Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ರೆಂಟ್ ಬೌಲ್ಟ್‌, ಬುಮ್ರಾ ಬೌಲಿಂಗ್ ಎದುರಿಸಲು ನಾನು ಸಿದ್ಧ: ಶಿಖರ್ ಧವನ್

I Already Know My Plans Against Jasprit Bumra And Trent Boult: Shikar Dhawan

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 05) ನಡೆಯಲಿರುವ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇತ್ತಂಡಗಳು ರಣತಂತ್ರ ಹೆಣೆದು ಅಖಾಕ್ಕಿಳಿಯಲು ಸಜ್ಜಾಗಿವೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಉಭಯ ತಂಡಗಳು ಎದುರಾಳಿಯ ವೀಕ್ನೆಸ್ ಅರಿತು ದಾಳಿ ನಡೆಸಲು ಯೋಜನೆ ಹಾಕಿಕೊಂಡಿವೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್‌ಫಾರ್ಮ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮುಂಬೈ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2020 ರಲ್ಲಿ 525 ರನ್ ಗಳಿಸಿರುವ ಧವನ್, ತಾನು ಯಾವಾಗಲೂ ತಾಜಾತನದಿಂದ ಇರುತ್ತೇನೆ ಮತ್ತು ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ವಿರುದ್ಧ ತನ್ನ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂದು ಒತ್ತಿಹೇಳಿದ್ದಾರೆ.

"ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ನನ್ನನ್ನು ತಾಜಾವಾಗಿರಿಸಿಕೊಳ್ಳುತ್ತೇನೆ. ನಾನು ಅವರನ್ನು ಸಾಕಷ್ಟು ಬಾರಿ ನೋಡಿದ್ದೇನೆ ಮತ್ತು ಅವರ ವೀಡಿಯೊಗಳನ್ನು ಮತ್ತೆ ನೋಡಿದ್ದೇನೆ. ನನ್ನ ಯೋಜನೆಗಳನ್ನು ನಾನು ಈಗಾಗಲೇ ತಿಳಿದಿದ್ದೇನೆ. ನಮ್ಮ ತಂಡಕ್ಕೆ ಹೋಗಿ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ ಮತ್ತು ಅಂತಿಮವಾಗಿ ತನ್ನ ತಂಡವನ್ನು ಫೈನಲ್‌ಗೆ ಕರೆದೊಯ್ಯಲು ಎದುರು ನೋಡುತ್ತಿದ್ದೇನೆ'' ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿತು. ಪ್ರಸಕ್ತ ಸೀಸನ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಹೇಗಾದರೂ ಮಾಡಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

Story first published: Wednesday, November 4, 2020, 19:23 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+