For Quick Alerts
ALLOW NOTIFICATIONS  
For Daily Alerts
 

ಬೇರ್ಸ್ಟೊವ್-ವಾರ್ನರ್ ಅಬ್ಬರ, ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಜಯ

Hyderabad vs Kolkata, 38th Match - Live Cricket Score

ಹೈದರಾಬಾದ್, ಏಪ್ರಿಲ್ 21: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಐಪಿಎಲ್ 38ನೇ ಪಂದ್ಯದಲ್ಲಿ ಎಸ್‌ಆರ್‌ಎಚ್ 9 ವಿಕೆಟ್ ಜಯ ಗಳಿಸಿದೆ. ಜಾನಿ ಬೇರ್ಸ್ಟೊವ್ ಮತ್ತು ಡೇವಿಡ್ ವಾರ್ನರ್ ಉತ್ತಮ ಜೊತೆಯಾಟ ನೀಡಿದ್ದರಿಂದ ಹೈದರಾಬಾದ್ ಸುಲಭ ಜಯ ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ವೇಗದ ರನ್ ಗಳಿಸಿತಾದರೂ ವಿಕೆಟ್‌ಗಳನ್ನೂ ಬೇಗನೆ ಕಳೆದುಕೊಳ್ಳುತ್ತಾ ಬಂತು. ವಿಕೆಟ್‌ಗಳು ಉರುಳತೊಡಗಿದ್ದರಿಂದ ಅಂತಿಮ ಓವರ್‌ಗಳ ವೇಳೆ ತಂಡಕ್ಕೆ ರನ್ ಸೇರ್ಪಡೆ ಕಡಿಮೆಗೊಂಡಿತು.

ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, Live ಸ್ಕೋರ್‌ಕಾರ್ಡ್‌

1
45914

ಕೆಕೆಆರ್‌ನಿಂದ ಕ್ರಿಸ್‌ಲಿನ್ 51 (47 ಎಸೆತ), ಸುನಿಲ್ ನರೇನ್ 25, ನಿತೀಶ್ ರಾಣ 11, ರಿಂಕು ಸಿಂಗ್ 30, ಆ್ಯಂಡ್ರೆ ರಸೆಲ್ 15 ರನ್ ಸೇರಿಸಿದ್ದು ಬಿಟ್ಟರೆ ಇನ್ಯಾರೂ 10ಕ್ಕೂ ಹೆಚ್ಚು ರನ್ ಗಳಿಸಲೇ ಇಲ್ಲ. ಕೆಕೆಆರ್ 20 ಓವರ್‌ಗೆ 8 ವಿಕೆಟ್ ಕಳೆದು 159 ರನ್ ಬಾರಿಸಿತು. ಎಸ್‌ಆರ್‌ಎಚ್‌ನ ಭುವಿ 2 (35 ರನ್), ಖಲೀಲ್ 3 (33 ರನ್) ವಿಕೆಟ್ ಪಡೆದು ಕೆಕೆಆರ್ ತಂಡವನ್ನು ಕಾಡಿದರು.

ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ವಾರ್ನರ್ 67 (38 ಎಸೆತ), ಬೇರ್ಸ್ಟೊವ್ ಅಜೇಯ 80 (43 ಎಸೆತ) ಸೇರಿಸಿದರು. ಎಸ್‌ಆರ್‌ಎಚ್ 15 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 161 ರನ್‌ನೊಂದಿಗೆ ಐಪಿಎಲ್ 5ನೇ ಗೆಲುವನ್ನಾಚರಿಸಿದೆ.

ಆರಂಭಿಕ ಇನ್ನಿಂಗ್ಸ್‌ ಮುಗಿಸಿರುವ ಕೆಕೆಆರ್ ಎದುರಾಳಿಗೆ 160 ರನ್ ಗುರಿ ನೀಡಿದೆ. ಭುನವೇಶ್ವರ್ ಕುಮಾರ್ ಮತ್ತು ಖಲೀಲ್ ಅಹ್ಮದ್ ಮಾರಕ ಬೌಲಿಂಗ್ ದಾಳಿ ಕೆಕೆಆರ್‌ ರನ್ ಕದಿಯುವಿಕೆಗೆ ಬ್ರೇಕ್ ಒಡ್ಡಿತು.
ಗುರಿ ಬೆನ್ನತ್ತಿರುವ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಜಾನಿ ಬೇರ್ಸ್ಟೊವ್ ಮತ್ತು ಡೇವಿಡ್ ವಾರ್ನರ್ ಉತ್ತಮ ಜೊತೆಯಾಟ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ದೀಪಕ್ ಹೂಡಾ, ಯೂಸೂಫ್ ಪಠಾಣ್, ರಶೀದ್ ಖಾನ್, ಶಹಾಬಾಜ್ ನದೀಮ್, ಭುವನೇಶ್ವರ ಕುಮಾರ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನರೇನ್, ಶುಭ್‌ಮಾನ್ ಗಿಲ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ಸಿ & ವಿಕೆ), ಪಿಯೂಶ್ ಚಾವ್ಲಾ, ಕೆ.ಸಿ. ಕಾರಿಯಪ್ಪ, ಹ್ಯಾರಿ ಗರ್ನಿ, ಯಾರಾ ಪೃಥ್ವಿರಾಜ್.

Story first published: Sunday, April 21, 2019, 19:47 [IST]
Other articles published on Apr 21, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+