ಮತ್ತೆ ಮಿಂಚಿದ ಹೈದರಾಬಾದ್ ಬೌಲರ್‌ಗಳು, ಪಂಜಾಬ್ ವಿರುದ್ಧ ಜಯ

ಬ್ಯಾಟ್ಸಮನ್‌ಗಳ ಮೇಲಾಟವೇ ಹೆಚ್ಚಿಗೆ ನಡೆಯುವ ಐಪಿಎಲ್‌ನಲ್ಲಿ ಬೌಲರ್‌ಗಳ ಬಲದಿಂದ ಗೆಲ್ಲುತ್ತಿರುವ ಏಕೈಕ ತಂಡ ಸನ್‌ರೈಸರ್ಸ್ ಹೈದರಾಬಾದ್. ಈ ತಂಡದ ಇಂದೂ ಕೂಡ ತಮ್ಮ ಶಕ್ತಿಯನ್ನು ಸಾಬೀತು ಮಾಡಿದರು.
ಪಂಜಾಬ್ ಕೀಂಗ್ಸ್ XI ವಿರುದ್ಧ ನಡೆದ ಪಂದ್ಯದಲ್ಲಿ ಹೈದಬಾರಾದ್‌ಗೆ 13 ರನ್‌ಗಳ ಗೆಲವು ತಂದಿತ್ತು ಈ ತಂಡದ ಬೌಲರ್‌ಗಳೇ. 133 ರನ್‌ಗಳ ಬೆನ್ನತ್ತಿದ ಪಂಜಾಬ್ ತಂಡ 119 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಸ್ಕೋರ್ ಬೋರ್ಡ್‌ನ ಮೇಲೆ ಕಡಿಮೆ ರನ್ ಇದ್ದರೂ ಕೂಡ ಗೇಲ್, ಫಿಂಚ್, ಕೆ.ಎಲ್.ರಾಹುಲ್ ರೀತಿಯ ಅಂತರರಾಷ್ಟ್ರೀಯ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳನ್ನೂ ಸಹ ತಮ್ಮ ಬೌಲಿಂಗ್‌ನಿಂದ ಕಾಡಿದರು ಹೈದರಾಬಾದ್ ತಂಡದ ಬೌಲರ್‌ಗಳು.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 133 ರನ್‌ಗಳ ಕಡಿಮೆ ಮೊತ್ತವನ್ನು ಪೇರಿಸಿತು. ಪಂಜಾಬ್ ತಂಡದ ಬೌಲರ್‌ಗಳು ಉತ್ತಮ ಬೌಲಿಂಗ್ ದಾಳಿ ನಡೆಸಿ ಹೈದರಾಬಾದ್ ಅನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ಪಂಜಾಬ್ ಪರ ಅಂಕಿತ್ 5 ವಿಕೆಟ್ ಪಡೆದು ಮಿಂಚಿದರು.
ಕಡಿಮೆ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳು ಮೊದಲಿಗೆ ಉತ್ತಮ ಆಟವನ್ನೇ ಆಡಿದರು. ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಮತ್ತು ಕ್ರಿಸ್ ಗೇಲ್ ಪಂಜಾಬ್‌ಗೆ ಉತ್ತಮ ಆರಂಭವನ್ನೇ ದೊರಕಿಸಿಕೊಟ್ಟರು.
ಆದರೆ 8 ನೇ ಓವರ್‌ನಲ್ಲಿ ಮೊದಲಿಗೆ ರಾಹುಲ್ ಔಟ್ ಆದರು ನಂತರ ಗೇಲ್ ಕೂಡಾ ಅವರ ಹಾದಿಯನ್ನೇ ಹಿಡಿದರು. ಆ ನಂತರ ನಡೆದದ್ದೆಲ್ಲಾ ಹೈದರಾಬಾದ್ ತಂಡದ ಬೌಲರ್‌ಗಳದ್ದೇ ಆಟ. ಪಂಜಾಬ್‌ನ ಆರು ಬ್ಯಾಟ್ಸ್‌ಮನ್‌ಗಳು ಒಂದಕ್ಕಿ ಮೊತ್ತ ಸಹ ದಾಟಲಿಲ್ಲ. ಕೊನೆಗೆ 119 ರನ್‌ಗೆ ತನ್ನೆಲ್ಲಾ ವಿಕೆಟ್ ಅನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು ಪಂಜಾಬ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications