ನನಗೀಗ 30 ವರ್ಷ ವಯಸ್ಸು ಅಂದುಕೊಳ್ಳೋಕೆ ಕಷ್ಟ ಅನ್ನಿಸ್ತಿದೆ: ರಿಷಬ್ ಪಂತ್

ನವದೆಹಲಿ, ಮೇ 8: ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಕೊಂಡಾಡುವಂತ ಪ್ರದರ್ಶನವೇನೂ ನೀಡಿಲ್ಲ. ಉತ್ತಮ ಪ್ರದರ್ಶನವಿಲ್ಲದಿದ್ದರೂ ಪಂತ್ ಸಾಧಾರಣ ಅನ್ನಿಸುವಂತ ಬ್ಯಾಟಿಂಗ್ ತೋರಿಕೊಂಡಿದ್ದು ಮಾತ್ರ ನಿಜವೆ.
ಒಟ್ಟು 14 ಪಂದ್ಯಗಳನ್ನಾಡಿದ್ದ ಪಂತ್ 36.45ರ ಸರಾಸರಿಯಲ್ಲಿ 401 ರನ್ ಕಲೆ ಹಾಕಿದ್ದರು. ಅಲ್ಲದೆ ಗಮನಾರ್ಹ 157.87 ಸ್ಟ್ರೈಕ್ ರೇಟ್ ತೋರಿಸಿದ್ದರು. ಆದರೂ ಟೀಕಾಕಾರರು ಪಂತ್ ಬೆನ್ನು ಬಿಡಲಿಲ್ಲ. ಟೀಕಿಸುವವರನ್ನೂ ಬಿಡದ ಪಂತ್ ಉತ್ತರ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪಂತ್ ಟೀಕಾಕಾರರಿಗೇ ಪ್ರತ್ಯುತ್ತರವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಬಂದದ್ದೆಲ್ಲಾ ಬರಲಿ..
'ಯಾವುದೇ ಟೀಕೆಯನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನನ್ನ ಪ್ರಕಾರ ಪಂದ್ಯವನ್ನು ಮುಗಿಸೋದು ಮುಖ್ಯ. ನಾನಿದನ್ನು ಹಂತಹಂತವಾಗಿ ಕಲಿಯುತ್ತಿದ್ದೇನೆ. ಅನುಭವ ಮತ್ತು ತಪ್ಪುಗಳಿಂದ ಮಾತ್ರ ನೀವು ಕಲಿಯೋದಕ್ಕೆ ಸಾಧ್ಯ' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಪಂತ್ ಹೇಳಿದ್ದಾರೆ.

30 ವರ್ಷದವರಂತೆ ಯೋಚಿಸಲಾಗದು
ಮಾತು ಮುಂದುವರೆಸಿದ 'ಬೇಬಿಸಿಟ್ಟರ್' ಖ್ಯಾತಿಯ ಪಂತ್, 'ಒಂದೇ ದಿನದಲ್ಲಿ ಏನನ್ನೇ ಆಗಲಿ ನಾವು ಬದಲಿಸಲಾಗೋಲ್ಲ. ನನಗೀಗ ಬರೀ 21 ವರ್ಷ ವಯಸ್ಸು. 30 ವರ್ಷದವರಂತೆ ನನ್ನನ್ನು ನಾನು ಭಾವಿಸಿಕೊಳ್ಳಲಾರೆ' ಎಂದು ರಿಷಬ್ ಕೊಂಚ ಖಾರವಾಗೇ ಟೀಕಾಕಾರರಿಗೆ ತಿರುಗೇಟು ನೀಡಿದರು.

ಮೊದಲ ಆದ್ಯತೆಯ ಕೀಪರ್
ಟೆಸ್ಟ್ ಕ್ರಿಕೆಟ್‌ಗೆ ಬಂದರೆ ರಿಷಬ್ ಪಂತ್ ಭಾರತದ ಮೊದಲ ಆದ್ಯತೆಯ ವಿಕೆಟ್ ಕೀಪರ್. ಆದರೆ ಮುಂಬರಲಿರುವ ಐಸಿಸಿ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಪಂತ್‌ಗೆ ಸ್ಥಾನ ನೀಡಿಲ್ಲ. ದಿನೇಶ್ ಕಾರ್ತಿಕ್ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಸ್ಥಾನ ಆವರಿಸಿಕೊಂಡಿದ್ದಾರೆ. ಪಂತ್ ಈ ಬಗ್ಗೆಯೂ ನಿರಾಶೆ ವ್ಯಕ್ತಪಡಿಸಿಲ್ಲ. ಬದಲಿಗೆ ಸಕಾರಾತ್ಮಕವಾಗೇ ಸಂದರ್ಭವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಕೊಂಚ ಕಾಲಾವಕಾಶ ನೀಡಿ
ನನ್ನ ಕಲಿಕಾ ಹಂತಗಳಲ್ಲಿ ಕಲಿಯಬೇಕಾದುದನ್ನು ನಾನು ಕಲಿಯುತ್ತ ಬರುತ್ತಿದ್ದೇನೆ. ಈಗಷ್ಟೇ ನಾನು ಬಲಗೊಳ್ಳುತ್ತಿದ್ದೇನೆ, ಪ್ರೌಢನಾಗುತ್ತಿದ್ದೇನೆ. ನೀವು ನಂಗಿನ್ನೂ ಒಂಚೂರು ಕಾಲಾವಕಾಶ ನೀಡಬೇಕಿದೆ' ಎಂದು ಪಂತ್ ಟೀಕಿಸುವ ಅಭಿಮಾನಿಗಳಲ್ಲಿ, ಕ್ರಿಕೆಟ್ ಪಂಡಿತರಲ್ಲಿ ಕೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications