ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದ ಖ್ಯಾತ ಕುಸ್ತಿಪಟು

ಪ್ರಸಿದ್ಧ ಕುಸ್ತಿಪಟು ರಿತು ಫೋಗಟ್ ತಾವು ಟೀಮ್ ಇಂಡಿಯಾ ನಾಯಕ ಹಾಗೂ ಆರ್‌ಸಿಬಿ ಲೀಡರ್ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗಲೆಲ್ಲ ಕೊಹ್ಲಿ ಆಟ ನೋಡುತ್ತೇನೆ ಎಂದು ರಿತು ಸ್ಟಾರ್ ಸ್ಪೋಟ್ಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಎಂದಿಗೂ ಬಿಟ್ಟು ಕೊಡುವವರಲ್ಲ ಮತ್ತು ಮೈದಾನದಲ್ಲಿ ಯಾವಾಗಲೂ ತನ್ನ ಶೇಕಡಾ 100 ರಷ್ಟು ಕಮಿಟ್‌ಮೆಂಟ್ ನೀಡುತ್ತಾರೆ ಎಂದು ಒನ್ ಚಾಂಪಿಯನ್‌ಶಿಪ್ ಸ್ಟಾರ್ ರಿತು ಫೋಗಟ್ ಹೇಳಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಯಿಂದ ಭಾರೀ ಸ್ಫೂರ್ತಿ ಪಡೆದಿದ್ದಾರಂತೆ.
"ಕ್ರಿಕೆಟ್ ಮತ್ತು ಐಪಿಎಲ್ ವಿಷಯಕ್ಕೆ ಬಂದರೆ, ನಾನು ನಿಜವಾಗಿಯೂ ದೊಡ್ಡ ವಿರಾಟ್ ಕೊಹ್ಲಿ ಅಭಿಮಾನಿ. ತರಬೇತಿಯಿಂದ ಸಮಯ ಸಿಕ್ಕಾಗಲೆಲ್ಲಾ ನಾನು ಅವರ ತಂಡದ ಆರ್‌ಸಿಬಿಯ ಪಂದ್ಯಗಳನ್ನು ನೋಡುತ್ತೇನೆ ಮತ್ತು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ" ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದ ಕ್ರಿಕೆಟ್ ಲೈವ್‌ನಲ್ಲಿ ಮಾತನಾಡುವಾಗ ರಿತು ಹೇಳಿದರು.
ರಿತು ಅಕ್ಟೋಬರ್ 30 ರಂದು ಸಿಂಗಾಪುರದಲ್ಲಿ ಆಯೋಜನೆಯಾಗಿರುವ ಕಾಂಬೋಡಿಯನ್ ಎಂ.ಎಂ.ಎ.ಸೀಜನ್ ಒನ್ ಇನ್ ಸೈಡ್ ದ ಮ್ಯಾಟ್ರಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ನಿಯೋ ಸೆರೆಯಾ ಪೋವ್ ಅವರನ್ನು ಮಣಿಸಲು ಸಿದ್ಧತೆ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications