ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್

ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಭಾರತೀಯ ಕ್ರಿಕೆಟಿಗರು ಚರ್ಚೆಯಾಗುತ್ತಿರುವಷ್ಟು ಬೇರೆ ದೇಶದ ಯಾವುದೇ ಕ್ರಿಕೆಟಿಗರು ಸಹ ಚರ್ಚೆಗೊಳಪಡುತ್ತಿಲ್ಲ ಎಂದರೆ ತಪ್ಪಾಗಲಾರದು. ಅದರಲ್ಲಿಯೂ ಭಾರತ ತಂಡವನ್ನು 2 ಭಾಗಗಳಾಗಿ ವಿಂಗಡಿಸಿ 2 ಪ್ರತ್ಯೇಕ ದೇಶಗಳಿಗೆ ಕ್ರಿಕೆಟ್ ಆಡಲು ಕಳುಹಿಸಿದಾಗಿನಿಂದ ಟೀಮ್ ಇಂಡಿಯಾ ಕುರಿತು ಚರ್ಚೆ ತುಸು ಹೆಚ್ಚೇ ಎಂದು ಹೇಳಬಹುದು.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ ಇತ್ತ ಶಿಖರ್ ಧವನ್ ನೇತೃತ್ವದ ಯುವ ಆಟಗಾರರಿಂದ ಕೂಡಿರುವ ಮತ್ತೊಂದು ತಂಡ ಶ್ರೀಲಂಕಾ ಪ್ರವಾಸದಲ್ಲಿ ನಿರತವಾಗಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸಜ್ಜಾಗುತ್ತಿದ್ದರೆ ಇತ್ತ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಲಂಕಾ ವಿರುದ್ಧ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದ್ದು ಈಗ ಟಿ ಟ್ವೆಂಟಿ ಸರಣಿ ಮೇಲೂ ಸಹ ಕಣ್ಣಿಟ್ಟಿದೆ.
3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಈಗಾಗಲೇ ಟೀಮ್ ಇಂಡಿಯಾ ಗೆದ್ದುಕೊಂಡಿದ್ದು ಮೇಲುಗೈ ಸಾಧಿಸಿದೆ. ಶ್ರೀಲಂಕಾ ಪ್ರವಾಸಕ್ಕೆ ಪ್ರತ್ಯೇಕ ಇಂಡಿಯಾ ತಂಡವನ್ನು ರಚಿಸಿದಾಗ ಭಾರತ ಬಿ ತಂಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹಲವಾರು ಮಾಜಿ ಕ್ರಿಕೆಟಿಗರು ಈ ತಂಡದ ರಚನೆಯನ್ನು ಕಾಲೆಳೆಯಲು ಶುರು ಮಾಡಿದ್ದರು. ಈ ಎಲ್ಲಾ ಟೀಕೆಗಳಿಗೆ ಶಿಖರ್ ಧವನ್ ನೇತೃತ್ವದ ತಂಡ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಮೂಲಕ ಸರಿಯಾದ ಉತ್ತರ ನೀಡಿದೆ.
ಇದೀಗ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಲಂಕಾ ವಿರುದ್ಧ ಆಡುತ್ತಿರುವ ಆಟದ ಕುರಿತು ಮಾತನಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಶಿಖರ್ ಧವನ್ ನಾಯಕತ್ವವನ್ನು ಕೊಂಡಾಡಿದ್ದಾರೆ. ಎಂಎಸ್ ಧೋನಿ ಛಾಯೆ ಶಿಖರ್ ಧವನ್ ನಾಯಕತ್ವದಲ್ಲಿ ಕಾಣಿಸುತ್ತಿದೆ ಎಂದು ಕಮ್ರಾನ್ ಅಕ್ಮಲ್ ಈ ಕೆಳಕಂಡಂತೆ ಶಿಖರ್ ಧವನ್ ನಾಯಕತ್ವವನ್ನು ಹೊಗಳಿದ್ದಾರೆ.

ಶಿಖರ್ ಧವನ್ ನಾಯಕತ್ವದಲ್ಲಿ ಧೋನಿ ನಾಯಕತ್ವದ ಛಾಯೆ ಇದೆ
ಲಂಕಾ ವಿರುದ್ಧ ಶಿಖರ್ ಧವನ್ ಭಾರತ ತಂಡವನ್ನು ನಿಭಾಯಿಸಿದ ರೀತಿ ನಿಜಕ್ಕೂ ಚಾಣಾಕ್ಷತನದಿಂದ ಕೂಡಿತ್ತು, ಬೌಲರ್‌ಗಳ ಬದಲಾವಣೆ ಹಾಗೂ ಕ್ಷೇತ್ರ ರಕ್ಷಣೆಯ ಉಪಾಯಗಳು ನಿಖರವಾಗಿದ್ದವು. ಶಿಖರ್ ಧವನ್ ಚಾಣಾಕ್ಷತನದ ನಾಯಕತ್ವವನ್ನು ನೋಡುತ್ತಿದ್ದ ವೇಳೆ ಎಂ ಎಸ್ ಧೋನಿ ನಾಯಕತ್ವ ನೆನಪಿಗೆ ಬಂತು ಎಂದು ಅಕ್ಮಲ್ ಶಿಖರ್ ಧವನ್ ನಾಯಕತ್ವವನ್ನು ಹೊಗಳಿದ್ದಾರೆ.

ಟಿ ಟ್ವೆಂಟಿ ಸರಣಿಯನ್ನೂ ಗೆಲ್ಲುವ ತವಕದಲ್ಲಿ ಧವನ್ ಪಡೆ
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಶಿಖರ್ ಧವನ್ ಪಡೆ ಇದೀಗ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೇಲೆ ಕಣ್ಣಿಟ್ಟಿದೆ. 3 ಟಿ ಟ್ವೆಂಟಿ ಪಂದ್ಯಗಳ ಪೈಕಿ ಈಗಾಗಲೇ ಮೊದಲನೇ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಮಂಗಳವಾರ ರಾತ್ರಿ ಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯವನ್ನಾಡಲಿದೆ.

ಇನ್ನೂ ಬರಲಿದೆ ಪ್ರಶಂಸೆಯ ಸುರಿಮಳೆ
ಕೇವಲ ಕಮ್ರಾನ್ ಅಕ್ಮಲ್ ಮಾತ್ರವಲ್ಲ ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನು ಭಾರತ ಗೆದ್ದುಕೊಂಡರೆ ಹಲವಾರು ದಿಗ್ಗಜ ಕ್ರಿಕೆಟಿಗರು ಶಿಖರ್ ಧವನ್ ನೇತೃತ್ವದ ಭಾರತ ತಂಡವನ್ನು ಹಾಡಿ ಹೊಗಳುವುದಂತೂ ಪಕ್ಕಾ. ತಂಡದ ಸ್ಟಾರ್ ಆಟಗಾರರೆಲ್ಲಾ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ ಯುವ ಆಟಗಾರರನ್ನು ಇಟ್ಟುಕೊಂಡು 2 ಸರಣಿಯನ್ನು ಎದುರಾಳಿಗಳ ನೆಲದಲ್ಲಿ ಗೆಲ್ಲುವುದು ದೊಡ್ಡ ಸಾಧನೆಯೇ ಸರಿ. ಹೀಗಾಗಿ ಟಿ ಟ್ವೆಂಟಿ ಸರಣಿಯನ್ನೂ ಟೀಮ್ ಇಂಡಿಯಾ ಗೆದ್ದರೆ ಶಿಖರ್ ಧವನ್ ಮತ್ತಷ್ಟು ಪ್ರಶಂಸೆಯನ್ನು ಪಡೆದುಕೊಳ್ಳಲಿದ್ದಾರೆ. ಅದರಲ್ಲಿಯೂ ಭಾರತದ ಗೆಲುವಿನ ಹಿಂದಿನ ಪ್ರಮುಖ ಕಾರಣಕರ್ತ ರಾಹುಲ್ ದ್ರಾವಿಡ್ ಬಗ್ಗೆ ಪ್ರಶಂಸೆಯ ಸುರಿಮಳೆ ಆಗುವುದಂತೂ ಪಕ್ಕಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications