Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸವಾಲುಗಳನ್ನು ಪ್ರೀತಿಸುತ್ತೇನೆ ಎಂದು ನಾಯಕನಾದ ಬಳಿಕ ತಿಳಿಸಿದ ಶ್ರೇಯಸ್ ಅಯ್ಯರ್

ಭಾರತಕ್ಕೆ ಟಿ20 ವಿಶ್ವಕಪ್‌ ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿದೆ. ನಾಯಕನಾಗುವ ಬಗ್ಗೆ ಶ್ರೇಯಸ್ ಅಯ್ಯರ್ ಅವರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಾಲ್ಯದಿಂದಲೂ ಸವಾಲುಗಳನ್ನು ಎದುರಿಸುವುದನ್ನು ನಾನು ಇಷ್ಟಪಡುತ್ತಿದ್ದೆ ಮತ್ತು ರಾಷ್ಟ್ರೀಯ ತಂಡದ ನಾಯಕನಾಗುವುದು ಎಂದರೆ ತುಂಬು ಖುಷಿ ನೀಡಿದೆ ಎಂದು ಅಯ್ಯರ್ ಹೇಳಿದ್ದಾರೆ.

ಮುಂಬೈನಂತಹ ಸ್ಪರ್ಧಾತ್ಮಕ ಕ್ರಿಕೆಟ್ ಪರಿಸರದಲ್ಲಿ ಬೆಳೆದು ತನ್ನ ಛಾಪು ಮೂಡಿಸಿದ್ದು ಖುಷಿ ನೀಡಿದೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ. ನಾನು ಮೊದಲಿನಂತೆಯೇ ಇರಲು ಬಯಸುತ್ತೇನೆ. ನಾನು ನನ್ನ ತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

I Love Challenges

ಮುಂಬೈನಂತಹ ಸ್ಪರ್ಧಾತ್ಮಕ ಕ್ರಿಕೆಟ್‌ ನಗರದಲ್ಲಿ ಬೆಳದಿರುವುದದಿಂದ ಹಲವು ಸಂಗತಿಗಳನ್ನು ಕಲಿತಿದ್ದೇನೆ. ನಾನು ಎದುರಿಸಿದ ಸವಾಲುಗಳು ನನ್ನ ಜೀವನದ ಒಂದು ಭಾಗವಾಗಿದೆ. ಸವಾಲುಗಳನ್ನು ನಾನು ಪ್ರೀತಿಸುತ್ತೇನೆ. ಸವಾಲುಗಳನ್ನು ಮೆಟ್ಟಿನಿಂತು ನಿಲ್ಲುವುದನ್ನು ಕಲಿತಿದ್ದೇನೆ. ನಾನು ಬೆಳೆದ ನಗರದಲ್ಲಿ ಕ್ರಿಕೆಟ್‌ ತುಂಬಾ ಚೆನ್ನಾಗಿದ್ದು, ಸ್ಪರ್ಧೆ ಸಹ ಹೆಚ್ಚಾಗಿದೆ ಎಂದು ಶ್ರೇಯಸ್ ತಿಳಿಸಿದ್ದಾರೆ.

ಹೊಸ ವಿಷಯಗಳನ್ನು ನಾನು ಕಲಿಯಲು ಉತ್ಸುಕನಾಗಿರುತ್ತೇನೆ. ಆಟವನ್ನು ಆನಂದಿಸುವುದು, ಹೋರಾಟದ ಮನಸ್ಥಿತಿಯನ್ನು ಕಾಪಾಡಿಕೊಳ್ಳುವದು ನಮ್ಮನ್ನು ದೂರ ಕರೆದೊಯ್ಯುತ್ತದೆ. ನಾಯಕತ್ವ ನನಗೆ ನೀಡಲಾಗಿರುವ ಜವಾಬ್ದಾರಿ ನನಗೆ ದೊಡ್ಡ ಸವಾಲಾಗಿದೆ ಎಂದು ನೂತನ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

I Love Challenges

ಸುಮಾರು 2 ವರ್ಷಗಳ ವರೆಗೆ ಭಾರತ ಟಿ20 ತಂಡದಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ ಈಗ ತಂಡಕ್ಕೆ ನಾಯಕನಾಗಿ ಭರ್ಜರಿ ಎಂಟ್ರಿ ನೀಡಿದ್ದಾರೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಕಳೆದ ಮೂರು ವರ್ಷಗಳಿಂದ ಐಪಿಎಲ್‌ನಲ್ಲಿ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಸಾಧನೆ

31 ವರ್ಷದ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್‌ಗಳನ್ನು ಆಡಿದ ಆಟಗಾರ. ಇವರು ಭಾರತದ ಪರ 14 ಟೆಸ್ಟ್‌, 76 ಏಕದಿನ, 51 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ತಮ್ಮ ಕೊನೆಯ ಟಿ20 ಪಂದ್ಯವನ್ನು ಭಾರತದ ಪರ ಬೆಂಗಳೂರಿನಲ್ಲಿ ಡಿಸೆಂಬರ್‌ 3, 2023ರಂದು ಆಡಿದ್ದರು. ಇವರು ಚುಟುಕು ಫಾರ್ಮೆಟ್‌ನಲ್ಲಿ 30ರ ಸರಾಸರಿಯಲ್ಲಿ 1104 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 8 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ಇವರು ಅಮೋಘ ದಾಖಲೆಯನ್ನು ಹೊಂದಿದ್ದಾರೆ. ಇವರ ಮುಂದಾಳತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇನ್ನು 2025ರಲ್ಲಿ ಇವರ ಮುಂದಾಳತ್ವದಲ್ಲಿ ಪಂಜಾಬ್ ಕಿಂಗ್ಸ್‌ ಫೈನಲ್‌ಗೆ ತಲುಪಿತ್ತು. ಈ ಬಾರಿಯಲ್ಲಿ ಪಂಜಾಬ್ ತಂಡದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬೈ ಹೇಳಿದೆ.

Story first published: Sunday, June 7, 2026, 22:03 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+