಕಾಯ್ದುಕೊಂಡಿವೆ. ಭಾನುವಾರ ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಭಾರತ, ಮತ್ತೊಂದು ಜಯ ದಾಖಲಿಸಿ, ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವುದೇ ಗುರಿಯಾಗಿದೆ. ಆದರೆ ಪಾಕ್ ತಂಡದ ಆ ಸ್ಪಿನ್ ಮಾಂತ್ರಿಕ ಉಸ್ಮಾನ್ ತಾರೀಕ್ ಭಾರತಕ್ಕೆ ದೊಡ್ಡ ಸವಾಲು ಎಸೆಯಲಿದ್ದಾರೆ.

ಭಾರತ, ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಎಡವಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟರ್ಸ್ ನೆಲಕಚ್ಚಿ ಬ್ಯಾಟ್ ಮಾಡುವುದನ್ನು ಬಿಟ್ಟು ಬಿಗ್ ಹಿಟ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದ್ದಾರೆ. ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಹೆಣಗಾಡುತ್ತಿದೆ. ಪಾಕಿಸ್ತಾನದ ಸ್ಪಿನ್ ಬೌಲರ್ ಉಸ್ಮಾನ್ ತಾರೀಕ್ ಅವರನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಭಾರತದ ಮಾಜಿ ಸ್ಪಿನ್ ಬೌಲರ್ ಅಶ್ವಿನ್ ಸಲಹೆ ನೀಡಿದ್ದಾರೆ.
ನಮೀಬಿಯಾ ಮಣಿಸಿದ ಟೀಮ್ ಇಂಡಿಯಾ ನಿರ್ಮಿಸಿದ ದಾಖಲೆಗಳ ಪಟ್ಟಿ
ತಾರೀಕ್ ಸ್ಪಿನ್ ಜಾದು
ಟೀಮ್ ಇಂಡಿಯಾಕ್ಕೆ ನಿಶ್ಚಿತವಾಗಿ ಪಾಕಿಸ್ತಾನದ ಸ್ಪಿನ್ ಬೌಲರ್‌ಗಳು ಕಾಟ ನೀಡಲಿದ್ದಾರೆ. ಅದರಲ್ಲೂ ಉಸ್ಮಾನ್ ತಾರೀಕ್ ಭಾರತೀಯ ಬ್ಯಾಟರ್‌ಗಳನ್ನು ಬಹುವಾಗಿ ಕಾಡಬಲ್ಲರು. ಕಾರಣ ಇವರ ವಿಭಿನ್ನ ರೀತಿಯ ಬೌಲಿಂಗ್ ಆಕ್ಷನ್. ಇವರನ್ನು ಎದುರಿಸುವುದು ಹೇಗೆ?, ಭಾರತೀಯ ಬ್ಯಾಟರ್‌ಗಳು ಮಾಡಬೇಕಿದ್ದು ಏನು ಎಂಬ ಬಗ್ಗೆ ಅಶ್ವಿನ್ ಕೆಲವು ಟಿಪ್ಸ್ ನೀಡಿದ್ದಾರೆ.
ಉಸ್ಮಾನ್ ತಾರೀಕ್ ಬೌಲಿಂಗ್ ಆಕ್ಷನ್
ಉಸ್ಮಾನ್ ತಾರೀಕ್ ವಿಭಿನ್ನವಾದ ಬೌಲಿಂಗ್ ಆಕ್ಷನ್ ಹೊಂದಿದ್ದಾರೆ. ಇವರು ಬೌಲಿಂಗ್ ರನ್ ಅಪ್ ಸಹ ದೊಡ್ಡದಾಗಿಲ್ಲ. ಇವರು ಅಂಪೈರ್ ಪಕ್ಕದಿಂದ ಬಂದು ಬೌಲ್ ಮಾಡುತ್ತಾರೆ. ಆದರೆ ಇವರು ಬೌಲ್ ಮಾಡುವಾಗ ಜಿಗಿದು, ಒಂದು ಸೆಕೆಂಡ್ ಬಿಟ್ಟು ಬೌಲ್ ಮಾಡುತ್ತಾರೆ. ಇದರಿಂದ ಬ್ಯಾಟರ್‌ಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಇವರು ಸದ್ಯ ಟಿ20 ವಿಶ್ವಕಪ್‌ನಲ್ಲಿ ಅಪಾಯಕಾರಿ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಉಸ್ಮಾನ್ ವಿಭಿನ್ನ ಶೈಲಿ
ಉಸ್ಮಾನ್ ತಾರೀಕ್ ಅವರ ವಿಭಿನ್ನ ಶೈಲಿಯ ಬೌಲಿಂಗ್ ಬಗ್ಗೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಅಶ್ವಿನ್ ಅವರು ಹೇಳುವ ಪ್ರಕಾರ ಒಬ್ಬ ಬೌಲರ್, ಒಂದು ಓವರ್‌ನಲ್ಲಿ ಒಂದು ಬಾರಿ ಹೀಗೆ ನಿಂತು ಬೌಲ್ ಮಾಡಿದರೆ, ಅದನ್ನು ಪ್ರಶ್ನಿಸಬಹುದು. ಆದರೆ ಇವರ ಬೌಲಿಂಗ್ ಆಕ್ಷನ್ ಇದೇ ರೀತಿಯಾಗಿದೆ. ಇವರನ್ನು ಅದಕ್ಕೆ ಏನು ಮಾಡಲು ಆಗದು. ಅವರು ಎಲ್ಲ ಎಸೆತಗಳನ್ನು ನಿಂತೇ ಬೌಲ್ ಮಾಡುತ್ತಿದ್ದಾರೆ ಎಂದು ಅಶ್ವಿನ್ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಬ್ಯಾಟರ್‌ಗಳು ಮಾಡಬೇಕಿದ್ದು ಏನು?
ಉಸ್ಮಾನ್ ತಾರೀಕ್ ಅವರು ಬೌಲಿಂಗ್ ಮಾಡುವಾಗ ನಿಂತು ಬೌಲಿಂಗ್ ಮಾಡುವಾಗ, ಟೀಮ್ ಇಂಡಿಯಾ ಬ್ಯಾಟರ್‌ಗಳು ಹಿಂದೆ ಸರಿಯಬಹುದು. ಅಲ್ಲದೆ ಪಾಕ್ ಸ್ಪಿನ್ನರ್ ನಿಂತು ಬಿಟ್ಟರು ಎಂದು ನಾನು ಭಾವಿಸಿದೆ ಎಂದು ಬ್ಯಾಟರ್‌ಗಳು ದೂರು ನೀಡಬಹುದು. ಅಲ್ಲದೆ ಅವರು ಬೌಲ್ ಯಾವಾಗ ರಿಲೀಸ್ ಮಾಡುತ್ತಾರೆ ಎಂಬುದು ನನಗೆ ತಿಳಿಯುತ್ತಿಲ್ಲ, ಹೀಗಾಗಿ ನಾನು ಹಿಂದೆ ಸರಿದೆ ಎಂದು ಬ್ಯಾಟರ್ ಹೇಳಬಹುದು ಎಂದು ಅಶ್ವಿನ್ ವಿವರಿಸಿದ್ದಾರೆ. ಟೀಮ್ ಇಂಡಿಯಾದ ಬ್ಯಾಟರ್‌ಗಳು ಹೀಗೆ ಮಾಡಿದಲ್ಲಿ ತಾರೀಕ್ ಅವರ ಮೇಲೆ ಒತ್ತಡ ಹೆಚ್ಚುತ್ತದೆ ಎಂದಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಅಂಪೈರ್‌ಗಳ ಪಾತ್ರ ಸಹ ದೊಡ್ಡದು. ಇವರು ಒಬ್ಬ ಬ್ಯಾಟರ್‌ಗಳಿಗೆ ತಾರೀಕ್ ಅವರ ಬೌಲಿಂಗ್ ಆಕ್ಷನ್ ಇದೇ ರೀತಿಯಾಗಿದೆ ನೀವು ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಹೇಳಬಹುದು. ಇಲ್ಲ ತಾರೀಕ್‌ಗೆ ಆಕ್ಷನ್ ಬದಲಿಸಲು ಸೂಚಿಸಬಹುದು ಎಂದು ಅಶ್ವಿನ್ ತಮ್ಮ ಯೂಟ್ಯೂಬ್‌ನಲ್ಲಿ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications