ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಸ್ಯಾಮ್ಸನ್ ಶತಕ ವ್ಯರ್ಥ, ರಾಯಲ್ಸ್ ಮಣಿಸಿ ಹೊಳೆದ ಸನ್ ರೈಸರ್ಸ್

Hyderabad vs Rajasthan, 8th Match - Live Cricket Score

ಹೈದರಾಬಾದ್, ಮಾರ್ಚ್ 29: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 8ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ಗೆಲುವನ್ನಾಚರಿಸಿದೆ. ರಾಯಲ್ಸ್ ಪರ ಸಂಜು ಸ್ಯಾಮ್ಸನ್ ಐಪಿಎಲ್‌ 2019ರ ಚೊಚ್ಚಲ ಶತಕ ಚಚ್ಚಿದರಾದರೂ ಅದರಿಂದ ತಂಡಕ್ಕೆ ಗೆಲುವು ಒಲಿದುಬರಲಿಲ್ಲ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45764

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್, ಅಜಿಂಕ್ಯ ರಹಾನೆ (70), ಜಾಸ್ ಬಟ್ಲರ್ (5), ಸ್ಯಾಮ್ಸನ್ 102 (55 ಎಸೆತ) ರನ್ ನೆರವಿನೊಂದಿಗೆ 20 ಓವರ್‌ಗೆ 2 ವಿಕೆಟ್ ಕಳೆದು 198 ರನ್ ಪೇರಿಸಿತು. ಆದರೆ ಸನ್ ರೈಸರ್ಸ್ ಪರ ಡೇವಿಡ್ ವಾರ್ನರ್, ಜಾನಿ ಬೇರ್ಸ್ಟೊವ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ತಂಡದ ಗೆಲುವಿಗೆ ಕಾರಣವಾಯ್ತು.

ಐಪಿಎಲ್ 2019ರ ಚೊಚ್ಚಲ ಶತಕ ಬಾರಿಸಿದ ರಾಯಲ್ಸ್‌ನ ಸಂಜು ಸ್ಯಾಮ್ಸನ್ಐಪಿಎಲ್ 2019ರ ಚೊಚ್ಚಲ ಶತಕ ಬಾರಿಸಿದ ರಾಯಲ್ಸ್‌ನ ಸಂಜು ಸ್ಯಾಮ್ಸನ್

ರಾಜಸ್ಥಾನ್ ನೀಡಿದ್ದ 199 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್, ವಾರ್ನರ್ 69 (37 ಎಸೆತ), ಬೇರ್ಸ್ಟೊವ್ 45, ವಿಜಯ್ ಶಂಕರ್ 35 (15 ಎಸೆತ) ರನ್ ಬೆಂಬಲದೊಂದಿಗೆ 19 ಓವರ್‌ಗೆ 5 ವಿಕೆಟ್ ಕಳೆದು 201 ರನ್ ಕಲೆ ಹಾಕಿತು. ಹೈದರಾಬಾದ್ ಪರ 24 ರನ್ನಿಗೆ 1 ವಿಕೆಟ್ ಮತ್ತು ಅಜೇಯ 18 ರನ್ (8 ಎಸೆತ) ಬಾರಿಸಿದ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್

ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ (ವಿಕೆ), ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ಯೂಸುಫ್ ಪಠಾಣ್, ಮನೀಶ್ ಪಾಂಡೆ, ರಶೀದ್ ಖಾನ್, ಭುವನೇಶ್ವರ ಕುಮಾರ್, ಶಾಬಾಜ್ ನದೀಮ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್.

ರಾಜಸ್ಥಾನ್ ರಾಯಲ್ ತಂಡ: ಅಜಿಂಕ್ಯ ರಹಾನೆ (ಸಿ), ಜಾಸ್ ಬಟ್ಲರ್ (ವಿಕೆ), ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ಕೃಷ್ಣಪ್ಪ ಗೌತಮ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಾಟ್, ಶ್ರೀಯಾಸ್ ಗೋಪಾಲ್, ಧವಾಲ್ ಕುಲಕರ್ಣಿ.

Story first published: Saturday, March 30, 2019, 0:08 [IST]
Other articles published on Mar 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X