Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನಿಂಗ್ಸ್ ಗೂ ಮೊದಲು ನಾನು ಬ್ಯಾಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ: ಪೃಥ್ವಿ

I dont pre-meditate before an innings: Prithvi Shaw

ಬೆಂಗಳೂರು, ಅಕ್ಟೋಬರ್ 3: ಇನ್ನಿಂಗ್ಸ್ ಗೂ ಮೊದಲು ನಾನು ನನ್ನ ಬ್ಯಾಟಿಂಗ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗೋದೇಯಿಲ್ಲ. ಬ್ಯಾಟಿಂಗ್ ಗೆ ಹೋಗುವಾಗ ನಾನು ಖಾಲಿ ತಲೆಯೊಂದಿಗೆ ಹೋಗುತ್ತೇನೆ' ಎಂದು ತನ್ನ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಹೇಳಿದ್ದಾರೆ.

ದೇಸಿ ಕ್ರಿಕೆಟ್ ನಲ್ಲಿ ಮುಂಬೈ ಇಂಡಿಯಾದ ಆರಂಭಿಕ ಆಟಗಾರನಾಗಿ ಮಿಂಚಿದ್ದ 18ರ ಹರೆಯದ ಪೃಥ್ವಿ, ಅಕ್ಟೋಬರ್ 4ರಿಂದ ರಾಜ್ ಕೋಟ್ ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್-ಭಾರತ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಐಸಿಸಿ ಅಂಡರ್-19 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 8 ಭರ್ಜರಿ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಪೃಥ್ವಿ ಬರೋಬ್ಬರಿ 261 (94, 57, 40, 41, 29) ರನ್ ಕಲೆ ಹಾಕಿದ್ದರು. ಈ ವೇಳೆ ಪೃಥ್ವಿ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು.ಹೀಗಾಗಿಯೇ ಪೃಥ್ವಿಗೆ ವೆಸ್ಟ್ ಇಂಡೀಸ್ ಸರಣಿ ವೇಳೆ ಭಾರತ ತಂಡದಲ್ಲಿ ಆರಂಭಿಕರಾಗಿ ಸ್ಥಾನ ಲಭಿಸಿದೆ. ಈ ಮೂಲಕ ಪೃಥ್ವಿ ವಿಶ್ವದ ಅತೀ ಕಿರಿಯ ಬ್ಯಾಟ್ಸ್ಮನ್ ಗಳ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ತನ್ನ ಬ್ಯಾಟಿಂಗ್ ಗುಟ್ಟನ್ನು ಬಿಚ್ಚಿಡುತ್ತಾ ಪೃಥ್ವಿ, 'ನಾನು ಬ್ಯಾಟಿಂಗ್ ಗೆ ಹೋಗುವಾಗ ಖಾಲಿ ತಲೆಯೊಂದಿಗೆ ಹೋಗುತ್ತೇನೆ. ಯಾವತ್ತೂ ನಾನು ಮುಂಚಿತವಾಗಿ ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗೋಲ್ಲ. ಆದರೆ ಬ್ಯಾಟ್ ಕೈಗೆತ್ತಿಕೊಂಡ ಮೇಲೆ ವಿಕೆಟ್ ಗಮನಿಸುತ್ತೇನೆ. ಅನಂತರ ಎಸೆತ ಗಮನಿಸಿ ಅದಕ್ಕೆ ತಕ್ಹಾಗೆ ಆಡುತ್ತಾ ಹೋಗುತ್ತೇನೆ' ಎಂದರು.

Story first published: Thursday, October 4, 2018, 15:22 [IST]
Other articles published on Oct 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+