"ನಾನು ಆಲ್‌ರೌಂಡರ್ ಅಲ್ಲ, ಟೈಲೆಂಡರ್" ಎಂದಿದ್ದೇಕೆ ಪಾಕಿಸ್ತಾನ ಕ್ರಿಕೆಟಿಗ?
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ನಂತರ ಪಾಕಿಸ್ತಾನ ತಂಡಕ್ಕೆ ಸಾಲು ಸಾಲು ಟೀಕೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನ ತಂಡದ ಕೆಲ ಆಟಗಾರರು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಿರುತ್ತಾರೆ.
ಈಗ ಪಾಕಿಸ್ತಾನದ ಬ್ಯಾಟಿಂಗ್ ಆಲ್‌ರೌಂಡರ್ ಇಫ್ತಿಕರ್ ಅಹ್ಮದ್ ಅವರ ವಿಡಿಯೋವೊಂದು ವೈರಲ್ ಆಗಿದೆ. ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅವರು ತನ್ನನ್ನು ಆಲ್ ರೌಂಡರ್ ಅಲ್ಲ, ಟೈಲೆಂಡರ್ ಬ್ಯಾಟರ್ ಎಂದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಮಾಧ್ಯಮಗಳಿಗೆ ಹೇಳಿದ್ದೇನು?
ಇಫ್ತಿಕರ್ ಅಹ್ಮದ್ ಆಲ್‌ರೌಂಡರ್ ಆಗಲು ನಿರಾಕರಿಸಿದ್ದು, 'ನಾನು ಮಧ್ಯಮ ಕ್ರಮಾಂಕದ ಬ್ಯಾಟರ್ ಅಲ್ಲ, ಕೆಳ ಕ್ರಮಾಂಕದ ಬ್ಯಾಟರ್. ನಾನು ಆಲ್‌ರೌಂಡರ್ ಅಲ್ಲ, ಟೈಲೆಂಡರ್. ನೀವು ನೋಡಿರಬಹುದು, ನಾನು 7 ಅಥವಾ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೇನೆ. ಆಲ್‌ರೌಂಡರ್‌ಗಳು 4 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಹೀಗಾಗಿ ನಾನು ನನ್ನನ್ನು ಟೈಲೆಂಡರ್ ಎಂದು ಪರಿಗಣಿಸುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಟೈಲೆಂಡರ್ ಎಂದರೇನು?
ನಾಲ್ಕು ಅಥವಾ ಐದು ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡುವವರನ್ನು ಪ್ರಪಂಚದಾದ್ಯಂತ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಎಂದು ಕರೆಯಲಾಗುತ್ತದೆ. ಆದರೆ ಏಳು-ಎಂಟು ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟರ್‌ಗಳನ್ನು ಟೈಲೆಂಡರ್ ಎನ್ನಲಾಗುತ್ತದೆ
ಇಫ್ತಿಕರ್ ಅಹ್ಮದ್ ಅವರ ಪ್ರದರ್ಶನ
ಪಾಕಿಸ್ತಾನ ತಂಡವನ್ನು ಮೂರು ಮಾದರಿ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿರುವ ಇಫ್ತಿಕರ್ ಆಹ್ಮದ್ ತಮ್ಮನ್ನು ತಾವು ಆಲ್‌ರೌಂಡರ್ ಎಂದು ಪರಿಗಣಿಸದಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ಅವರು ಪಾಕ್ ಪರ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಕೊಡುಗೆ ನೀಡಿದ್ದಾರೆ.
ಪಾಕಿಸ್ತಾನ ಪರ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಫ್ತಿಕರ್ ಅಹ್ಮದ್ 4 ರಿಂದ 8ನೇ ಕ್ರಮಾಂಕದ ವರೆಗೂ ಬ್ಯಾಟಿಂಗ್ ಮಾಡಿದ್ದಾರೆ. 4 ಟೆಸ್ಟ್‌ಗಳಲ್ಲಿ 61 ರನ್, 28 ಏಕದಿನಗಳಲ್ಲಿ 614 ರನ್ ಮತ್ತು 66 ಟಿ20 ಪಂದ್ಯಗಳಲ್ಲಿ 998 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಕೇವಲ 1 ಶತಕವಿದೆ. ಇದರೊಂದಿಗೆ ಟೆಸ್ಟ್‌ನಲ್ಲಿ 1, ಏಕದಿನದಲ್ಲಿ 16 ಮತ್ತು ಟಿ20 ಕ್ರಿಕೆಟ್‌ನಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications