'ನಾನು ಅನ್‌ಫಿಟ್ ಎಂದು ಯಾರಾದರು ಹೇಳುವುದನ್ನು ಬಯಸುವುದಿಲ್ಲ'

ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 45 ರನ್‌ಗಳ ಜಯ ದಾಖಲಿಸಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಚೆನ್ನೈ ಎರಡು ಗೆಲುವು ಕಂಡಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೂಡ ಕಾರಣರೆ. ಯಾಕೆಂದರೆ ಪಂದ್ಯದಲ್ಲಿ ಧೋನಿ 18 ರನ್ ಸೇರಿಸಿದ್ದರು. ಬ್ಯಾಟಿಂಗ್ ವೇಳೆ ಧೋನಿ ಕ್ವಿಕ್ ರನ್, ಚುರುಕಿನ ವಿಕೆಟ್ ಕೀಪಿಂಗ್‌ಗಾಗಿ ಯತ್ನಿಸುತ್ತಿದ್ದಿದ್ದು ಕಾಣಿಸಿತ್ತು.
39ರ ಹರೆಯದವರಾದರೂ ಧೋನಿ ಎಂದಿನಂತೆ ಫಿಟ್ ಆಗಿದ್ದು ಕಾಣಿಸಿದ್ದರಿಂದ ಸುದ್ದಿಗಾರರು ಈ ಬಗ್ಗೆ ಧೋನಿಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎಂಎಸ್ ಧೋನಿ, ಯಾರಿಂದಲೂ ನಾನು ಅನ್‌ಫಿಟ್ ಅಂತ ಹೇಳಿಕೊಳ್ಳೋದು ನನಗೆ ಇಷ್ಟವಿಲ್ಲ. ಅದಕ್ಕಾಗೇ ಫಿಟ್ ಆಗಿರಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.
ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಎಂಎಸ್‌ಡಿ, 'ನೀವು ಆಡುತ್ತಿದ್ದಾಗ ನಿಮಗೆ ಯಾರಾದರೂ ಆತ ಅನ್‌ಫಿಟ್ ಅಂತ ಹೇಳೋದು ಬಯಸಲಾರಿರಿ. ಯುವ ಆಟಗಾರರಿಗೆ ನಾನು ಕೀಪಿಂಗ್ ಮಾಡಬೇಕಾಗುತ್ತದೆ. ಅವರು ಚುರುಕಾಗಿರುತ್ತಾರೆ. ಈ ಫಿಟ್ನೆಸ್ ಉಳಿಸಿಕೊಂಡರೆ ಮಾತ್ರ ಅವರಿಗೆ ಸವಾಲೊಡ್ಡಬಹುದು,' ಎಂದಿದ್ದಾರೆ.
ಸೋಮವಾರದ ಪಂದ್ಯದೊಂದಿಗೆ ಮಾಹಿ ಸಿಎಸ್‌ಕೆ ಪರ 200 ಪಂದ್ಯಗಳಲ್ಲಿ ನಾಯಕರಾಗಿ ಆಡಿದಂತಾಗಿದೆ. ರಾಜಸ್ಥಾನ್ ವಿರುದ್ಧದ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಏಪ್ರಿಲ್ 21ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications