ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ಧದ ಟೆಸ್ಟ್ ಸೋಲಿಗೆ 'ಇದೇ' ಕಾರಣ: ಬ್ರ್ಯಾನ್ ಲಾರಾ

Brian Lara Has His Say On Team India Test series Loss In New Zealand

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತಿದೆ. ಟೆಸ್ಟ್‌ನಲ್ಲಿ ನಂಬರ್ 1 ತಂಡವಾಗಿರುವ ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿದ್ದರೂ ವೆಸ್ಟ್‌ಇಂಡೀಸ್‌ನ ದಿಗ್ಗಜ ಬ್ರ್ಯಾನ್ ಲಾರಾ ಟೀಮ್ ಇಂಡಿಯಾ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಕಾಣಲು ಕಾರಣವಾದ ಅಂಶದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?

ಹಾಗಾದರೆ ವೆಸ್ಟ್ ಇಮಡೀಸ್ ದಿಗ್ಗಜ ಲಾರಾ ಪ್ರಕಾರ ಟೀಮ್ ಇಂಡಿಯಾ ಸೋಲಲು ಕಾರಣ ಏನು ಮುಂದೆ ಓದಿ...

ಕಳೆದ ಹತ್ತು ವರ್ಷಗಳಲ್ಲಿ ಭಾರತ ಬಲಿಷ್ಠ

ಕಳೆದ ಹತ್ತು ವರ್ಷಗಳಲ್ಲಿ ಭಾರತ ಬಲಿಷ್ಠ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಅತ್ಯಂತ ಬಲಿಷ್ಟ ತಂಡವಾಗಿದೆ. ಅದರಲ್ಲೂ ವಿದೇಶಿ ಪಿಚ್‌ಗಳಲ್ಲೂ ಟೀಮ್ ಇಂಡಿಯಾ ಸತತವಾಗಿ ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದಿದ್ದಾರೆ ವೆಸ್ಟ್‌ಇಂಡೀಸ್‌ನ ಲೆಜೆಂಡರಿ ಆಟಗಾರ ಬ್ರ್ಯಾನ್ ಲಾರಾ.

ನ್ಯೂಜಿಲೆಂಡ್‌ ವಿರುದ್ಧ ಸೋಲಿಗೆ ಕಾರಣ

ನ್ಯೂಜಿಲೆಂಡ್‌ ವಿರುದ್ಧ ಸೋಲಿಗೆ ಕಾರಣ

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಯನ್ನು ಸೋಲುವುದಕ್ಕೆ ವೆಸ್ಟ್ ಇಂಡೀಸ್ ದಿಗ್ಗಜ ಲಾರಾ ಕಾರಣ ನೀಡಿದ್ದಾರೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಹೆಚ್ಚಿನ ಸೀಮಿತ ಓವರ್‌ಗಳ ಆಟವನ್ನು ಆಡುತ್ತಿದೆ. ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚಿನದಾಗಿ ಪಾಲ್ಗೊಳ್ಳುತ್ತಿದೆ. ಟೀಮ್ ಇಂಡಿಯಾದ ಸೋಲಿಗೆ ಇದು ಒಂದು ಕಾರಣವಾಗಿರಬಹುದೆಂದು ಲಾರಾ ವಿಶ್ಲೇಷಣೆ ಮಾಡಿದ್ದಾರೆ.

ಕೊರೊನಾವೈರಸ್: ವಿರಾಟ್ ಕೊಹ್ಲಿ, ರಾಹುಲ್, ಮಯಾಂಕ್ ವಿಶೇಷ ಸಂದೇಶ

ಭಾರತ ಅತ್ಯುತ್ತಮ ಪ್ರವಾಸಿ ತಂಡ

ಭಾರತ ಅತ್ಯುತ್ತಮ ಪ್ರವಾಸಿ ತಂಡ

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಸೋತರೂ ಟೀಮ್ ಇಂಡಿಯಾ ಅತ್ಯುತ್ತಮ ಪ್ರವಾಸಿ ತಂಡ ಎಂಬ ಮಾತನ್ನು ಲಾರಾ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಸೋತಿರಬಹುದು. ಆದರೆ ಟೀಮ್ ಇಂಡಿಯಾ ಇನ್ನೂ ಬಲಿಷ್ಠ ತಂಡವಾಗಿಯೇ ಇದೆ ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ ಲಾರಾ.

ರೋಡ್ ಸೇಫ್ಟಿ ಟೂರ್ನಿಯಲ್ಲಿ ಲಾರಾ

ರೋಡ್ ಸೇಫ್ಟಿ ಟೂರ್ನಿಯಲ್ಲಿ ಲಾರಾ

ಲಾರಾ ಸದ್ಯ ಭಾರತದಲ್ಲೆ ಇದ್ದಾರೆ. ರೋಡ್ ಸೇಫ್ಟಿ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಬ್ರ್ಯಾನ್ ಲಾರಾ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬ್ರ್ಯಾನ್ ಲಾರಾ ಕ್ರೀಡಾ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.

ರೋಡ್ ಸೇಫ್ಟಿ ಸರಣಿ ಮುಂದಕ್ಕೆ

ರೋಡ್ ಸೇಫ್ಟಿ ಸರಣಿ ಮುಂದಕ್ಕೆ

ದಿಗ್ಜ ಕ್ರಿಕೆಟಿಗರು ಆಡುತ್ತಿರುವ ರೋಡ್ ಸೇಫ್ಟಿ ವಿಶ್ವ ಚಾಂಪಿಯನ್‌ಷಿಪ್ ಸದ್ಯ ಕೊರೊನಾ ವೈರಸ್ ಭೀತಿಯ ಕಾರಣದಿಂದ ಮುಂದೂಡಲಾಗಿದೆ. ಭಾರತ ಸೇರಿದಂತೆ ವೆಸ್ಟ್‌ ಇಂಡೀಸ್, ಶ್ರೀಲಂಕಾ, ಅಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿತ್ತು.

Story first published: Sunday, March 15, 2020, 14:47 [IST]
Other articles published on Mar 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X