Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಹೈದರಾಬಾದ್ ಕಾಡಿದ ರಬಾಡಾ-ಮೋರಿಸ್-ಪೌಲ್, ಡೆಲ್ಲಿಗೆ ಗೆಲುವು

Hyderabad vs Delhi, 30th Match - Live Cricket Score

ಹೈದರಾಬಾದ್, ಏಪ್ರಿಲ್ 14: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 14) ನಡೆದ ಐಪಿಎಲ್ 30ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 39 ರನ್ ಜಯ ಸಾಧಿಸಿದೆ. ಕಾಗಿಸೋ ರಬಾಡಾ, ಕ್ರಿಸ್ ಮೋರಿಸ್ ಮತ್ತು ಕೀಮೊ ಪೌಲ್ ಅದ್ಭುತ ಬೌಲಿಂಗ್ ಡೆಲ್ಲಿ ತಂಡಕ್ಕೆ 5ನೇ ಗೆಲುವು ತಂದಿತು.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ನಿರ್ಲಕ್ಷ್ಯದ ಆಟವಾಡಿತು. ಶಿಖರ್ ಧವನ್ 7, ಪೃಥ್ವಿ ಶಾ 4, ಕಾಲಿನ್ ಮುನ್ರೋ 40 ರನ್, (24 ಎಸೆತ), ಶ್ರೇಯಸ್ ಐಯ್ಯರ್ 45 ರನ್ (40 ಎಸೆತ), ರಿಷಬ್ ಪಂತ್ 23 ರನ್‌, ಅಕ್ಸರ್ ಪಟೇಲ್ 14 ರನ್‌ನೊಂದಿಗೆ ಕ್ಯಾಪಿಟಲ್ಸ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45906

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 156 ರನ್ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ವಿಕೆಟ್ ಕಾವಲು ನಿಲ್ಲಲಿಲ್ಲ. ಡೇವಿಡ್ ವಾರ್ನರ್ 51, ಜಾನಿ ಬೇರ್ಸ್ಟೊವ್ 41 ರನ್ ಬಾರಿಸಿದ್ದೇ ಹೆಚ್ಚು. ಉಳಿದಂತೆ ಕೇನ್ ವಿಲಿಯಮ್ಸನ್ 3, ವಿಜಯ್ ಶಂಕರ್ 1, ರಿಕಿ ಭುಯಿ 7, ದೀಪಕ್ ಹೂಡಾ 3, ರಶೀದ್ ಖಾನ್ 0 ರನ್‌ಗೆ ನಿರ್ಗಮಿಸಿದ್ದು ತಂಡಕ್ಕೆ ದುಬಾರಿಯೆನಿಸಿತು.

ಹೈದರಾಬಾದ್ 18.5 ಓವರ್‌ಗೆ ಸರ್ವ ಪತನ ಕಂಡು 116 ರನ್ ಪೇರಿಸಿ ಶರಣಾಯಿತು. ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ವೇಗಿ ರಬಾಡಾ 22 ರನ್‌ಗೆ 4, ಕ್ರಿಸ್ ಮೋರೀಸ್ 22 ರನ್‌ಗೆ 3 ಮತ್ತು ಕೀಮೋ ಪೌಲ್ 17 ರನ್‌ಗೆ 3 ವಿಕೆಟ್ ಪಡೆದು ಹೈದರಾಬಾದ್ ಬ್ಯಾಟ್ಸ್ಮನ್‌ಗಳನ್ನು ಸಾಲಾಗಿ ಪೆವಿಲಿಯನ್‌ಗೆ ಅಟ್ಟಿದ್ದು ಕಂಡುಬಂತು.

ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ರಿಕಿ ಭುಯಿ, ದೀಪಕ್ ಹೂಡಾ, ರಶೀದ್ ಖಾನ್, ಅಭಿಷೇಕ್ ಶರ್ಮಾ, ಭುವನೇಶ್ವರ ಕುಮಾರ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಕಾಲಿನ್ ಮುನ್ರೋ, ಶ್ರೇಯಸ್ ಐಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕ್ರಿಸ್ ಮೋರಿಸ್, ಅಕ್ಸರ್ ಪಟೇಲ್, ಅಮಿತ್ ಮಿಶ್ರಾ, ಕೀಮೋ ಪಾಲ್, ಕಾಗಿಸೊ ರಬಾಡಾ, ಇಶಾಂತ್ ಶರ್ಮಾ.

Story first published: Sunday, April 14, 2019, 23:55 [IST]
Other articles published on Apr 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+