Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ನಾನು ಐಪಿಎಲ್‌ನಿಂದ ಹಿಂದೆ ಸರಿದಿದ್ದೇನೆ': ಹರ್ಭಜನ್ ಸಿಂಗ್ ಟ್ವೀಟ್

I have pulled out of IPL: Harbhajan Singh Tweeted

ಚೆನ್ನೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿಯಿದೆ. ಆದರೆ ಇನ್ನೂ ಕೂಡ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ನ ಸಮಸ್ಯೆಗಳು ಮುಗಿದಂತೆ ಕಾಣುತ್ತಿಲ್ಲ. ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದ್ದಾರೆ.

ಹರ್ಭಜನ್ ಸಿಂಗ್, ಈ ಬಾರಿಯ ಐಪಿಎಲ್‌ನಲ್ಲಿ ಆಡೋದು ಅನುಮಾನ ಎಂದು ಒಂದು ವಾರದಿಂದೀಚೆಯಿಂದಲೂ ಹೇಳಲಾಗುತ್ತಿತ್ತು. ಶುಕ್ರವಾರ (ಸೆಪ್ಟೆಂಬರ್ 4) ಭಜ್ಜಿ ಟ್ವೀಟ್ ಮೂಲಕ ಇದನ್ನು ಖಾತರಿಪಡಿಸಿದ್ದಾರೆ. ಐಪಿಎಲ್‌ನಿಂದ ನಾನು ಹಿಂದೆ ಸರಿದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

'ಪ್ರೀತಿಯ ಸ್ನೇಹಿತರೆ, ವೈಯಕ್ತಿಕ ಕಾರಣಗಳಿಂದಾಗಿ ನಾನು ಈ ವರ್ಷದ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇಂಥ ಕಷ್ಟದ ಸಮಯದಲ್ಲಿ ನನಗೆ ಗೌಪ್ಯತೆ ಬೇಕಿರುವುದರಿಂದ ನಾನು ನನ್ನ ಕುಟುಂಬದ ಜೊತೆಗೆ ಸಮಯ ಕಳೆಯಲು ಬಯಸಿದ್ದೇನೆ. ಸಿಎಸ್‌ಕೆ ಆಡಳಿತ ಮಂಡಳಿ ನನಗೆ ಸಂಪೂರ್ಣ ಬೆಂಬಲ ನೀಡಿದೆ. ನಾನವರಿಗೆ ಶ್ರೇಷ್ಠ ಐಪಿಎಲ್ ಅನ್ನು ಹಾರೈಸುತ್ತೇನೆ. ಜೈ ಹಿಂದ್' ಎಂದು ಭಜ್ಜಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಗದು ಶ್ರೀಮಂತ ಐಪಿಎಲ್ ಹತ್ತಿರವಾಗುತ್ತಿದ್ದಂತೆಯೇ ಸಿಎಸ್‌ಕೆ ತಂಡದಲ್ಲಿ ಇಬ್ಬರು ಆಟಗಾರರು ಸೇರಿ (ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್) 13 ಮಂದಿಗೆ ಕೊರೊನಾ ತಗುಲಿತ್ತು. ಆಲ್ ರೌಂಡರ್ ಸುರೇಶ್ ರೈನಾ ಕೂಡ ವೈಯಕ್ತಿಕ ಕಾರಣ ನೀಡಿ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಅಂದ್ಹಾಗೆ, ಈಗ ಸಿಎಸ್‌ಕೆಯಲ್ಲಿ ಯಾರಿಗೂ ಕೊರೊನಾ ಇಲ್ಲ. ಎಲ್ಲರೂ ಗುಣಮುಖರಾಗಿದ್ದಾರೆ.

Story first published: Friday, September 4, 2020, 23:31 [IST]
Other articles published on Sep 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+