Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಹೈದರಾಬಾದ್‌ಗೆ ಶರಣೆಂದ ಪಂಜಾಬ್

Hyderabad vs Punjab, 48th Match - Live Cricket Score

ಹೈದರಾಬಾದ್, ಏಪ್ರಿಲ್ 29: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್‌ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 29) ನಡೆದ ಐಪಿಎಲ್ 48ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್‌ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 45 ರನ್ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸ್ಫೋಟಕ ಅರ್ಧ ಶತಕ ಸಹಾಯದಿಂದ ಎಸ್‌ಆರ್‌ಎಚ್‌ ಸುಲಭ ಗೆಲುವು ದಾಖಲಿಸಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್ ರೈಸರ್ಸ್ ಹೈದರಾಬಾದ್‌ ನಿಂದ ಡೇವಿಡ್ ವಾರ್ನರ್ 81 (56 ಎಸೆತ), ಮನೀಶ್ ಪಾಂಡೆ 36, ವೃದ್ಧಿಮಾನ್ ಸಹಾ 28, ಕೇನ್ ವಿಲಿಯಮ್ಸನ್ 14, ಮೊಹಮ್ಮದ್ ನಬಿ 20 ರನ್ ಬಾರಿಸಿದರು. ಎಸ್‌ಆರ್‌ಎಚ್‌ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 212 ರನ್ ಮಾಡಿತು. ಹೈದ್ರಾಬಾದ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಮೊಹಮ್ಮದ್ ಶಮಿ ಮತ್ತು ಆರ್‌ ಅಶ್ವಿನ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.

ಪಂದ್ಯದ Live Score, Score Card ಕೆಳಗಿದೆ

1
45924

ಗುರಿ ಬೆನ್ನಟ್ಟಿದ ಕಿಂಗ್ಸ್ XI ಪಂಜಾಬ್‌ ಪರ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಮಾತ್ರ ಕೊಸರಾಡಿದ್ದು ಕಂಡುಬಂತು. ರಾಹುಲ್ 56 ಎಸೆತಗಳಿಗೆ 79 ರನ್ ಸೇರಿಸಿದರು. ಇನ್ನು ಮಯಾಂಕ್ ಅಗರ್ವಾಲ್ 27, ನಿಕೋಲಸ್ ಪೂರನ್ 21, ಸಿಮ್ರನ್ ಸಿಂಗ್ 16, ಡೇವಿಡ್ ಮಿಲ್ಲರ್ 11 ರನ್ ಬೆಂಬಲ ಮಾತ್ರ ತಂಡಕ್ಕೆ ಗಮನಾರ್ಹವೆನಿಸಿತು.

20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 167 ರನ್ ಬಾರಿಸಿ ಸೋಲುವ ಮೂಲಕ ಪಂಜಾಬ್ ಪ್ಲೇ ಆಫ್ ಹಾದಿಯನ್ನು ಕಠಿಣವಾಗಿಸಿಕೊಂಡಿದೆ. ಪಂಜಾಬ್ ಇನ್ನಿಂಗ್ಸ್‌ ವೇಳೆ ಹೈದ್ರಾಬಾದ್‌ನ ಕೆ ಖಲೀಲ್ ಅಹ್ಮದ್ 3, ರಶೀದ್ ಖಾನ್ 3, ಸಂದೀಪ್ ಶರ್ಮಾ 2 ವಿಕೆಟ್‌ನೊಂದಿಗೆ ಮಿಂಚಿದರು. ಡೇವಿಡ್ ವಾರ್ನರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಕಿಂಗ್ಸ್ XI ಪಂಜಾಬ್ ತಂಡ: ಲೋಕೇಶ್ ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಡೇವಿಡ್ ಮಿಲ್ಲರ್, ನಿಕೋಲಸ್ ಪೂರನ್ (ವಿಕೆ), ಸಿಮ್ರಾನ್ ಸಿಂಗ್, ರವಿಚಂದ್ರನ್ ಅಶ್ವಿನ್ (ಸಿ), ಮುರುಗನ್ ಅಶ್ವಿನ್, ಅಂಕಿತ್ ರಜಪೂತ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್.

ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ (ಸಿ), ಮನೀಶ್ ಪಾಂಡೆ, ವಿಜಯ್ ಶಂಕರ್, ಮೊಹಮ್ಮದ್ ನಬಿ, ವೃದ್ಧಿಮಾನ್ ಸಹಾ (ವಿಕೆ), ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ ಕುಮಾರ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್.

Story first published: Tuesday, April 30, 2019, 0:05 [IST]
Other articles published on Apr 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+