For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ವಾರ್ನರ್-ಬೇರ್ಸ್ಟೋವ್ ಅಬ್ಬರಕ್ಕೆ ತಲೆ ಬಾಗಿದ ಸೂಪರ್ ಕಿಂಗ್ಸ್

Hyderabad vs Chennai, 33rd Match - Live Cricket Score

ಹೈದರಾಬಾದ್, ಏಪ್ರಿಲ್ 17: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 17) ನಡೆದ ಐಪಿಎಲ್ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 6 ವಿಕೆಟ್ ಜಯಭೇರಿ ಬಾರಿಸಿದೆ. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೋವ್ ಆಕರ್ಷಕ ಅರ್ಧಶತಕದ ನೆರವಿನಿಂದ ಹೈದರಾಬಾದ್ ಸುಲಭ ಗೆಲುವು ದಾಖಲಿಸಿತು.

'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ, ಹೈದರಾಬಾದ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿತು. ಶೇನ್ ವ್ಯಾಟ್ಸನ್ 31, ಫಾ ಡು ಪ್ಲೆಸಿಸ್ 45, ಸುರೇಶ್ ರೈನಾ 13, ಕೇದಾರ್ ಜಾಧವ್ 1, ಸ್ಯಾಮ್ ಬಿಲ್ಲಿಂಗ್ 0, ಅಂಬಾಟಿ ರಾಯುಡು 25, ರವಿಂದ್ರ ಜಡೇಜಾ 10 ರನ್ ಸೇರಿಸಿದರು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45909

ಚೆನ್ನೈ ತಂಡ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 132 ರನ್ ಪೇರಿಸಿತು. ಸೂಪರ್ ಕಿಂಗ್ಸ್ ಇನ್ನಿಂಗ್ಸ್ ವೇಳೆ ಹೈದರಾಬಾದ್‌ನ ರಶೀದ್ ಖಾನ್ 17 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು. ಈ ಪಂದ್ಯದಲ್ಲಿ ಸಿಎಸ್‌ಕೆ ಎಂದಿನ ನಾಯಕ ಎಂಎಸ್ ಧೋನಿ ಮೈದಾನಕ್ಕೆ ಇಳಿಯಲಿಲ್ಲ.

ಬ್ಯಾಟಿಂಗ್ ವೈಫಲ್ಯ ತೋರಿಸಿದ ಸಿಎಸ್‌ಗೆ ಸೋಲಿಗೆ ಆಹ್ವಾನ ನೀಡಿತು. ಚೆನ್ನೈ ನೀಡಿದ 133 ರನ್ ಬೆನ್ನತ್ತಿದ ಹೈದರಾಬಾದ್‌ನ ವಾರ್ನರ್ 50 ರನ್ (24 ಎಸೆತ), ಬೇರ್ಸ್ಟೋವ್ 61 (44 ಎಸೆತ) ಸೇರಿಸಿದ್ದರಿಂದ 16.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 137 ರನ್ ಬಾರಿಸಿ ಗೆಲುವನ್ನಾಚರಿಸಿತು.

ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ಯೂಸುಫ್ ಪಠಾಣ್, ದೀಪಕ್ ಹೂಡಾ, ರಶೀದ್ ಖಾನ್, ಶಹಬಾಝ್ ನದೀಮ್, ಭುವನೇಶ್ವರ ಕುಮಾರ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್.

ಚೆನ್ನೈ ಸೂಪರ್‌ ಕಿಂಗ್ಸ್: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ (ಸಿ), ಸ್ಯಾಮ್ ಬಿಲ್ಲಿಂಗ್ಸ್ (ವಿ.ಕೆ), ಅಂಬಾಟಿ ರಾಯುಡು, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಕರಣ್ ಶರ್ಮಾ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

Story first published: Wednesday, April 17, 2019, 23:35 [IST]
Other articles published on Apr 17, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+