Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದಲ್ಲಿ ಅಭದ್ರತೆ ನನ್ನನ್ನು ಕಾಡಲೇ ಇಲ್ಲ ಎಂದ ದ.ಆಫ್ರಿಕಾ ಆಟಗಾರ

ಭಯೋತ್ಪಾದನೆಯ ಕಾರಣಕ್ಕೆ ಪಾಕಿಸ್ತಾನದಲ್ಲಿ ದಶಕಗಳ ಕಾಲ ಯಾವೊಂದು ಕ್ರೀಡಾಕೂಟವೂ ನಡೆದಿರಲಿಲ್ಲ. ಪಾಕಿಸ್ತಾನದ ನೆಲಕ್ಕೆ ಯಾವ ತಂಡವೂ ತೆರಳುವ ಪರಿಸ್ಥಿತಿಯಲ್ಲಿರಲಿಲ್ಲ. ಪಾಕಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆಗಳು ಸ್ಥಬ್ಧವಾದಂತಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಚಟುವಟಿಕೆಗಳು ಜೋರಾಗಿವೆ.

ಪಾಕಿಸ್ತಾನದಲ್ಲಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದು ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೊಂದು ದೊಡ್ಡ ಶಕ್ತಿಯನ್ನು ನೀಡುತ್ತಿದೆ. ಪಾಕಿಸ್ತಾನ ಸೂಪರ್ ಕೀಗ್‌ನ ಕಾರಣಕ್ಕೆ ಸಾಕಷ್ಟು ವಿದೇಶಿ ಆಟಗಾರರು ಪಾಕ್ ನೆಲಕ್ಕೆ ತೆರಳಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೀಗ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡ ದಕ್ಷಿಣ ಆಫ್ರಿಕಾ ಆಟಗಾರನೋರ್ವ ಪಾಕಿಸ್ತಾನದ ಭದ್ರತೆಯ ಬಗ್ಗೆ ಮಾತುಗಳನ್ನಾಡಿ ಆಶ್ಚರ್ಯವನ್ನುಂಟು ಮಾಡಿದ್ದಾರೆ.

ಅಭದ್ರತೆ ಕಾಡಲೇ ಇಲ್ಲ

ಅಭದ್ರತೆ ಕಾಡಲೇ ಇಲ್ಲ

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ನನಗೆ ಇಲ್ಲಿ ಅಭದ್ರತೆ ಕಾಡಲೇ ಇಲ್ಲ. ಇಲ್ಲಿ ಕ್ರಿಕೆಟ್ ಆಟವನ್ನು ನಾನು ಸಾಕಷ್ಟು ಅನುಭವಿಸುತ್ತಿದ್ದೇನೆ ಎಂದು ಪಾಕಿಸ್ತಾನದ ಅನುಭವಿ ಸ್ಪಿನ್ನರ್ ಪಾಕಿಸ್ತಾನದಲ್ಲಿನ ಭದ್ರತೆಯ ಬಗ್ಗೆ ಮಾತನ್ನಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್

ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್

ಹೀಗೆ ಪಾಕಿಸ್ತಾನದ ಭದ್ರತಾ ವಿಚಾರವಾಗಿ ಹೆಳಿಕೆಯನ್ನು ನಿಡಿದ್ದು ಬೇರೆ ಯಾರೂ ಅಲ್ಲ. ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್. ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿರುವ ತಾಹಿರ್ ಭದ್ರತೆಯ ಬಗ್ಗೆ ಮಾತುಗಳನ್ನಾಡಿದ್ದಾರೆ.

ಕಿವೀಸ್ ವಿರುದ್ಧದ ಟೆಸ್ಟ್ ಸೋಲಿಗೆ 'ಇದೇ' ಕಾರಣ: ಬ್ರ್ಯಾನ್ ಲಾರಾ

ವಿದೇಶಿ ಆಟಗಾರರು ಅಭಿಪ್ರಾಯವೂ ಇದೇ

ವಿದೇಶಿ ಆಟಗಾರರು ಅಭಿಪ್ರಾಯವೂ ಇದೇ

ಇಮ್ರಾನ್ ತಾಹಿರ್ ಮಾತನಾಡುತ್ತಾ ಕೇವಲ ತನಗೆ ಮಾತ್ರ ಈ ರೀತಿ ಅನಿಸುತ್ತಿಲ್ಲ. ಇತರೆ ವಿದೇಶಿ ಆಟಗಾರರೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಭದ್ರತೆ ಮತ್ತು ಟೂರ್ನಿಯ ಗುಣಮಟ್ಟದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಇಮ್ರಾನ್ ತಾಹಿರ್ ಹೇಳಿದ್ದಾರೆ.

ತಾಹಿರ್ ತವರೂರು ಪಾಕಿಸ್ತಾನ.

ತಾಹಿರ್ ತವರೂರು ಪಾಕಿಸ್ತಾನ.

ಹಾಗೆ ನೋಡಿದರೆ ಇನ್ರಾಮ್ ತಾಹಿರ್‌ಗೆ ಪಾಕಿಸ್ತಾನ ಸುಭದ್ರ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ಇಮ್ರಾನ್ ತಾಹಿರ್ ಸದ್ಯ ದಕ್ಷಿಣ ಆಫ್ರಿಕಾದ ರಾಷ್ಟ್ರೀಯತೆ ಹೊಂದಿದ್ದರೂ ಕೂಡ ತಾಹಿರ್ ಹುಟ್ಟಿದ್ದು ಪಾಕಿಸ್ತಾದಲ್ಲೇ. ಪಾಕಿಸ್ತಾನದ ಲಾಹೋರ್‌ನಲ್ಲಿ ತಾಹಿರ್ ಜನಸಿದ್ದು ಅಲ್ಲಿ ತಾಹಿರ್ ಕುಟುಂಬಸ್ಥರು ಇನ್ನೂ ಇದ್ದಾರೆ.

ಮುಲ್ತಾನ್ ಸುಲ್ತಾನ್ಸ್‌ ತಂಡದಲ್ಲಿ ತಾಹಿರ್

ಮುಲ್ತಾನ್ ಸುಲ್ತಾನ್ಸ್‌ ತಂಡದಲ್ಲಿ ತಾಹಿರ್

ಇಮ್ರಾನ್ ತಾಹೀರ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಲ್ತಾನ್ ಸುಲ್ತಾನ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ ಇಮ್ರಾನ್ ತಾಹೀರ್. ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ತಾಹಿರ್ 10 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್‌ನಲ್ಲೂ ತಾಹಿರ್

ಐಪಿಎಲ್‌ನಲ್ಲೂ ತಾಹಿರ್

ಇಮ್ರಾನ್ ತಾಹಿರ್ ಐಪಿಎಲ್‌ನಲ್ಲೂ ಮಿಂಚಿರುವ ಆಟಗಾರ. 2014 ರಿಂದ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ತಾಹಿರ್ ಚೆನ್ನೈ ಸೂಒರ್ ಕಿಂಗ್ಸ್‌ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಸದ್ಯ ಐಪಿಎಲ್ ಮುಂದೂಡಲ್ಪಟ್ಟಿದ್ದು ಅಂದುಕೊಂಡಂತೆ ಆರಂಭವಾದರೆ ಚೆನ್ನೈ ತಂಡವನ್ನು ತಾಹಿರ್ ಕೂಡಿಕೊಳ್ಳಲಿದ್ದಾರೆ.

Story first published: Monday, March 16, 2020, 13:39 [IST]
Other articles published on Mar 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+