Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಲೆಳೆದ ರೋಹಿತ್, ವಾರ್ನರ್‌ಗೆ ಬೊಂಬಾಟ್ ಉತ್ತರ ಕೊಟ್ಟ ಶಿಖರ್ ಧವನ್

I am not scared of fast bowlers: Dhawan’s reply to Rohit and Warner

ನವದೆಹಲಿ, ಮೇ 14: ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಭಾರತದ ಓಪನರ್ ರೋಹಿತ್ ಶರ್ಮಾ ಇಬ್ಬರೂ ಇನ್‌ಸ್ಟಾಗ್ರಾಮ್‌ನ ಲೈವ್ ಚಾಟ್‌ನಲ್ಲಿ ಭಾರತದ ಮತ್ತೊಬ್ಬ ಓಪನಿಂಗ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಕಾಲೆಳೆದಿದ್ದರು. ಅದಕ್ಕೆ ಧವನ್ ಈಗ ಉತ್ತರಿಸಿದ್ದಾರೆ.

ಡೇವಿಡ್‌ ವಾರ್ನರ್ ಐಪಿಎಲ್‌ನಲ್ಲಿ ಸನ್‌ ರೈಡರ್ಸ್ ಹೈದರಾಬಾದ್ ತಂಡದಲ್ಲಿ ಶಿಖರ್ ಧವನ್‌ ಜೊತೆ ಒಪನರ್ ಆಗಿ ಇಳಿದ ಅನುಭವ ಹೊಂದಿದ್ದರೆ, ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ಪರ ಧವನ್ ಜೊತೆ ಆರಂಭಿಕ ಜೊತೆಯಾಟ ಆಡಿದ ಅನುಭವವಿದೆ. ಹೀಗಾಗಿ ಇಬ್ಬರೂ ಲೈವ್‌ನಲ್ಲಿ ಮಾತನಾಡುತ್ತ 'ಧವನ್‌ಗೆ ಮೊದಲ ಎಸೆತ ಎದುರಿಸಲು ಭಯ' ಎಂದು ತಮಾಷೆಯಾಗಿದ್ದರು.

'ಹರ್ಭಜನ್ ಸಿಂಗ್ ಬೌಲಿಂಗ್ ಮಾಡಿದರೆ ಮಾತ್ರ ಶಿಖರ್ ಧವನ್ ಎದುರಿಸಲು ಮುಂದಾಗುತ್ತಾರೆ. ಎಡಗೈ ವೇಗಿಯಾಗಿದ್ದರೆ ನಾನು ಸ್ಟ್ರೈಕ್ ತೆಗೆದುಕೊಳ್ಳಲಾರೆ ಎನ್ನುತ್ತಿರುತ್ತಾರೆ,' ಎಂದು ವಾರ್ನರ್, ರೋಹಿತ್ ಜೊತೆ ಮಾತನಾಡುತ್ತ ಹೇಳಿಕೊಂಡಿದ್ದರು. ಭಾರತದ ಆಲ್ ರೌಂಡರ್‌ ಇರ್ಫಾನ್ ಪಠಾಣ್ ಕೂಡ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಇದೇ ಪ್ರಶ್ನೆಯನ್ನು ಧವನ್ ಮುಂದಿಟ್ಟಿದ್ದರು.

ಇರ್ಫಾನ್ ಪ್ರಶ್ನೆಗೆ ಉತ್ತರಿಸಿದ ಧವನ್, 'ಇಲ್ಲ ಇಲ್ಲ, ನಾನಿದಕ್ಕೆ ಒಪ್ಪಲಾರೆ. ನನಗೆ ವೇಗಿಗಳ ಎಸೆತ ಎದುರಿಸಲು ಇಷ್ಟವಿಲ್ಲ ಎಂದಲ್ಲ. ಎಲ್ಲರಿಗೂ ಅವರದ್ದೇ ಆಲೋಚನೆಗಳಿವೆ. ನಾನೊಬ್ಬ ಆರಂಭಿಕ ಬ್ಯಾಟ್ಸ್‌ಮನ್. ಸುಮಾರು 8 ವರ್ಷಗಳಿಂದಲೂ ನಾನು ಭಾರತ ಪರ ಓಪನರ್ ಪಾತ್ರ ನಿರ್ವಹಿಸುತ್ತಿದ್ದೇನೆ. ಹೀಗಾಗಿ ಸಹಜವಾಗೇ ನಾನು ವೇಗಿಗಳನ್ನು ಎದುರಿಸಬಲ್ಲೆ. ಒಂದು ವೇಳೆ ನಾನು ಮೊದಲ ಓವರ್‌ನಲ್ಲಿ ಎದುರಿಸದಿದ್ದರೂ, ಎರಡನೇ ಓವರ್‌ನಲ್ಲಂತೂ ಎದುರಿಸಿಯೇ ಎದುರಿಸುತ್ತೇನೆ,' ಎಂದಿದ್ದಾರೆ.

'ಹೌದು ಪಂದ್ಯದ ಮೊದಲ ಎಸೆತವನ್ನು ಎದುರಿಸಲು ನಾನು ಹೆಚ್ಚಾಗಿ ಇಷ್ಟಪಡಲ್ಲ. ಅದನ್ನು ನಾನು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಹಾಗಂತ ಪೃಥ್ವಿ ಶಾನಂತ ಯುವ ಬ್ಯಾಟ್ಸ್‌ಮನ್‌ಗಳಿದ್ದರೆ, ಅವರಿಗೆ ಮೊದಲ ಎಸೆತ ಎದುರಿಸಲು ಅಂಜಿಕೆಯಿದೆ ಎನಿಸಿದರೆ ನಾನು ಖಂಡಿತವಾಗಿಯೂ ಸ್ಟ್ರೈಕ್ ತೆಗೆದುಕೊಳ್ಳುತ್ತೇನೆ,' ಎಂದು ಧವನ್ ಪ್ರತಿಕ್ರಿಯಿಸಿದ್ದಾರೆ.

Story first published: Thursday, May 14, 2020, 23:12 [IST]
Other articles published on May 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+