ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಅಲ್ಝಾರಿ ಭರ್ಜರಿ ಬೌಲಿಂಗ್, ಮುಂಬೈಗೆ ತಲೆ ಬಾಗಿದ ಹೈದರಾಬಾದ್‌

Hyderabad vs Mumbai, 19th Match - Live Cricket Score

ಹೈದರಾಬಾದ್, ಏಪ್ರಿಲ್ 6: ಹೈದರಾಬಾದ್‌ನ ರಾಜೀವ್‌ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 19ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ಗೆ ಮುಂಬೈ ಇಂಡಿಯನ್ಸ್ 40 ರನ್ ಸೋಲುಣಿಸಿದೆ. ಐಪಿಎಲ್ ಪಾದಾರ್ಪಪಣೆ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅಲ್ಝಾರಿ ಜೋಸೆಪ್ ಮುಂಬೈ ಗೆಲುವಿನ ರುವಾರಿಯಾದರು.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

ಮೊದಲು ಇನ್ನಿಂಗ್ಸ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಅಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡಿತು. ರೋಹಿತ್ ಶರ್ಮಾ (11), ಸೂರ್ಯಕುಮಾರ್ ಯಾದವ್ 7, ಕ್ವಿಂಟನ್ ಡಿ ಕಾಕ್ (19), ಇಶಾನ್ ಕಿಶಾನ್ (17), ಕೃನಾಲ್ ಪಾಂಡ್ಯ (6) ಬೇಗನೆ ನಿರ್ಗಮಿಸಿದರು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45895

ನಿರೀಕ್ಷೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ 14 ರನ್‌ಗೆ ಔಟ್ ಆದರು. ಆದರೆ ಮುಂಬೈ ತಂಡವನ್ನು ರನ್ ಕುಸಿತದಿಂದ ಪೊಲಾರ್ಡ್ ಕೊಂಚ ಪಾರು ಮಾಡಿದರು. ಪೊಲಾರ್ಡ್ 26 ಎಸೆತಗಳಿಗೆ 46 ರನ್ ಗಳಿಸಿದರು. ಮುಂಬೈ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 136 ರನ್ ಪೇರಿಸಿತು.

ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಹೊಂದಿರುವ ವಿಶ್ವದ ಆಟಗಾರರು!ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಹೊಂದಿರುವ ವಿಶ್ವದ ಆಟಗಾರರು!

ಚೇಸಿಂಗ್‌ಗೆ ಇಳಿದ ಹೈದರಾಬಾದ್ ಇನ್ನೂ ಅಘಾತಕಾರಿ ಆರಂಭ ಕಂಡಿತು. ಹೈದರಾಬಾದ್ ಅಪಾಯಕಾರಿ ಆಟಗಾರರಾದ ಡೇವಿಡ್ ವಾರ್ನರ್ 15, ಜಾನಿ ಬೇರ್ಸ್ಟೋವ್ 16, ವಿಜಯ್ ಶಂಕರ್ 5, ಮನೀಶ್ ಪಾಂಡೆ 16, ಯೂಸುಫ್ ಪಠಾಣ್ 0, ರಶೀದ್ ಖಾನ್ 0, ಮೊಹಮ್ಮದ್ ನಬಿ 11 ರನ್‌ ಗಳಿಸಿ ಔಟಾದರು.

ಐಪಿಎಲ್ 2019: ಚೆನ್ನೈ ಸ್ಟೇಡಿಯಂನಲ್ಲಿ ಇತಿಹಾಸ ಬರೆದ ಆರ್ ಅಶ್ವಿನ್ಐಪಿಎಲ್ 2019: ಚೆನ್ನೈ ಸ್ಟೇಡಿಯಂನಲ್ಲಿ ಇತಿಹಾಸ ಬರೆದ ಆರ್ ಅಶ್ವಿನ್

ಈ ಬಾರಿಯ ಐಪಿಎಲ್‌ನಲ್ಲಿ ಬಲಿಷ್ಟ ತಂಡಗಳ ಸಾಲಿನಲ್ಲಿರುವ ಹೈದರಾಬಾದ್ ಸೋಲಿಗೆ ಮುಖ್ಯ ಕಾರಣ ವೆಸ್ಟ್ ಇಂಡೀಸ್ ಯುವ ಆಟಗಾರ ಅಲ್ಝಾರಿ ಜೋಸೆಫ್. ಅಲ್ಝಾರಿ 3.4 ಓವರ್ ಬೌಲಿಂಗ್ ಮಾಡಿ, ಕೇವಲ 12 ರನ್‌ಗೆ 6 ವಿಕೆಟ್ ಕೆಡವಿ ಸನ್ ರೈಸರ್ಸ್ ಸೋಲನ್ನು ಬರೆದರು.

ಮುಂಬೈ ಇಂಡಿಯನ್ಸ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಟೊ (ವಿಕೆ), ವಿಜಯ್ ಶಂಕರ್, ಮನೀಷ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾಣ್, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್ (ಸಿ), ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್.

ಸನ್ ರೈಸರ್ಸ್ ಹೈದರಾಬಾದ್: ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಸನ್ ಬೆಹ್ರೆನ್ಡಾರ್ಫ್, ರಾಹುಲ್ ಚಾಹರ್, ಅಲ್ಜರಿ ಜೋಸೆಫ್, ಜಸ್ಪ್ರಿತ್ ಬೂಮ್ರಾ.

Story first published: Saturday, April 6, 2019, 23:53 [IST]
Other articles published on Apr 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X