Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು 100 ಟೆಸ್ಟ್ ಪಂದ್ಯ ಆಡ್ತೀನಿ ಅಂದುಕೊಂಡಿರಲಿಲ್ಲ: ದೇವರ ದಯೆ ಎಂದ ಕೊಹ್ಲಿ

Virat kohli

ಶ್ರೀಲಂಕಾ ವಿರುದ್ಧ ಐತಿಹಾಸಿಕ ಪಂದ್ಯವನ್ನಾಡಲು ಸಜ್ಜಾಗಿರುವ ವಿರಾಟ್ ಕೊಹ್ಲಿ ತಾನು ಇಷ್ಟು ದೂರ ಬಂದು ಆಡುತ್ತೀನಿ, ಅದ್ರಲ್ಲೂ 100 ಟೆಸ್ಟ್ ಪಂದ್ಯ ಆಡುತ್ತೇನೆಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 4 ರಂದು (ಶುಕ್ರವಾರ) ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವು ವಿರಾಟ್‌ ಕೊಹ್ಲಿಗೆ 100ನೇ ಟೆಸ್ಟ್ ಪಂದ್ಯವಾಗಿದ್ದು, ಭಾರತದ ಪರ ನೂರು ಟೆಸ್ಟ್ ಪಂದ್ಯಗಳನ್ನಾಡಿದ ಕೆಲವು ಆಟಗಾರರ ಲಿಸ್ಟ್‌ಗೆ ಸೇರಲಿದ್ದಾರೆ.

''ಇಲ್ಲಿಯವರೆಗಿನ ಪ್ರಯಾಣಕ್ಕೆ ತುಂಬಾ ಕೃತಜ್ಞತೆಗಳು. ಒಂದು ದೊಡ್ಡ ದಿನ ಮತ್ತು ವಿಶೇಷ ಟೆಸ್ಟ್ ಪಂದ್ಯ. ಇದನ್ನು ಪ್ರಾರಂಭಿಸಲು ಕಾಯಲು ಸಾಧ್ಯವಿಲ್ಲ'' ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವ ಬೃಹತ್ ಸಾಧನೆಯನ್ನು ಸಮೀಪಿಸಿರುವ ವಿರಾಟ್‌, ಈ ಮೈಲಿಗಲ್ಲು ತಲುಪಿದ ಭಾರತದ 12ನೇ ಆಟಗಾರನೆಂಬ ಸಾಧನೆ ಮಾಡಲಿದ್ದಾರೆ. ಭಾರತದ ಮಾಜಿ ನಾಯಕ ಕಳೆದ ದಶಕದಲ್ಲಿ ಅತ್ಯಂತ ಸ್ಥಿರವಾದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಮಾಡಿರುವ ದಾಖಲೆಗಳು ಸಾಕಷ್ಟಿದೆ.

33 ವರ್ಷ ವಯಸ್ಸಿನ ಅವರು ಇಲ್ಲಿಯವರೆಗೆ 7962 ರನ್ ಗಳಿಸಿದ್ದಾರೆ. ಅದ್ರಲ್ಲೂ ಎಲ್ಲಾ ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಕ್ರಿಕೆಟಿಗ ಆಗಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 27 ಬಾರಿ ಶತಕದ ಸಾಧನೆ ಮಾಡಿದ್ದಾರೆ.

"ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿದೆ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅದ್ರಲ್ಲೂ ಬಹಳಷ್ಟು ಅಂತರಾಷ್ಟ್ರೀಯ ಕ್ರಿಕೆಟ್. ನಾನು 100 ಟೆಸ್ಟ್ ಪಂದ್ಯ ತಲುಪಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ದೇವರು ದಯೆ ತೋರಿಸಿದ್ದಾನೆ. ನನ್ನ ಫಿಟ್ನೆಸ್‌ಗಾಗಿ ನಾನು ತುಂಬಾ ಶ್ರಮಿಸಿದ್ದೇನೆ. ಇದು ನನಗೆ, ನನ್ನ ಕುಟುಂಬಕ್ಕೆ, ನನ್ನ ಕೋಚ್‌ಗೆ ಒಂದು ದೊಡ್ಡ ಕ್ಷಣವಾಗಿದೆ, ಅವರು ಈ ಟೆಸ್ಟ್ ಪಂದ್ಯದ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತಾರೆ, "ಎಂದು ಕೊಹ್ಲಿ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುವುದರ ಮೇಲೆ ನಾನು ಯಾವಾಗಲೂ ತನ್ನ ಮನಸ್ಸನ್ನು ಹೊಂದಿದ್ದೇನೆ ಮತ್ತು ತನ್ನ ಗುರಿಗಳನ್ನು ಎಂದಿಗೂ ಸೀಮಿತಗೊಳಿಸಲಿಲ್ಲ ಎಂದು ಕೊಹ್ಲಿ ಟೆಸ್ಟ ಕ್ರಿಕೆಟ್ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸಿದರು.

Story first published: Friday, March 4, 2022, 10:01 [IST]
Other articles published on Mar 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+