ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಸ್‌ಆರ್‌ಎಚ್‌ ಪರ ಬೇರ್ಸ್ಟೊವ್-ವಾರ್ನರ್ ಅಬ್ಬರ, ಆರ್‌ಸಿಬಿಗೆ ಮುಖಭಂಗ!

Hyderabad vs Bangalore, 11th Match - Live Cricket Score

ಹೈದರಾಬಾದ್, ಮಾರ್ಚ್ 31: ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ 118 ರನ್ ಜಯ ಗಳಿಸಿದೆ. ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೊವ್ ಇಬ್ಬರೂ ಸ್ಫೋಟಕ ಶತಕ ಬಾರಿಸಿ ತಂಡದ ಗೆಲುವಿನ ರುವಾರಿಗಳಾದರು.

ಆಕರ್ಷಕ ಕ್ಯಾಚ್‌ನಿಂದ ಕ್ರಿಸ್‌ಲಿನ್ ವಿಕೆಟ್ ಮುರಿದ ರಿಷಬ್ ಪಂತ್: ವಿಡಿಯೋಆಕರ್ಷಕ ಕ್ಯಾಚ್‌ನಿಂದ ಕ್ರಿಸ್‌ಲಿನ್ ವಿಕೆಟ್ ಮುರಿದ ರಿಷಬ್ ಪಂತ್: ವಿಡಿಯೋ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್‌ಗೆ ವಾರ್ನರ್, ಬೇರ್ಸ್ಟೊವ್ ಉತ್ತಮ ಜೊತೆಯಾಟ ನೀಡಿದರು. ಬೇರ್ಸ್ಟೊವ್ 56 ಎಸೆತಗಳಿಗೆ 114, ವಾರ್ನರ್ 55 ಎಸೆತಗಳಿಗೆ ಅಜೇಯ 100 ರನ್ ಬಾರಿಸಿದರು. ಇಬ್ಬರೂ 2019ರ ಐಪಿಎಲ್‌ನಲ್ಲಿ ಕ್ರಮವಾಗಿ 2ನೇ ಮತ್ತು 3ನೇ ಶತಕ ದಾಖಲಿಸಿದ್ದಾರೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45767

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗೆ 2 ವಿಕೆಟ್ ಕಳೆದು 231 ರನ್ ಬಾರಿಸಿತು. 232 ರನ್ ಗುರಿ ಬೆನ್ನಟ್ಟಿದ ಬೆಂಗಳೂರು, ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ 11, ಶಿಮ್ರಾನ್ ಹೆಟ್ಮೇಯರ್ 9, ಎಬಿ ಡಿ ವಿಲಿಯರ್ಸ್ 1, ವಿರಾಟ್ ಕೊಹ್ಲಿ 3, ಮೊಯೀನ್ ಆಲಿ 2, ಶಿವಂ ದೂಬೆ 5 ರನ್‌ಗೆ ವಿಕೆಟ್ ಒಪ್ಪಿಸಿದಾಗ ಆಘಾತ ಅನುಭವಿಸಿತು.

ನೀನು ನನ್ನ ದಿನವನ್ನು ನಾಶ ಮಾಡಿಬಿಟ್ಟೆ, ವಾರ್ನರ್‌ಗೆ ಹೇಳಿದ ಸ್ಯಾಮ್ಸನ್!ನೀನು ನನ್ನ ದಿನವನ್ನು ನಾಶ ಮಾಡಿಬಿಟ್ಟೆ, ವಾರ್ನರ್‌ಗೆ ಹೇಳಿದ ಸ್ಯಾಮ್ಸನ್!

ಬೆಂಗಳೂರು ಪರ ಕಾಲಿನ್ ಡೆ ಗ್ರ್ಯಾಂಡ್ ಹೋಮ್ 37, ಪ್ರಯಾಸ್ ಬರ್ಮನ್ 19, ಉಮೇಶ್ ಯಾದವ್ 14 ರನ್ ಸೇರಿಸಿದ್ದೇ ಹೆಚ್ಚೆನಿಸಿತು. ಅಂತೂ ಆರ್‌ಸಿಬಿ, 19.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 113 ರನ್ ಪೇರಿಸಲುವುದರೊಂದಿಗೆ ಐಪಿಎಲ್‌ನಲ್ಲಿ ಸತತ ಮೂರನೇ ಸೋಲಿನ ಮುಖಭಂಗ ಅನುಭವಿಸಿದೆ.

ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್

ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ವಿಜಯ್ ಶಂಕರ್, ಮನೀಶ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾಣ್, ರಶೀದ್ ಖಾನ್, ಮೊಹಮ್ಮದ್ ನಬಿ, ಭುವನೇಶ್ವರ ಕುಮಾರ್ (ಸಿ), ಸಂದೀಪ್ ಶರ್ಮಾ, ಸಿದ್ಧಾರ್ಥ ಕೌಲ್.

ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿಕೆ), ಮೊಯೆನ್ ಅಲಿ, ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಶಿಮ್ರಾನ್ ಹೆಟ್ಮೈಯರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಶಿವಮ್ ದೂಬೆ, ಪ್ರಯಾಸ್ ಬರ್ಮನ್, ಯುಜುವೇಂದ್ರ ಚಾಹಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

Story first published: Sunday, March 31, 2019, 19:50 [IST]
Other articles published on Mar 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X