Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು ಒಂದಲ್ಲಾ ಒಂದು ದಿನ ಐಪಿಎಲ್ ಆಡೇ ಆಡ್ತೀನಿ, ಇದು ಶತಸಿದ್ಧ: ತೆಂಬಾ ಬವುಮಾ

Temba bavuma

ದಕ್ಷಿಣ ಆಫ್ರಿಕಾದ ಲಿಮಿಟೆಡ್ ಓವರ್ ಕ್ರಿಕೆಟ್ ಕ್ಯಾಪ್ಟನ್ ತೆಂಬಾ ಬವುಮಾ, ವಿಶ್ವದ ಬಹುದೊಡ್ಡ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದಲ್ಲಾ ಒಂದು ದಿನ ಐಪಿಎಲ್ ಆಡೇ ಆಡ್ತೀನಿ ಎಂಬ ಆಶಾಭಾವನೆ ಹೊಂದಿದ್ದಾರೆ.

32 ವರ್ಷದ ತೆಂಬಾ ಬವುಮಾ ಕಳೆದ ಐಪಿಎಲ್ 2022ರ ಮೆಗಾ ಆಟಗಾರರ ಹರಾಜಿನಲ್ಲಿ ಪಟ್ಟಿಯಲ್ಲಿದ್ದ 33 ದಕ್ಷಿಣ ಆಫ್ರಿಕಾ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೆಂಬಾ ಬವುಮಾ ಅನ್‌ಸೋಲ್ಡ್ ಆಗಿದ್ದರು.

ಐಪಿಎಲ್‌ನಲ್ಲಿ ಕಳೆದ ಹಲವು ಸೀಸನ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ತಂಡಗಳ ಪರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಗಿಸೊ ರಬಾಡ, ಡೇವಿಡ್ ಮಿಲ್ಲರ್ ಐಪಿಎಲ್ 2022ರ ಸೀಸನ್‌ನಲ್ಲಿ ತಮ್ಮ ಫ್ರಾಂಚೈಸಿ ಪರ ಉತ್ತಮ ಪ್ರದರ್ಶನ ನೀಡಿದರು.

ಹೀಗಾಗಿ ಬವುಮಾ ಮುಂದೊಂದು ದಿನ ತಾನೂ ಐಪಿಎಲ್ ಟೂರ್ನಿಯಲ್ಲಿ ಖಂಡಿತವಾಗಿಯೂ ಭಾಗಿಯಾಗುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

"ನಾನು ಅಲ್ಲಿ ಆಡಲು ಬಯಸುತ್ತೇನೆ. ನನ್ನ ಪ್ರದರ್ಶನಗಳು ಉತ್ತಮವಾದಷ್ಟೂ ಸಾಧ್ಯತೆ ಹೆಚ್ಚುತ್ತದೆ. ನಾನೂ ಕೂಡ ನಾಯಕನಾಗುವ ಕನಸನ್ನು ಹೊಂದಿದ್ದೇನೆ. ಅದು ಎಲ್ಲಿಂದ ಬಂತು ಎಂದು ನನಗೆ ಖಚಿತವಿಲ್ಲ. ಆ ಮಟ್ಟಿನ ನಾಯಕತ್ವ ತಿಳುವಳಿಕೆಯನ್ನೂ ಪಡೆಯಲು ನಾನು ಬಯಸುತ್ತೇನೆ. ಆದರೆ ಮೊದಲು, ನಾನು ತಂಡವನ್ನು ಸೇರಬೇಕಾಗಿದೆ'' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ತೆಂಬಾ ಬವುಮಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಜೂನ್ 9ರಂದು ಗುರುವಾರ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಭಾಗಿಯಾಗಲಿವೆ.

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ(ನಾಯಕ), ಡಿ ಕಾಕ್‌, ಹೆಂಡ್ರಿಕ್ಸ್‌, ಕ್ಲಾಸೆನ್‌, ಮಹಾರಾಜ್‌, ಮಾರ್ಕ್ರಮ್‌, ಮಿಲ್ಲರ್‌, ಎನ್‌ಗಿಡಿ, ನೋಕಿಯಾ,ಪಾರ್ನೆಲ್‌, ಪ್ರಿಟೋರಿಯಸ್‌, ರಬಾಡ, ಶಮ್ಸಿ, ಸ್ಟಬ್ಸ್‌, ಡುಸ್ಸೆನ್‌, ಯಾನ್ಸನ್‌.

ಟಿಂ ಇಂಡಿಯಾ ಸ್ಕ್ವಾಡ್‌
ಕೆಎಲ್ ರಾಹುಲ್(ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಶ್ನೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Friday, June 3, 2022, 15:37 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+