ಇಂಗ್ಲೆಂಡ್ ವಿಶ್ವಕಪ್ ತಂಡದ ಬಗ್ಗೆ ಕ್ಯಾಪ್ಟನ್ ಮಾರ್ಗನ್ ಹೇಳಿದ್ದೇನು?

ಲಂಡನ್, ಮೇ 20: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಆತಿಥೇಯ ಇಂಗ್ಲೆಂಡ್ ತಂಡ ವಿಶ್ವಕಪ್‌ಗೆ ತನ್ನ ಅಂತಿಮ 15 ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ತಂಡದ 15 ಆಟಗಾರರ ಆಯ್ಕೆ ಕುರಿತಾಗಿ ಮಾತನಾಡಿರುವ ನಾಯಕ ಐಯಾನ್ ಮಾರ್ಗನ್, ಅಂತಿಮ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆಯುತ್ತಾರೆ ಎಂಬುದರ ಬಗ್ಗೆ ಕಿಂಚಿತ್ತೂ ಸುಳಿವಿಲ್ಲ ಎಂದು ತಮ್ಮ ವಿಶ್ವಕಪ್ ತಂಡವನ್ನು ಗುಟ್ಟಾಗಿರಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ನಡೆದ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 4-0 ಅಂತರದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಭಾನುವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಪಾಕ್ ತಂಡವನ್ನು 54 ರನ್‌ಗಳಿಂದ ಬಗ್ಗುಬಡಿದ ಬಳಿಕ ಮಾತನಾಡಿದ ಮಾರ್ಗನ್, "15 ಆಟಗಾರರು ಯಾರೆಂದು ನನಗೂ ತಿಳಿದಿಲ್ಲ. ಸದ್ಯ ತಂಡದಲ್ಲಿ ಇರುವ ಆಟಗಾರರೆಲ್ಲರೂ ತಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡಬೇಕು. ಆಟಗಾರರ ಈ ಭರ್ಜರಿ ಪ್ರದರ್ಶನದಿಂದ ಆಯ್ಕೆ ಪ್ರಕ್ರಿಯೆ ಅತ್ಯಂತ ಕಷ್ಟದ ಕೆಲಸವಾಗಿದೆ,'' ಎಂದು ಹೇಳಿದ್ದಾರೆ.
ಇದೇ ವೇಳೆ ಪಾಕ್ ವಿರುದ್ಧದ ಅಂತಿಮ ಪಂದ್ಯದಲ್ಲಿ 5 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಗೌರವ ಪಡೆದ ಕ್ರಿಸ್ ವೋಕ್ಸ್ ಮಾತನಾಡಿ, "ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕರೆಗಾಗಿ ಎಲ್ಲರೂ ಕಾದು ಕುಳಿತಿದ್ದೇವೆ. ವಿಶ್ವಕಪ್‌ನಲ್ಲಿ ಖಂಡಿತಾ ಸ್ಥಾನ ಲಭ್ಯವಾಗುತ್ತದೆ ಎಂಬ ವಿಶ್ವಾಸವಿದ್ದರೂ, ಸೆಲೆಕ್ಟರ್‌ಗಳಿಂದ ಈ ಮಾತು ಕೇಳುವ ವರೆಗೂ ಸಂಕಟ ಕಾಡುತ್ತದೆ. ಏಕೆಂದರೆ ತಂಡದ 17 ಮಂದಿ ಸದ್ಯರೆಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ,'' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸದ್ಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವ ಶ್ರೇಯಾಂಕದಲ್ಲಿ ಇಂಗ್ಲೆಂಡ್ ತಂಡ ನಂ.1 ಸ್ಥಾನದಲ್ಲಿದ್ದು, ಮೇ 30ರಂದು ಆರಂಭವಾಗಲಿರುವ ಏಕದಿನ ಕ್ರಿಕೆಟ್‌ನ 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಂದಹಾಗೆ ಕ್ರಿಕೆಟ್ ಜನಕರಾದ ರಾಷ್ಟ್ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಈವರೆಗು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications