
ಸೌತಾಂಪ್ಟನ್, ಜೂನ್ 21: ಬದ್ಧ ಎದುರಾಳಿ ತಂಡ ಪಾಕಿಸ್ತಾನ ವಿರುದ್ಧ ಜಯ ಗಳಿಸಿ ಹೊಸ ಹುಮ್ಮಸ್ಸಿನಲ್ಲಿರುವ ಭಾರತ ತಂಡ, ಶನಿವಾರ (ಜೂನ್ 22) ಅಫ್ಘಾನಿಸ್ತಾನವನ್ನು ಎದುರುಗೊಳ್ಳಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 15 ರನ್ ಕೊಡುಗೆ ನೀಡಿದ್ದ ಆಲ್ ರೌಂಡರ್ ವಿಜಯ್ ಶಂಕರ್, ಮುಂದಿನ ಪಂದ್ಯಗಳ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿರುವ ವಿಜಯ್ ಶಂಕರ್, ಬಿಸಿಸಿಐ ಪೋಸ್ಟ್ ಮಾಡಿರುವ ಟ್ವಿಟರ್ ವಿಡಿಯೋದಲ್ಲಿ ತನ್ನ ಆರೋಗ್ಯ ಸ್ಥಿತಿ, ಅಭ್ಯಾಸ, ಮುಂದಿನ ಪಂದ್ಯಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅಭ್ಯಾಸ ನಿತರ ಭಾರತ ತಂಡದಿಂದ ಹೊರಗಿರುವ ವಿಜಯ್, ದಿನವನ್ನು ಹೇಗೆ ಕಳೆಯುತ್ತಿದ್ದೇನೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.
ಈ ವೇಳೆ ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಮತ್ತು ವಿಜಯ್ ಶಂಕರ್ ಈ ಮೂವರಲ್ಲಿ ಯಾರು ಬೆಸ್ಟ್ ಪ್ಲೇಯರ್ ಎಂಬ ಪ್ರಶ್ನೆಗೆ ಉತ್ತರಿಸಿದ ಶಂಕರ್, ಈ ಮೂವರಲ್ಲಿ ತಾನು ಉತ್ತಮ ಬ್ಯಾಟ್ಸ್ಮನ್ ಎಂದರು. ಅಂದ್ಹಾಗೆ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಜಸ್‌ಪ್ರೀತ್ ಬೂಮ್ರಾ ಎಸೆತಕ್ಕೆ ಗಾಯ ಮಾಡಿಕೊಂಡಿರುವ ಶಂಕರ್‌ಗೆ ಗಂಭೀರ್ ಗಾಯಗಳಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ತಂಡದ ಮತ್ತೊಬ್ಬ ವೇಗಿ ಭುವನೇಶ್ವರ್ ಕುಮಾರ್ ಕೂಡ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತ ತಂಡದಲ್ಲಿ ಗಾಯದ ಸಮಸ್ಯೆಯಿದೆಯಾದರೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ತೀವ್ರ ಚಿಂತೆಗೊಳಗಾಗುವ ಇರಾದೆಯಿಲ್ಲ. ಈ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾದದಲ್ಲಿ ಕೊಹ್ಲಿ ಬಳಗವಿದೆ.