Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೈದರಾಬಾದ್ : ಪಂದ್ಯದ ವೇಳೆ ಕೊಹ್ಲಿ ಜತೆ ಸೆಲ್ಫಿ ತೆಗೆದುಕೊಂಡ ಫ್ಯಾನ್

Hyderabad Test: Another fan breaks security cordon to take selfie with Virat Kohli

ಹೈದರಾಬಾದ್, ಅಕ್ಟೋಬರ್ 12: ಟೀಂ ಇಂಡಿಯಾದ ನಾಯಕ ಕೊಹ್ಲಿಯ ಜತೆ ಸೆಲ್ಫಿ ತೆಗೆದುಕೊಳ್ಳುವುದು ಪ್ರತಿ ಅಭಿಮಾನಿಗೂ ಕನಸಾಗಿರುತ್ತದೆ. ಆದರೆ, ಕೆಲವು ಫ್ಯಾನ್ಸ್ ಗಳು ಅತ್ಯುತ್ಸಾಹದಲ್ಲಿ ಪಂದ್ಯದ ವೇಳೆಗೆ ಮೈದಾನಕ್ಕೆ ನುಗ್ಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಾರೆ.

ಹೈದರಾಬಾದಿನಲ್ಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯವಾಡುತ್ತಿದೆ. ಪಂದ್ಯದ ಮೊದಲನೆ ದಿನದಾಟದ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಭಿಯಾನಿಯೊಬ್ಬರು, ಕೊಹ್ಲಿ ಬಳಿಗೆ ಬಂದು ಸೆಲ್ಫಿ ತೆಗೆದುಕೊಂಡ ಘಟನೆ ನಡೆದಿದೆ.

ಕೊಹ್ಲಿ ಬಳಿಗೆ ಬಂದ ಅಭಿಮಾನಿಗಳು ಕೊಹ್ಲಿ ತಬ್ಬಿಕೊಂಡು, ಸೆಲ್ಫಿ ತೆಗೆದುಕೊಂಡಿದ್ದಾರೆ. ಪಂದ್ಯದ ಮೊದಲ ಅವಧಿಯಲ್ಲೇ ಈ ಘಟನೆ ನಡೆದಿದ್ದು, ಬ್ಯಾರಿಕೇಡ್ ದಾಟಿ 70 ಮೀಟರ್ ಓಡಿ ಬಂದ ಅಭಿಮಾನಿಯನ್ನು ನಂತರ ಭದ್ರತಾ ಸಿಬ್ಬಂದಿ ಅಲ್ಲಿಂದ ಕರೆದೊಯ್ದರು.

ರಾಜ್ ಕೋಟ್ ನ ಮೊದಲ ಟೆಸ್ಟ್ ಪಂದ್ಯದ ವೇಳೆ ಕೂಡಾ ಇಬ್ಬರು ಅಭಿಮಾನಿಗಳು, ಟೀಂ ಇಂಡಿಯಾ ನಾಯಕನ ಜತೆ ಸೆಲ್ಫಿ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಥ ಘಟನೆಗಳು ಹೆಚ್ಚಾಗುತ್ತಿದ್ದು, ಸ್ಟಾರ್ ಆಟಗಾರರ ಭದ್ರತೆ ಬಗ್ಗೆ ಪ್ರಶ್ನೆ ಎದ್ದಿವೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್, ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Story first published: Friday, October 12, 2018, 15:47 [IST]
Other articles published on Oct 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+