Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್‌ ಶರ್ಮಾಗೆ ಹೋಲಿಸಿದಾಗ ಇಷ್ಟವಾಗಲ್ಲ: ಹೈದರ್ ಅಲಿ

I feel uncomfortable on being compared with Rohit Sharma says Haider Ali

ಇಸ್ಲಮಾಬಾದ್: ಭಾರತದ ಲಿಮಿಟೆಡ್ ಓವರ್‌ ಕ್ರಿಕೆಟ್‌ನ ಉಪನಾಯಕ ರೋಹಿತ್ ಶರ್ಮಾ ಅವರಂತೆ ಆಡೋದು ಇಷ್ಟವಾಗುತ್ತದೆ. ಆದರೆ ನನ್ನನ್ನು ರೋಹಿತ್‌ಗೆ ಹೋಲಿಸುವಾಗ ಸರಿ ಅನ್ನಿಸುವುದಿಲ್ಲ ಎಂದು ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಹೇಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ ಟಿ20ಐ ಪಾದಾರ್ಪಣೆ ಪಂದ್ಯ ಆಡಿದ್ದ ಹೈದರ್ ಆಕರ್ಷಕ ಅರ್ಧ ಶತಕ (54 ರನ್) ಬಾರಿಸಿದ್ದರು. ಆಗ ರೋಹಿತ್ ರೀತಿಯಲ್ಲೇ ಹೈದರ್ ದಿಟ್ಟ ಬ್ಯಾಟಿಂಗ್ ನೀಡಿದ್ದರು. ಆಗ ಇಬ್ಬರ ಬಗ್ಗೆಯೂ ಹೋಲಿಕೆ ಮಾತು ಕೇಳಿಬಂದಿತ್ತು. ಆದರೆ ರೋಹಿತ್ ಶರ್ಮಾ ನಿಪುಣ ಆಟಗಾರ. ಅವರಿಗೆ ತನ್ನನ್ನು ಹೋಲಿಸೋದು ಸರಿಯಲ್ಲ ಎಂದು ಅಲಿ ಅಭಿಪ್ರಾಯಿಸಿದ್ದಾರೆ.

ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಅಲಿ, 'ರೋಹಿತ್ ಒಬ್ಬರು ಟಾಪ್ ಬ್ಯಾಟ್ಸ್‌ಮನ್‌. ನಮ್ಮಿಬ್ಬರನ್ನು ಯಾರೇ ಹೋಲಿಸಿದರೂ ನನಗೆ ಮುಜುಗರವಾಗುತ್ತದೆ. ಈ ಹೋಲಿಕೆಯೇ ಸರಿಯಲ್ಲಿ. ಶರ್ಮಾ ಈಗಾಗಲೇ ಬಹಳಷ್ಟು ಸಾಧನೆ ಮಾಡಿದ್ದಾರೆ,' ಎಂದಿದ್ದಾರೆ.

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವಿಡಿಯೋ ನೋಡಿ ತಾನೀಗ ಕಲಿಯುತ್ತಿರುವುದಾಗಿ ಹೈದರ್ ಹೇಳಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್‌ ವಿಡಿಯೋ ನೋಡಿಯೂ ಅದರಿಂದ ಒಂದಿಷ್ಟು ಕಲಿಯುತ್ತಿದ್ದೇನೆ ಎಂದು ಅಲಿ ತಿಳಿಸಿದ್ದಾರೆ. ಹೈದರ್ ಅಲಿಗೀಗ 20ರ ಹರೆಯ.

Story first published: Saturday, October 10, 2020, 18:42 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+