Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ಟೀಮ್ ಇಂಡಿಯಾಕ್ಕೆ ಆಡುತ್ತಾರೆ: ಕುಲದೀಪ್ ಯಾದವ್

I personally feel MS Dhoni should play for India says Kuldeep Yadav

ನವದೆಹಲಿ, ಮೇ 8: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಈಗಲೂ ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಇನ್ನೂ ಭಾರತದ ಪರ ಆಡಬಲ್ಲರು ಎಂದು ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ. ಆದರೆ ತನ್ನ ಭವಿಷ್ಯದ ಬಗ್ಗೆ ಅಂತಿಮವಾಗಿ ನಿರ್ಧರಿಸುವವರು ಧೋನಿ ಮಾತ್ರ ಎಂದೂ ಯಾದವ್ ನುಡಿದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತು ಆಘಾತ ಅನುಭವಿಸಿದ್ದಾಗ ಧೋನಿ ಕಡೇಯ ಸಾರಿ ಭಾರತ ತಂಡದಲ್ಲಿ ಆಡಿದ್ದರು. ಅದಾಗಿ ಧೋನಿ ಯಾವುದೇ ಪಂದ್ಯಗಳಲ್ಲಿ ಆಡಿಲ್ಲ.

ಹೀಗಾಗಿ ಧೋನಿ ಭವಿಷ್ಯದ ಬಗ್ಗೆ ಬೇರೆ ಬೇರೆ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಧೋನಿ ಇನ್ನು ಭಾರತ ತಂಡದಲ್ಲಿ ಆಡಲಾರರು, ಅವರು ಶೀಘ್ರ ನಿವೃತ್ತಿ ನೀಡುತ್ತಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಧೋನಿ ಭಾರತ ತಂಡದಲ್ಲಿ ಮತ್ತೆ ಆಡುತ್ತಾರೆ ಎಂದು ಚೇನಾಮನ್ ಕುಲದೀಪ್ ಹೇಳಿದ್ದಾರೆ.

'ನಾನು ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿವೃತ್ತಿಗೆ ಕಾಲ ಸಮೀಪವಾದಾಗ ಅದನ್ನು ಧೋನಿ ನಿರ್ಧರಿಸುತ್ತಾರೆ. ಧೋನಿ ಇವತ್ತಿಗೂ ಫಿಟ್ ಆಗಿದ್ದಾರೆ. ಧೋನಿ ಈಗಲೂ ಭಾರತ ತಂಡಕ್ಕಾಗಿ ಆಡುತ್ತಾರೆ ಅಂತ ವೈಯಕ್ತಿಕವಾಗಿ ಭಾವಿಸುತ್ತೇನೆ,' ಎಂದು ಯಾದವ್ ಅಭಿಪ್ರಾಯಿಸಿದ್ದಾರೆ.

Story first published: Friday, May 8, 2020, 18:30 [IST]
Other articles published on May 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+