Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಸಾನಿಯಾ ಮಿರ್ಝಾ, ವೀಣಾ ಮಲಿಕ್ ನಡುವೆ ಟ್ವೀಟ್ ಜಟಾಪಟಿ!

Im not Pakistan teams dietician nor mother: Sania Mirza responds to Veena Malik

ಇಸ್ಲಮಾಬಾದ್, ಜೂನ್ 18: ಕ್ರಿಕೆಟ್ ಆಟದ ವಿಚಾರಕ್ಕೆ ಬಂದರೆ ಬದ್ಧ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಿಶ್ವಕಪ್ ಪಂದ್ಯದಲ್ಲೂ ಭಾರತ ಜಯ ಗಳಿಸಿತ್ತು. ಇತ್ತಂಡಗಳ ಕದನಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಶೀಶ ಕೆಫೆಯಲ್ಲಿ ಕಾಣಸಿಕ್ಕಿದ್ದು ಪಾಕ್ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ ನಲ್ಲಿ ನಡೆದಿದ್ದ ಭಾರತ-ಪಾಕ್ ಪಂದ್ಯದಲ್ಲಿ ಭಾರತ 89 ರನ್ ವಿಜಯವನ್ನಾಚರಿಸಿದ ಬಳಿಕ ಪಾಕ್ ಕ್ರಿಕೆಟಿಗರು ಶೀಶ ಕೆಫೆಯಲ್ಲಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಪಾಕ್ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಪತ್ನಿ ಸಾನಿಯಾ ಮಿರ್ಝಾ ಮತ್ತು ಪಾಕ್ ನಟಿ ವೀಣಾ ಮಲ್ಲಿಕ್ ಮಧ್ಯೆ ಟ್ವಿಟರ್ ಜಟಾಪಟಿ ನಡೆದಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಫೋಟೋ ಕುರಿತು ಟ್ವೀಟ್ ಮಾಡಿದ್ದ ವೀಣಾ ಮಲಿಕ್, ಈ ರೀತಿ ನೀನು ಮಾಡಿದ್ದು ಸರಿಯಲ್ಲ. ಕ್ರೀಡಾಪಟುಗಳಿಗೆ ಶೀಶ ಕೆಫೆ ಒಳ್ಳೆಯದಲ್ಲ. ನೀನೂ ಒಬ್ಬಳು ಕ್ರೀಡಾಪಟು, ಮಗುವಿನ ತಾಯಿ ಅನ್ನೋದನ್ನು ನೀನು ಅರಿತುಕೊಳ್ಳಬೇಕು' ಎಂದು ಬರೆದುಕೊಂಡಿದ್ದರು.

ಇದಕ್ಕೆ ಖಾರವಾಗೇ ಪ್ರತಿಕ್ರಿಯಿಸಿರುವ ಭಾರತದ ಟೆನಿಸ್ ತಾರೆ ಸಾನಿಯಾ, 'ವೀಣಾ, ನನ್ನ ಮಗುವನ್ನು ನಾನು ಶೀಶಾ ಕೆಫೆಗೆ ಕರೆದೊಯ್ದಿಲ್ಲ. ಆದರೂ ಇದು ನಿನಗಾಗಲೀ ಬೇರೆ ಯಾರಿಗಾಗಲೀ ಸಂಬಂಧಿಸಿದ ವಿಚಾರವೇ ಅಲ್ಲ. ಇದು ನನ್ನ ವೈಯಕ್ತಿಯ ವಿಚಾರ. ಪಾಕ್ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸಲು ನಾನೇನು ಅವರ ತಾಯಿಯಲ್ಲ, ಮೇಲ್ವಿಚಾರಕಿಯಲ್ಲ, ಡಯೆಟಿಷನ್ ಅಲ್ಲ' ಎಂದು ಬರೆದು ತಿರುಗೇಟು ನೀಡಿದ್ದಾರೆ.

ಅಂದ್ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಫೋಟೋದಲ್ಲಿ ಸಾನಿಯಾ ಮಿರ್ಝಾ, ಅವರ ಪತಿ-ಪಾಕ್ ಆಲ್ ರೌಂಡರ್ ಶೋಯೆಬ್ ಮಲಿಕ್, ಪಾಕ್ ಕ್ರಿಕೆಟಿಗರಾದ ವಹಾಬ್ ರಿಯಾಝ್ ಮತ್ತು ಇಮಾಮ್ ಉಲ್ ಹಕ್ ಕೂಡ ಇದಿದ್ದು ಕಾಣಿಸಿತ್ತು. ಈ ಬಗ್ಗೆ ಪಾಕ್ ಕ್ರಿಕೆಟ್ ಪ್ರಿಯರು ತಮ್ಮ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.

Story first published: Tuesday, June 18, 2019, 12:28 [IST]
Other articles published on Jun 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+